Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದರ್ಶನ್ ಅಭಿಮಾನಿಗಳಿಂದ ಒಳ್ಳೆ ಹುಡುಗ ಪ್ರಥಮ್ ಜೀವ ಬೆದರಿಕೆ..!

---Advertisement---

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಜೈಲು ಪಾಲಾಗಿದೆ. ದಿನೇ ದಿನೇ ಕೇಸು ಸ್ಟ್ರಾಂಗ್ ಆಗ್ತಾ ಇದ್ದು, ಹೊರಗೆ ಬರುವುದು ಅನುಮಾನವೇ ಸರಿ. ಇದರ ನಡುವೆ ದರ್ಶನ್ ಫ್ಯಾನ್ಸ್ ಒಳ್ಳೆ ಹುಡುಗ ಪ್ರಥಮ್ ಅವರಿಗೆ ದರ್ಶನ್ ಫ್ಯಾನ್ಸ್ ಕೊಲೆ ಬೆದರಿಕೆ ಹಾಕಿದ್ದಾರಂತೆ. ಈ ಬಗ್ಗೆ ಒಳ್ಳೆ ಹುಡುಗ ಪ್ರಥಮ್ ಮಾತನಾಡಿದ್ದಾರೆ.

‘ಏಯ್ ನಿನ್ ತಲೆ ತೆಗಿತೀನಿ ಅಂತ ಎರಡೂವರೆ ರಾತ್ರಿಗೆ ಫೋನ್ ಮಾಡ್ತಾರೆ. ಮಲಗಿದ್ರು ಪರವಾಗಿಲ್ಲ. ಎದ್ದೇಳಿಸಿ ಅವರಿಗೆ ಫೋನ್ ಕೊಡಿ ಅಂತಾರೆ. ಆಫೀಸ್ ಫೋನ್ ಎಂದರೆ ಅವೆಲ್ಲಾ ಗೊತ್ತಿಲ್ಲ ಎದ್ದೇಳಿಸಿ ಪ್ರಥಮ್ ಗೆ ಫೋನ್ ಕೊಡಿ ಅಂತಾರೆ. ಎರಡೂವರೆ ರಾತ್ರಿಯಲ್ಲಿ ಪೆದ್ದನ ಥರ ಫೋನ್ ಮಾಡ್ತಾನೆ. ದರ್ಶನ್ ಅಭಿಮಾನಿಗಳಿಗೆ ಹೇಳೋದೇನು ಗೊತ್ತಾ. ಕಾನೂನು, ಕಾನೂನಿನ ರೀತಿಯಲ್ಲಿ ಕೆಲಸ ಮಾಡುತ್ತದೆ. ಪೊಲೀಸರು ಪೊಲೀಸರ ರೀತಿ ಕೆಲಸ ಮಾಡುತ್ತಾರೆ. ಲಾಯರ್ ಕೋರ್ಟ್ ನಲ್ಲಿ ಕೆಲಸ ಮಾಡುತ್ತಾರೆ. ಮಾಧ್ಯಮದವರು ಮೈಕ್ ಹಿಡಿದು ಕೆಲಸ ಮಾಡುತ್ತಾರೆ. ನೀವೂ ಆರಾಮವಾಗಿ ಇದ್ದುಕೊಂಡು, ಕೆಲಸ ಮಾಡಿ, ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದಿದ್ದಾರೆ.

ಅಂದಾಭಿಮಾನಿಗಳು ಅಲ್ಲಿ ಕೂತು ರೋಡ್ ಬ್ಲಾಕ್ ಮಾಡ್ತಾರೆ. ನಾಲ್ಕು ತದ್ಕಿ ಅಂದಾಭಿಮಾನಿಗಳನ್ನು ಕಳುಹಿಸಿ ಎಂದು ಹೇಳಿದೆ. ಆದರೆ ಇವರಿಗ್ಯಾಕೆ ಕೋಪ ಬರ್ತಾ ಇದೆ ಎಂಬುದು ಮಾತ್ರ ಗೊತ್ತಿಲ್ಲ ಎಂದು ಒಳ್ಳೆ ಹುಡುಗ ಪ್ರಥಮ್ ಕೂಗಾಡಿದ್ದಾರೆ. ದರ್ಶನ್ ಅವರ ಅಭಿಮಾನಿಗಳಿಗೆ ಕಿವಿ ಮಾತನ್ನು ಹೇಳಿದ್ದಾರೆ. ಸದ್ಯ ದರ್ಶನ್ ಅಂಡ್ ಗ್ಯಾಂಗ್ ಕಂಬಿ ಹಿಂದೆ ನಿಂತು ಎಣಿಕೆ ಕೆಲಸ ಮಾಡುತ್ತಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment