ಚಿತ್ರದುರ್ಗ. ಜೂನ್.19: ಸಾರ್ವಜನಿಕ ಗ್ರಂಥಾಲಯ ಇಲಾಖೆ ಅಡಿಯಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಾದ ಬೆಂಗಳೂರು, ಮೈಸೂರು ವಿಭಾಗದ ಮಂಗಳೂರು, ಬೆಳಗಾವಿ ವಿಭಾಗದ ಧಾರವಾಡ ಮತ್ತು ಕಲಬುರಗಿ ವಿಭಾಗಗಳಲ್ಲಿ ಆರು ತಿಂಗಳ ಅವಧಿಯ ಗ್ರಂಥಾಲಯ ವಿಜ್ಞಾನ ತರಬೇತಿ ಶಾಲೆಗಳನ್ನು ನಡೆಸಲಾಗುತ್ತಿದೆ.
ಅದಕ್ಕೆ ಸಂಬಂಧಪಟ್ಟಂತೆ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ 40%, ಎಸ್.ಸಿ, ಎಸ್.ಟಿ ಗೆ 35% ರಷ್ಟು ಅಂಕ ಪಡೆದ ಅಭ್ಯರ್ಥಿಗಳು ಈ ತರಬೇತಿಗೆ ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಲು ಜುಲೈ 19 ಕೊನೆಯ ದಿನವಾಗಿದೆ.
ಹಾಲಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಯ ‘ಡಿ’ ದರ್ಜೆಯ ಗ್ರಂಥಾಲಯ ಸಹವರ್ತಿಗಳು ಸಂಬಂಧಪಟ್ಟ ಉಪನಿರ್ದೇಶಕರು, ಮುಖ್ಯ ಗ್ರಂಥಾಲಯಾಧಿಕಾರಿಗಳ ಮುಖಾಂತರ ಹಾಗೂ ಗ್ರಾಮ ಪಂಚಾಯತಿ ಗ್ರಂಥಾಲಯ ಮೇಲ್ವಿಚಾರಕರು ಸಂಬಂಧಪಟ್ಟ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಮುಖಾಂತರ ಮತ್ತು ಇತರ ಸಂಸ್ಥೆಯಿಂದ ಬರುವ ಅಭ್ಯರ್ಥಿಗಳು ತಮ್ಮ ಸಂಸ್ಥೆಯ ಮುಖ್ಯಸ್ಥರ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಯ ಜೊತೆಗೆ ಪಿಯುಸಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಸೇವಗೆ ಸೇರಿದ ದಿನಾಂಕ, ವೇತನ ಪ್ರಮಾಣ ಪತ್ರ, ನಡವಳಿಕೆಯ ಪ್ರಮಾಣ ಪತ್ರಗಳ ನಕಲು ಪ್ರತಿಗಳನ್ನು ಲಗತ್ತಿಸಬೇಕು. ಸಾಮಾನ್ಯ ಅಭ್ಯರ್ಥಿಗಳು ಪಿಯುಸಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಮೀಸಲಾತಿ ಹೊಂದಿದ್ದಲ್ಲಿ ಕನ್ನಡ ಮಾಧ್ಯಮ, ಗ್ರಾಮೀಣ ಮಾಧ್ಯಮ, ಮಾಜಿ ಸೈನಿಕ, 371ಎ ಪ್ರಮಾಣ ಪತ್ರಗಳ ದೃಡೀಕೃತ ನಕಲು ಪ್ರತಿಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ರಾಜ್ಯ ಕೇಂದ್ರ ಗ್ರಂಥಾಲಯ, ಕಬ್ಬನ್ ಉದ್ಯಾನವನ ಉಪನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 080-22212128, ಧಾರವಾಡ ನಗರ ಕೇಂದ್ರ ಗ್ರಂಥಾಲಯ, ಡಿ.ಸಿ.ಕಚೇರಿ ಆವರಣ ಉಪನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 0836-2442465 ಗೆ ಸಂಪರ್ಕಿಸಬಹುದು ಎಂದು ಚಿತ್ರದುರ್ಗ ನಗರ ಕೇಂದ್ರ ಮುಖ್ಯ ಗ್ರಂಥಾಲಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.