Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆದಿಕರ್ನಾಟಕ ಹಾಸ್ಟೆಲ್ ಜಾಗದ ನೋಂದಣಿ ರದ್ದು ಪಡಿಸಿ :ನಿವೃತ್ತ ತಹಶೀಲ್ದಾರ್ ಮಲ್ಲಿಕಾರ್ಜನ್

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ,  ಜೂ. 17 :  ನಗರದ ಬಿ.ಡಿ.ರಸ್ತೆಯ ಸಮಾಜಕಲ್ಯಾಣ ಇಲಾಖೆ ಪಕ್ಕದ ಆದಿಕರ್ನಾಟಕ ಹಾಸ್ಟೆಲ್ ಹೆಸರಿನ ಜಾಗವನ್ನು ದುರುಪಯೋಗ ಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ಆನಧಿಕೃತವಾಗಿ ಜನಾಂಗದವರ ಗಮನಕ್ಕೆ ಬಾರದಂತೆ ನೊಂದಣಿಯನ್ನು ಮಾಡಿಸಿದ್ದು ಈ ಕೂಡಲೇ ನೊಂದಣಿಯನ್ನು ರದ್ದು ಪಡಿಸುವಂತೆ ಜಿಲ್ಲಾಡಳಿತವನ್ನು ನಿವೃತ್ತ ತಹಶೀಲ್ದಾರ್ ಮಲ್ಲಿಕಾರ್ಜನ್ ಒತ್ತಾಯಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು 1956-57ನೇ ಸಾಲಿನಲ್ಲಿ ಅಂದಿನ ಮೈಸೂರು ಸರ್ಕಾರವು ಎಲ್ಲಾ ಜನಾಂಗದವರಿಗೆ ಯಾವುದೇ ತಾರತಮ್ಯವಿಲ್ಲದಂತೆ ಜನಸಂಖ್ಯೆ ಮತ್ತು ಮೀಸಲು ಆಧಾರದ ಮೇಲೆ ಪ್ರತಿಯೊಂದು ಜಾತಿಯವರ ಮಕ್ಕಳ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಎಕರೆವಾರು ಭೂ ಪ್ರದೇಶವನ್ನು ಶಾಲಾ-ಕಾಲೇಜು, ವಸತಿ ನಿಲಯ, ಹಾಗೂ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿಕೊಂಡು ಅಭಿವೃದ್ಧಿ ಹೊಂದಲಿ ಎನ್ನುವ ದೃಷ್ಟಿಯಿಂದ ಮಂಜೂರು ಮಾಡಿದ್ದು, ಆ ಅವಧಿಯಲ್ಲಿ ಚಿತ್ರದುರ್ಗ ಜಿಲ್ಲೆಯ ದಾವಣಗೆರೆ, ಹರಿಹರ, ಜಗಳೂರು ಸೇರಿ 9 ತಾಲ್ಲೂಕುಗಳನ್ನು ಒಳಗೊಂಡ ಜಿಲ್ಲೆಯಾಗಿದ್ದು, ಆ ಅವಧಿಯಲ್ಲಿ ದಾವಣಗೆರೆಯ ಶಾಸಕರು ಆದ ಜಿ.ದುಗ್ಗಪ್ಪನವರು ಈ ಜನಾಂಗದ ಮುಖಂಡರಾಗಿದ್ದ ಹಿನ್ನೆಲೆಯಲ್ಲಿ ಚಿತ್ರದುರ್ಗ ನಗರದ ಮಧ್ಯಭಾಗದ ಬಿ.ಡಿ.ರಸ್ತೆಯಲ್ಲಿ ಸುಮಾರು 2 ಎಕರೆಯಷ್ಟು ಪ್ರದೇಶವನ್ನು ಆದಿಕರ್ನಾಟಕ ಹಾಸ್ಟೆಲ್ ಹೆಸರಿಗೆ ಮಂಜೂರು ಮಾಡಲಾಗಿತ್ತು.

ಆ ಜಾಗದಲ್ಲಿ ದಿವಂಗತ ಜಿ.ದುಗ್ಗಪ್ಪನವರ ಕುಟುಂಬಕ್ಕೆ ಸೇರಿದ ಕೆಲ ವ್ಯಕ್ತಿಗಳು ಈ ಜನಾಂಗದವರಿಗಾಗಿ ಯಾವುದೇ ವಾಣಿಜ್ಯ ಸಂಕೀರ್ಣ, ಸಮುದಾಯ ಭವನವನ್ನು ನಿರ್ಮಿಸದೇ ತಮ್ಮ ಕುಟುಂಬದ ಸ್ವಾರ್ಥದ ಹಿತಕ್ಕಾಗಿ 1974-75ನೇ ಸಾಲಿನಲ್ಲಿ ಈ ಜನಾಂಗಕ್ಕೆ ಸೇರಿದ ಆದಿ ಕರ್ನಾಟಕ ಹಾಸ್ಟೆಲ್ ಜಾಗದಲ್ಲಿ  ಶ್ರೀ ಕಸ್ತೂರಿ ಬಾ ವಿದ್ಯಾಭಿವೃದ್ಧಿ ಸಂಸ್ಥೆಯನ್ನು ನೋಂದಾಯಿಸಿಕೊಂಡು ಕೆಲವು ವರ್ಷಗಳ ಕಾಲ ಹಾಸ್ಟೇಲ್‍ನ್ನು ನಡೆಸಿ ಸರ್ಕಾರದಿಂದ ಲಕ್ಷಾಂತರ ರೂ.ಗಳ ಕಟ್ಟಡ ನಿರ್ಮಾಣಕ್ಕಾಗಿ ಅನುದಾವನ್ನು ಪಡೆದು ಕಾಲ ಕ್ರಮೇಣ ಸಂಸ್ಥೆಯನ್ನು ನಡೆಸದೆ ನಿಲ್ಲಿಸಿದ್ದರಿಂದ ಈಗ ಸದರಿ ಪ್ರದೇಶವು ವಿಷಜಂತುಗಳ ತಾಣವಾಗಿರುತ್ತೆ. ಆದರೆ ಕಸೂರಿ ಭಾ ವಿದ್ಯಾಭಿವೃದ್ಧಿ ಸಂಸ್ಥೆಯ ಗೌರವ ಕಾರ್ಯದಶಿಯವರಾದ ಡಾ: ಜಿ.ಡಿ.ರಾಘವನ್‍ರವರು ತಮ್ಮ ರಾಜಕೀಯ ಬೆಂಬಲ, ಹಣಬೆಂಬಲ ಮತ್ತು ಮಾಜಿ ಸಚಿವರ ಬೆಂಬಲ ಪಡೆದು “ಆದಿಕರ್ನಾಟಕ ಹಾಸ್ಟೆಲ್” ಹೆಸರಿನ ಆಸ್ತಿಯನ್ನು ತಮ್ಮ ವಿದ್ಯಾಸಂಸ್ಥೆಯ ಹೆಸರಿಗೆ ಸಂಪೂರ್ಣವಾಗಿ ವರ್ಗಾಯಿಸಿಕೊಂಡಿದ್ದಾರೆ.

ಈ ಜನಾಂಗದ ಮುಖಂಡರು ಚಿತ್ರದುರ್ಗ ನಗರಸಭೆ ಆಯುಕ್ತರಲ್ಲಿ ಮುಕ್ತ ಹಾಗೂ ಮೂಲ ದಾಖಲಾತಿಗಳೊಂದಿಗೆ ಚರ್ಚಿಸಿ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಪುನಃ ಸದರಿ ಆಸ್ತಿಯ ಖಾತೆಯನ್ನು “ಆದಿಕರ್ನಾಟಕ ಹಾಸ್ಟೆಲ್” ಹೆಸರಿಗೆ ಮರು ಖಾತೆ ಮಾಡಿದ್ದು, ವಿದ್ಯಾಸಂಸ್ಥೆಯ ಮಂಡಳಿಗೆ ಹಿನ್ನೆಡೆ ಉಂಟಾಗಿದ್ದರಿಂದ ಮಾಜಿ ಸಚಿವರೊಂದಿಗೆ ಷಾಮೀಲಾಗಿ ಮತ್ತು ಸಂಘ ಸಂಸ್ಥೆಯ ಬಗ್ಗೆ ಕನಿಷ್ಠ ಪ್ರಾಥಮಿಕ ಜ್ಞಾನವಿಲ್ಲದ ತನ್ನ ಸಹಚರರು ಆಪ್ತರನ್ನು ಸೇರಿಸಿಕೊಂಡು 9 ಜನ ಸಮಿತಿಯನ್ನು ರಚನೆ ಮಾಡಿಕೊಂಡು ಅವೈಜ್ಞಾನಿಕಾಗಿ ಹಾಗೂ ಅಕ್ರಮವಾಗಿ ಈ ಜನಾಂಗದ ಆಸ್ತಿಯನ್ನು ಕಬಳಿಸುವ ದೃಷ್ಟಿಯಿಂದ ಸಮಿತಿಯನ್ನು ರಚಿಸಿಕೊಂಡಿರುವುದು ಕಂಡುಬರುತ್ತದೆ. ಈ ನೊಂದಣಿ ಪ್ರಕ್ರಿಯೆಯಲ್ಲಿ ಒಂದೇ ದಿನಕ್ಕೆ ನೋಂದಣಿ ಮಾಡಿಕೊಟ್ಟಿರುವುದು ಮಾನ್ಯ ಉಪ ನಿಬಂಧಕರ ಸಂಘಸಂಸ್ಥೆಗಳ ನೋಂದಣಾಧಿಕಾರಿಗಳವರ ಕೈವಾಡ ಹಾಗೂ ರಾಜಕೀಯ ವ್ಯಕ್ತಿಗಳ ಒತ್ತಡ ಇರುವುದು ಹಾಗೂ ಮಾಜಿ ಸಚಿವರ ಒತ್ತಡಕ್ಕೆ ಬೆದರಿಕೆಗೆ ಈ ಕೃತ್ಯ ಎಸಗಿರುವುದಾಗಿ ಕಂಡುಬಂದಿರುತ್ತೆ. ಪ್ರಯುಕ್ತ ಅವೈಜ್ಞಾನಿಕವಾಗಿ ಕಾರ್ಯಕಾರಿ ಮಂಡಳಿ ಒಬ್ಬ ಸದಸ್ಯರ ಸಹಿ ಮತ್ತು ಸಾಕ್ಷಿಗಳ ಸಹಿ ಇಲ್ಲದೆ ಹಾಗೂ ಚಿತ್ರದುರ್ಗ ನಗರಸಭೆಯಲ್ಲಿ ಆದಿ ಕರ್ನಾಟಕ ಹಾಸ್ಟೆಲ್ ಹೆಸರಿಗೆ ಮರು ವರ್ಗಾವಣೆ ಖಾತೆಯ ನಕಲು ಪ್ರತಿಯನ್ನು ಅಕ್ರಮವಾಗಿ ಸಲ್ಲಿಸಿ ಮಾಡಿರುವ ನೋಂದಣಿಯನ್ನು ಈ ಕೂಡಲೇ ರದ್ದುಪಡಿಸಬೇಕೆಂದು ಇಡೀ ಜಿಲ್ಲೆಯ ಮಾದಿಗ ಸಮುದಾಯದ ಪರವಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಹಾಗೂ ಜಿಲ್ಲಾಧಿಕಾರಿಗಳವರಿಗೆ ಒತ್ತಾಯಿಸಲಾಯಿತು.

ಗೋಷ್ಟಿಯಲ್ಲಿ ಜನಾಂಗದ ಮುಖಮಡರಾದ ಸಿ.ಕೆ.ಮಹೇಶ್, ದುರುಗೇಶಪ್ಪ, ಜಯ್ಯಣ್ಣ, ಕುಮಾರ್, ರಾಮು, ಮೈಲೇಶ್, ಜಗದೀಶ್, ಸುಧಾಕರ್, ಬಾಲರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಡಿಸೆಂಬರ್ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

  ಚಿತ್ರದುರ್ಗ. ನ.22: ಪ್ರಸಕ್ತ ಮುಂಗಾರು ಹಂಗಾಮಿನ ರಾಗಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಡಿಸೆಂಬರ್ 01 ರಿಂದ ನೋಂದಣಿ ಕಾರ್ಯ ಪ್ರಾರಂಭಿಸಲಾಗುವುದು. ಡಿ.31 ರವರೆಗೆ ನೋಂದಣಿ ನಡೆಯಲಿದೆ. ಪ್ರತಿ ಕ್ವಿಂಟಾಲ್

ಸತತ ಏರಿಕೆಯತ್ತ ಸಾಗುತ್ತಿದೆ ಚಿನ್ನದ ಬೆಲೆ : ಇಂದಿನ ದರ ಹೀಗಿದೆ..!

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ

ಚಿತ್ರದುರ್ಗ | ಯೋಗೀಶ್ ಸಹ್ಯಾದ್ರಿ ಬಿಜೆಪಿ ಸೇರ್ಪಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಉಪನ್ಯಾಸಕರು ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ, ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರು ಬಿಜೆಪಿ

error: Content is protected !!