ಡ್ರಗ್ಸ್ ಜಾಲವನ್ನ ಮಟ್ಟ ಹಾಕ್ಬೇಕು ಅಂತ ಅಧಿಕಾರಿಗಳು ಪಣ ತೊಟ್ಟಂತಿದೆ. ಹೀಗಾಗಿ ಎಲ್ಲಾ ಕಡೆ ಸರಿಯಾದ ರೀತಿಯಲ್ಲಿ ಜಾಲವನ್ನ ಪತ್ತೆ ಮಾಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಆ ಜಾಲವನ್ನ ಹಿಡಿಯುವಲ್ಲಿ ಅಧಿಕಾರಿಗಳು ಕೂಡ ಯಶಸ್ವಿಯಾಗುತ್ತಿದ್ದಾರೆ. ಇದೀಗ ಮತ್ತೊಂದು ಕಡೆ ದೊಡ್ಡ ಜಾಲವನ್ನೇ ಹಿಡಿದಿದ್ದಾರೆ.
ಗುಜರಾತ್ ನ ಮೊರಾಬಿಯಾ ಜಾಜುಡಾ ಎಂಬಲ್ಲಿ ಎಟಿಎಸ್ ಅಧಿಕಾರಿಗಳು ದಾಳಿ ನಡೆಸಿ ಭಾರೀ ಮಟ್ಟದ ಡ್ರಗ್ಸ್ ವಶ ಪಡಿಸಿಕೊಂಡಿದ್ದಾರೆ. ಒಟ್ಟು 600 ಕೋಟಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಈ ಡ್ರಗ್ಸ್ ಪಾಕಿಸ್ತಾನದಿಂದ ಭಾರತಕ್ಕೆ ಬರುತಿದ್ದ ಡ್ರಗ್ಸ್ ಎನ್ನಲಾಗಿದೆ. ಮುಂಬೈನ ಎನ್ಸಿಬಿ ಯವರು ಭರ್ಜರಿ ಭೇಟೆ ಮಾಡಿ ಈ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಮತ್ತೊಂದು ಕಡೆ ಎನ್ಸಿಬಿ ಅಧಿಕಾರಿಗಳು ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ನಾಂದೇಡ್ ನಲ್ಲಿ ಡ್ರಗ್ಸ್ ವಶ ಪಡಿಸಿಕೊಂಡಿದ್ದು, ವಿಶಾಖ ಪಟ್ಟಣದಿಂದ ಮಹಾರಾಷ್ಟ್ರಕ್ಕೆ ಬರ್ತಾ ಇದ್ದಂತ ಡ್ರಗ್ಸ್ ಇದಾಗಿದೆ ಎನ್ನಲಾಗಿದೆ.