Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

100 ಚಿತ್ರದಲ್ಲಿದೆ ಊಹೆಗೂ ಮೀರಿದ ಸೈಬರ್ ಕ್ರೈಂ ಲೋಕದ ಭಯಾನಕ ಮುಖ

Facebook
Twitter
Telegram
WhatsApp

ಈಗಾಗಲೇ ರಮೇಶ್ ಅರವಿಂದ್ ಅವರ ನಿರ್ದೇಶನದ ರುಚಿ ಅನುಭವಿಸಿರೋ ಪ್ರೇಕ್ಷಕರಿಗೆ, ಮತ್ತಷ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡಿರುವ ಚಿತ್ರ 100. ಚಿತ್ರದ ಟ್ರೇಲರ್ ಪೋಸ್ಟರ್ ಹಾಗೂ ರಮೇಶ್ ಅರವಿಂದ್ ಅವರೇ ಚಿತ್ರದ ಬಗೆಗಿನ ಸೂಕ್ಷ್ಮ ವಿಚಾರಗಳಲ್ಲಿ ಕೆಲವನ್ನು ರಿವೀಲ್ ಮಾಡಿದ್ದು ಸಿನಿಮಾ ಮೇಲಿನ ಕುತೂಹಲಕ್ಕೆ ಕಾರಣವಾಗಿದೆ.


ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರಿಗೂ ಅನಿವಾರ್ಯದಂತೆ ಕಾಡುತ್ತಿರುವ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳ ಬಗ್ಗೆ ಪ್ರಧಾನವಾಗಿ ಈ ಚಿತ್ರದಲ್ಲಿ ಗಮನ ಹರಿಸಲಾಗಿದೆ. ಇಡೀ ಚಿತ್ರದ ಕಥೆಯ ಕೇಂದ್ರ ಬಿಂದುವೇ ಅದು. ಸೋಶಿಯಲ್ ಮೀಡಿಯಾಗಳು ಎಲ್ಲರ ಬದುಕಲ್ಲಿಯೂ ಎಂಟ್ರಿಯಾಗಿ ಬಿಟ್ಟಿವೆ. ಆದರೆ ಇದೇ ಸೋಶಿಯಲ್ ಮೀಡಿಯಾದಿಂದ ನಮ್ಮ ಬದುಕಿಗೆ ಎಂಟ್ರಿ ಕೊಟ್ಟಿರೋ ಅನಾಹುತಗಳ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. ಅತಿಯಾಗ್ತಿರೋ ಇವುಗಳ ಬಳಕೆಯಿಂದ ಸ್ವಲ್ಪವೇ ಯಾಮಾರಿದರೂ ಸಾಕು ಇಡೀ ಕುಟುಂಬದ ನೆಮ್ಮದಿಯೇ ಮಣ್ಣು ಪಾಲಾಗಿ ಬಿಡುತ್ತದೆ. ಅಂಥಾ ಅನಾಹುತಗಳ ಸುತ್ತ ಘಟಿಸುವ ಈ ಚಿತ್ರದ ಕಥೆ ಎಲ್ಲ ರೀತಿಯಿಂದಲೂ ಜನರನ್ನು ಅಲರ್ಟ್ ಆಗಿಸೋದ್ರ ಜೊತೆಗೆ ಸಂದೇಶವನ್ನು ರವಾನಿಸ ಹೊರಟಿದೆ.

ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳಿಂದಾಗೋ ಅನಾಹುತಗಳ ವರದಿಗಳು ಕಣ್ಮುಂದೆ ಸುಳಿದಾಡುತ್ತವೆ. ಇವುಗಳ ಬಗ್ಗೆ ಅರಿವಿದೆ ಎನ್ನುವವರಿಗೆ 100ರಲ್ಲಿ ಅದನ್ನೆಲ್ಲ ಮೀರಿದ ಮತ್ತೇನೋ ಸಂಗತಿ ಇದೆ. ಸಾಮಾಜಿಕ ಸಂದೇಶ ಸಾರಲು ಹೊರಟ ಸಿನಿಮಾಗಳು ಬೇರ‍್ಯಾವುದೋ ದಿಕ್ಕಿನತ್ತ ಮುಖಮಾಡಿ ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾಗುತ್ತಿರುವ ಉದಾಹರಣೆಗಳಿವೆ. ಆದರೆ ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿಯೇ ಹೇಳಬೇಕಾದುದನ್ನು ಹೇಳಿ, ಮುಟ್ಟಬೇಕಾದ ಅಂಶಗಳನ್ನು ಪ್ರೇಕ್ಷಕರ ಮನಮುಟ್ಟುವಂತೆ ರೂಪಿಸಲು ರಮೇಶ್ ಅರವಿಂದ್‌ರಂಥಾ ನಿರ್ದೇಶಕರಿಂದ ಮಾತ್ರವೇ ಸಾಧ್ಯ.

ಪ್ರೇಕ್ಷಕರನ್ನು ಸೀಟಿನಂಚಿಗೆ ತಂದು ಕೂರಿಸುವಂಥಾ ಥ್ರಿಲ್ಲರ್ ಅಂಶಗಳೊಂದಿಗೆ, ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ರೂಪುಗೊಂಡ 100 ಸಿನಿಮಾ ಅದರ  ಜೊತೆಗೆ ಪ್ರೇಕ್ಷಕರನ್ನು ಕಣ್ತೆರೆಸುವಂಥಾ ಕಂಟೆಂಟುಗಳನ್ನು  ವಿವರಿಸಲಿದೆ. ಕುಟುಂಬದ ಜವಾಬ್ದಾರಿ ಹೊತ್ತಿರೋ ವ್ಯಕ್ತಿಯಾಗಿ ಸಮಾಜವನ್ನ ಕಾಪಾಡೋ ಅಧಿಕಾರಿಯಾಗಿ, ಅವೆರಡು ಜವಾಬ್ದಾರಿಗಳ ನಡುವೆ ಹೊಯ್ದಾಡೋ ಮನಸಿನ ಕಥೆಯನ್ನು ಥ್ರಿಲ್ಲರ್ ಮಾದರಿಯಲ್ಲಿ ಹೇಳಲಾಗಿದೆ ಫ್ಯಾಮಿಲಿ ಥ್ರಿಲ್ಲರ್, ಸೈಬರ್ ಕ್ರೈಂ ಕಥಾನಕವನ್ನು ಹೊಂದಿರುವ ಈ ಚಿತ್ರದಲ್ಲಿ ರಚಿತಾ ರಾಮ್, ಪೂರ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಪ್ರಕಾಶ್ ಬೆಳವಾಡಿ, ಶೋಭ್ ರಾಜ್, ಬೇಬಿ ಸ್ಮಯಾ, ರಾಜು ತಾಳಿಕೋಟೆ ಸೇರಿದಂತೆ ಹಲವು ಕಲಾವಿದರ ತಾರಾಬಳಗವಿದೆ.

ರಮೇಶ್ ಅರವಿಂದ್ ಇದೇ ಮೊದಲ ಬಾರಿಗೆ ಮೈ ನವಿರೇಳಿಸುವ ಹೈ ವೋಲ್ಟೇಜ್ ಸಾಹಸ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಸಾಹಸ ನಿರ್ದೇಶಕರು ಈ ಚಿತ್ರಕ್ಕಾಗಿ ಕಾರ್ಯನಿರ್ವಹಿಸಿದ್ದು, ಒಟ್ಟು ನಾಲ್ಕು  ಹೈ ವೋಲ್ಟೇಜ್ ಸಾಹಸ ಸನ್ನಿವೇಶಗಳು ಚಿತ್ರದಲ್ಲಿವೆ. ಜಾಲಿ ಬಾಸ್ಟಿನ್, ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ.

ಸತ್ಯ ಹೆಗಡೆ ಛಾಯಾಗ್ರಹಣ, ಶ್ರೀನಿವಾಸ್ ಕಲಾಲ್ ಸಂಕಲನ, ಗುರು ಕಶ್ಯಪ್ ಸಂಭಾಷಣೆ ಚಿತ್ರಕ್ಕಿದ್ದು, ರವಿ ಬಸ್ರೂರು ಸಂಗೀತ ನಿರ್ದೇಶನ ಸಖತ್ ಥ್ರಿಲ್ ಆಗಿಸೋಕೆ ಸಿದ್ದವಾಗಿದೆ.  ಸೂರಜ್ ಪ್ರೊಡಕ್ಷನ್ ಬ್ಯಾನರ್ ನಡಿ ಎಂ.ರಮೇಶ್ ರೆಡ್ಡಿ ಮತ್ತು ಉಮಾ ಚಿತ್ರವನ್ನು ನಿರ್ಮಿಸಿದ್ದು ನವೆಂಬರ್ 19ಕ್ಕೆ 100 ಸಿನಿಮಾ ತೆರೆಗೆ ಬರಲಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಲೋಕಾಯುಕ್ತ ಬಲೆಗೆ ಬಿದ್ದ ಬಯಲು ಸೀಮೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ

ಸುದ್ದಿಒನ್, ಚಿತ್ರದುರ್ಗ, ಮೇ. 06  : ಗುತ್ತಿಗೆದಾರನ  ಕಾಮಗಾರಿ ಬಿಲ್ ಪಾವತಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಚಿತ್ರದುರ್ಗ ಬಯಲು ಸೀಮೆಯ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಬಸವರಾಜಪ್ಪ ನಾಲ್ಕು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ

ಕರ್ನಾಟಕದಲ್ಲಿಯೇ ತೀರ್ಥಹಳ್ಳಿಯಲ್ಲಿ ಬೆಳೆಯುವ ಅಡಿಕೆ ಬೆಸ್ಟ್ : ಸಂಶೋಧನೆಯಲ್ಲಿ ಬಯಲಾಯ್ತು ಸತ್ಯ

  ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅಡಿಕೆಯನ್ನು ಬೆಳೆಯುತ್ತಾರೆ. ಆದರೆ ರಾಜ್ಯದೆಲ್ಲೆಡೆ ಆಲ್ಮೋಸ್ಟ್ ಎಲ್ಲಾ ಜಿಲ್ಲೆಯಲ್ಲೂ ಅಡಿಕೆ ತೋಟವನ್ನು ಮಾಡಿರುತ್ತಾರೆ. ಆದರೆ ಅಡಿಕೆಯ ಗುಣಮಟ್ಟದ ವಿಚಾರಕ್ಕೆ ಬಂದರೆ ತೀರ್ಥಹಳ್ಳಿಯ ಅಡಿಕೆ ಉತ್ತಮ ಎನ್ನಲಾಗುತ್ತದೆ. ಕೃಷಿ

ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆ ಬಲು ದುಬಾರಿ.. ಏರುತ್ತಲೆ ಇದೆ ದರ..!

ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆ ಬಲು ದುಬಾರಿ.. ಏರುತ್ತಲೆ ಇದೆ ದರ..! ಬಂಗಾರ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಬಂಗಾರವನ್ನು ತೆಗೆದುಕೊಳ್ಳಬೇಕೆಂದು ಎಲ್ಲರಿಗೂ ಆಸೆ‌. ಆದರೆ ಇತ್ತಿಚಿನ ದಿನಗಳಲ್ಲಿ ಬಂಗಾರವನ್ನು ಮಧ್ಯಮವರ್ಗದವರು ಮುಟ್ಟುವುದಕ್ಕಾದರೂ ಸಾಧ್ಯವ..?

error: Content is protected !!