Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದರ್ಶನ್ ಕಸ್ಟಡಿ ಅಂತ್ಯ : ಜೈಲಾ..? ಬೇಲಾ..? ಲಾಯರ್ ಹೇಳಿದ್ದೇನು..?

Facebook
Twitter
Telegram
WhatsApp

 

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಕಳೆದ ಕೆಲ ದಿನಗಳಿಂದ ಜೈಲಿನಲ್ಲಿದ್ದುಕೊಂಡು ಮುದ್ದೆ ಮುರಿಯುತ್ತಿದ್ದಾರೆ. ಅವರ ಗ್ಯಾಂಗ್ ಕೂಡ ಅಲ್ಲಿಯೇ ಇದೆ. ಅಶ್ಲೀಲ ಮೆಸೇಜ್ ಕಳುಹಿಸಿದ್ದವನನ್ನ ಚಿತ್ರ ವಿಚಿತ್ರವಾಗಿ ಕೊಂದಿದ್ದಾರೆ. ಈ ಕೇಸನ್ನು ರಾಜ್ಯ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಸದ್ಯ ಒಬ್ಬೊಬ್ಬರನ್ನೇ ಬಂಧಿಸಿ, ತನಿಖೆ ನಡೆಸುತ್ತಿದೆ. ದರ್ಶನ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಆದರೆ ಪೊಲೀಸರು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.

 

ಈ ಬಗ್ಗೆ ದರ್ಶನ್ ವಕೀಲರಾದ ಅನಿಲ್ ಬಾಬು ಮಾತನಾಡಿ, ಕೋರ್ಟ್ ನಿರ್ದೇಶನದ ಪ್ರಕಾರ ಇಂದು ಸಂಜೆ 5 ಗಂಟೆಯ ಒಳಗೆ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಬೇಕು. ನಮ್ಮ ಪ್ರಕಾರ ಇವತ್ತು ಮಧ್ಯಾಹ್ಬ ಹಾಜರು ಮಾಡಿಯೇ ಮಾಡುತ್ತಾರೆ. ಅವರು ಇನ್ನು ಕಸ್ಟಡಿಗೆ ಕೇಳುತ್ತಾರೋ..? ಇಲ್ಲವೋ ಅನ್ನುವುದರ ಬಗ್ಗೆ ನನಗೂ ಗೊತ್ತಿಲ್ಲ. ಮಧ್ಯಾಹ್ನ ಪೊಲೀಸ್ ಅಧಿಕಾರಿಗಳ ನಿರ್ಧಾರವನ್ನು ನೋಡಿ ನಾವೂ ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಧಾರ ಮಾಡುತ್ತೇವೆ. ಬಹುತೇಕ ತನಿಖೆ ಮುಗಿದಿರಬಹುದು. ಈಗ ಬೇಲ್ ಹಾಕಬೇಕೋ..? ಬೇಡವೋ ಅನ್ನೋದನ್ನ ನಿರ್ಧಾರ ಮಾಡಿಲ್ಲ.

ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಚರ್ಚೆ ಮಾಡಿ ಬೇಲ್ ಗೆ ಅರ್ಜಿ ಹಾಕುತ್ತೇವೆ. ಇದಕ್ಕೆ ಒಂದು ವಾರಗಳ ಸಮಯ ಬೇಕಾಗುತ್ತದೆ. ದರ್ಶನ್ ಜೊತೆಗೆ ಮಾತುಕತೆ ಮಾಡಿಕೊಂಡು ಬಂದಿದ್ದೇನೆ. ಅವರ ಆರೋಗ್ಯ ಚೆನ್ನಾಗಿದೆ. ಡಿಎನ್‌ಎ ಟೆಸ್ಟ್ ಗೆ ಕೋರ್ಟ್ ಅನುಮತಿ ಬೇಕು. ಸ್ಯಾಂಪಲ್ ಪಡೆಯಲು ಬೇಕಾಗುತ್ತದೆ. ಆದರೆ ಪೊಲೀಸರು ತಗೊಂಡಿದ್ದಾರಾ ಇಲ್ವಾ ಎಂಬುದು ಗೊತ್ತಿಲ್ಲ. ಅದೆಲ್ಲಾ ಚಾರ್ಜ್ ಶೀಟ್ ನಲ್ಲಿ ಇರುತ್ತದೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮನೆಗೆ ಮಗನಂತಿದ್ದ.. ಮಕ್ಕಳಿಲ್ಲದ ಕೊರಗು ಅವನಿಗೆ ಕಾಡುತ್ತಿತ್ತು : ಮೃತ ಅಳಿಯನ ಬಗ್ಗೆ ಬಿಸಿ ಪಾಟೀಲ್ ಹೇಳಿದ್ದೇನು..?

ದಾವಣಗೆರೆ: ಇಂದು ಮಾಜಿ ಸಚಿವ ಬಿ.ಸಿ.ಪಾಟೀಲ್ 40 ವರ್ಷದ ಅಳಿಯ ಪ್ರತಾಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಮೃತ ಅಳಿಯನ ಬಗ್ಗೆ ಮಾತನಾಡಿರುವ ಬಿ.ಸಿ.ಪಾಟೀಲ್, ಮನೆಗೆ ಮಗನಂತಿದ್ದ. ಮನೆಯ ಎಲ್ಲಾ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿದ್ದ ಎಂದಿದ್ದಾರೆ.

ಚಿತ್ರದುರ್ಗ | 8 ಲಕ್ಷ ಮೌಲ್ಯದ 80 ಮೊಬೈಲ್ ಫೋನ್ ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಿದ ಪೊಲೀಸರು…!

ಸುದ್ದಿಒನ್, ಚಿತ್ರದುರ್ಗ, ಜುಲೈ.08 : ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಕಳುವಾಗಿದ್ದ 8 ಲಕ್ಷ ರೂಪಾಯಿ ಮೌಲ್ಯದ 80 ಮೊಬೈಲ್ ಫೋನ್​ಗಳನ್ನು ಇಂದು (ಜುಲೈ. 08) ಪ್ರಾಪರ್ಟಿ ರಿಟರ್ನ್‌ ಪರೇಡ್​ನಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ನಗರದ ಜಿಲ್ಲಾ

ಬಿಸಿಸಿಐನಿಂದ 125 ಕೋಟಿ ಘೋಷಣೆ : ವಿಶ್ವಕಪ್ ನ ಪ್ರತಿ ಆಟಗಾರರಿಗೆ ಸಿಕ್ಕಿದ್ದೆಷ್ಟು ಕೋಟಿ..?

  ವಿಶ್ವಕಪ್ ಮುಗಿದಿದೆ.. ಟೀಂ ಇಂಡಿಯಾ ಗೆಲುವು ಕಂಡಿದೆ.. ಇಡೀ ದೇಶವೇ ಖುಷಿಪಟ್ಟು, ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದರ ನಡುವೆ ಟೀಂ ಇಂಡಿಯಾ ಗೆದ್ದಾಗ ಬಿಸಿಸಿಐ ಕಡೆಯಿಂದ 125 ಕೋಟಿ ಬಹುಮಾನ ಘೋಷಣೆಯಾಗಿತ್ತು. ಈಗ

error: Content is protected !!