ಸುದ್ದಿಒನ್, ಚಿತ್ರದುರ್ಗ, ಜೂ. 14 : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಆರೋಪಿಗಳನ್ನು ಬಂಧಿಸಿದ್ದಾರೆ. ಒಬ್ಬೊಬ್ಬರಾಗಿಯೇ ಬಂದು ಪೊಲೀಸರಿಗೆ ಶರಣಾಗುತ್ತಿದ್ದಾರೆ. ಇಂದು ಕೂಡ ಇಬ್ಬರು ಅರೆಸ್ಟ್ ಆಗಿದ್ದಾರೆ. ಅದರಲ್ಲಿ ಆಟೋ ಕೆಲಸ ಮಾಡುತ್ತಿದ್ದಂತ ಅನಿಲ್ ಕೂಡ ಇಂದು ಪೊಲೀಸರಿಗೆ ಶರಣಾಗಿದ್ದಾರೆ. ಮನೆಗೆ ಆಧಾರವಾಗಿದ್ದ ವ್ಯಕ್ತಿ ಅನಿಲ್, ಇಂದು ಜೈಲು ಸೇರಿದ್ದಾನೆ. ಈ ಆಘಾತವನ್ನು ತಂದೆ ತಾಯಿ ಸಹಿಸಿಕೊಳ್ಳುವುದಾದರೂ ಹೇಗೆ. ಆ ಆಘಾತದಿಂದನೇ ಅನಿಲ್ ತಂದೆ ನಿಧನರಾಗಿದ್ದಾರೆ.
ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ ಆರೋಪದಲ್ಲಿ ನಟ ದರ್ಶನ್ ಮತ್ತು ಅವರ ಟೀಂ ಚಿತ್ರದುರ್ಗದ ರೇಣುಕಾ ಸ್ವಾಮಿ ಅವರನ್ನ ಕಿಡ್ನಾಪ್ ಮಾಡಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಚಿತ್ರದುರ್ಗದ ನಾಲ್ವರು ಆರೋಪಿಗಳು ಭಾಗಿಯಾಗಿದ್ದರು.
ಕಾರು ಚಾಲಕ ರವಿ ಗುರುವಾರ ಪೊಲೀಸರಿಗೆ ಶರಣಾಗಿದ್ದಾನೆ ಇದರ ಬೆನ್ನಲ್ಲೇ ಆರನೇ ಆರೋಪಿ ಜಗದೀಶ್ ಹಾಗೂ 7ನೇ ಆರೋಪಿಯಾಗಿರುವ ಅನಿಲ್ ಇಂದು ಚಿತ್ರದುರ್ಗದ ಡಿವೈಎಸ್ಪಿ ದಿನಕರನ್ ಮುಂದೆ ಶರಣಾಗಿದ್ದರು. ಇತ್ತ ಮಗ ಪ್ರಕರಣದಲ್ಲಿ ಸಿಕ್ಕಿಕೊಂಡ ಘಟನೆಯಿಂದ ಆಘಾತಕ್ಕೆ ಒಳಗಾದ ಅನಿಲ್ ತಂದೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎನ್ನಲಾಗಿದೆ.
ದರ್ಶನ್ ಮೇಲಿನ ಅಭಿಮಾನದಿಂದ ಅನಿಲ್ ಇಂದು ಜೈಲು ಸೇರಿದ್ದಾನೆ. ದರ್ಶನ್ ಅಭಿಮಾನಿ ಸಂಘದ ರಾಘವೇಂದ್ರ ಅವರು ಅನಿಲ್ ಅವರನ್ನು ಕರೆದುಕೊಂಡು ಹೋಗಿದ್ದರು. ಕೊಲೆಯಲ್ಲಿ ಅನಿಲ್ ಕೂಡ ಭಾಗಿಯಾಗಿದ್ದರು. ಹೀಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಅನಿಲ್ ಕೂಡ ಬಂದು ಸರೆಂಡರ್ ಆಗಿದ್ದಾನೆ. ಈ ಆಘಾತ ತಡೆದುಕೊಳ್ಳುವುದಕ್ಕೆ ಆಗದೆ ಅವರ ತಂದೆ ನಿಧನರಾಗಿದ್ದಾರೆ. ಇವರ ಸಾವಿಗೆ ಚಿತ್ರದುರ್ಗದ ಮಂದಿ ಕಂಬನಿ ಮಿಡಿದಿದ್ದಾರೆ.