Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಹಿಂಪಡೆಯಿರಿ : ಚಿತ್ರದುರ್ಗ ಟ್ರಕ್ ಅಸೋಸಿಯೇಷನ್ ಒತ್ತಾಯ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜೂನ್. 21 : ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿರುವುದನ್ನು ಖಂಡಿಸಿ ಜಿಲ್ಲಾ ಟ್ರಕ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಪೆಟ್ರೋಲ್-ಡೀಸೆಲ್ ಬೆಲೆ ಜಾಸ್ತಿಯಾಗಿರುವುದರಿಂದ ಟೈರ್ ಮತ್ತು ಬಿಡಿ ಭಾಗಗಳ ಬೆಲೆ ಏರಿಕೆಯಾಗಿದ್ದು, ಲಾರಿ ಮಾಲೀಕರ ಜೀವನ ದುಸ್ತರವಾಗಿದೆ. ವಿಎಲ್‍ಟಿ ಮತ್ತು ಪ್ಯಾನಿಕ್ ಬಟನ್ ಹೊರೆಯೂ ಲಾರಿ ಮಾಲೀಕರ ಮೇಲೆ ಹೇರಿದಂತಾಗಿದೆ. ಇದೆಲ್ಲದರ ಪರಿಣಾಮ ಸಾಗಾಣಿಕೆ ವೆಚ್ಚವು ದುಬಾರಿಯಾಗುತ್ತದೆ.

ರಸ್ತೆ ತೆರಿಗೆಯ ಮೇಲೆ ಮೂರರಷ್ಟು ಸೆಸ್ ಜಾಸ್ತಿಯಾಗಿದೆ. ಎಲ್ಲಾ ಹೆಚ್ಚುವರಿಗಳನ್ನು ಬಾಡಿಗೆ ರೂಪದಲ್ಲಿ ಪಡೆಯಲು ಲಾರಿ ಉದ್ಯಮ ನಡೆಸುತ್ತಿರುವ ಡಿಮಾಂಡ್ ಅಂಡ್ ಸಪ್ಲೈನಲ್ಲಿ ಸಾಧ್ಯವಾಗುವುದಿಲ್ಲ. ಲಾರಿ ಮಾಲೀಕರು ವಿಮುಖರಾಗುತ್ತಿರುವುದರಿಂದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡಲೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯುವಂತೆ ಜಿಲ್ಲಾ ಟ್ರಕ್ಕರ್ ಅಸೋಸಿಯೇಷನ್ ಅಧ್ಯಕ್ಷ ವಿಶ್ವನಾಥ್ ಒತ್ತಾಯಿಸಿದರು.

ಉಪಾಧ್ಯಕ್ಷ ಸುರೇಶ್ ಸಿಂಗನಾಳ್, ಅಬ್ದುಲ್ ಸತ್ತಾರ್, ಸಂತೋಷ್, ಅನ್ವರ್ ಬಿ. ಎಂ.ಎಸ್.ನಸ್ರುಲ್ಲಾ, ಸಲೀಂ, ಮುಜೀಬ್ ಈ ಸಂದರ್ಭದಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ಜೊತೆ ಮದುವೆ ಆದರೆ ತುಂಬಾ ಭಾಗ್ಯಶಾಲಿ ನಿಮ್ಮನ್ನು ತೂಗುಯ್ಯಾಲೆಲಿ ತೂಗುವರು

ಈ ರಾಶಿಯವರ ಜೊತೆ ಮದುವೆ ಆದರೆ ತುಂಬಾ ಭಾಗ್ಯಶಾಲಿ ನಿಮ್ಮನ್ನು ತೂಗುಯ್ಯಾಲೆಲಿ ತೂಗುವರು, ಶುಕ್ರವಾರ- ರಾಶಿ ಭವಿಷ್ಯ ಜುಲೈ-5,2024 ಸೂರ್ಯೋದಯ: 05:50, ಸೂರ್ಯಾಸ್ತ : 06:50 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ

ಬಾಹ್ಯಾಕಾಶಕ್ಕೆ ಪ್ರಧಾನಿ ಮೋದಿ ? ಗಗನ್ ಯಾನ್ ಮಿಷನ್ ಬಗ್ಗೆ ಇಸ್ರೋ ಅಧ್ಯಕ್ಷರು ಹೇಳಿದ್ದೇನು ?

ಸುದ್ದಿಒನ್ : ಮಾನವರನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ‘ಗಗನ್ ಯಾನ್’ ಮಿಷನ್ ಲಭ್ಯವಾದ ನಂತರ ಪ್ರಧಾನಿ ನರೇಂದ್ರ ಮೋದಿ ಕೂಡ ಅಲ್ಲಿಗೆ ಹೋಗಬಹುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದರು. ನಮ್ಮ

5 ತಿಂಗಳ ಜೈಲುವಾಸದ ನಂತರ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೆನ್ ಮೂರನೇ ಬಾರಿಗೆ ಪ್ರಮಾಣ ವಚನ

ಸುದ್ದಿಒನ್ : ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಮಂತ್ ಸೊರೆನ್ ಗುರುವಾರ ಸಂಜೆ ಮತ್ತೊಮ್ಮೆ ರಾಜ್ಯದ 13 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮುನ್ನ ಚಂಪೈ ಸೊರೆನ್ ಬುಧವಾರ ಸಿಎಂ

error: Content is protected !!