ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಜೂ. 12 : ಸರ್ಕಾರ ಮೃತ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಮೃತರ ಪತ್ನಿಗೆ ಒಂದು ಕೆಲಸ ಕೊಟ್ಟು ಕುಟುಂಬ ಕಾಪಾಡುವ ಕೆಲಸ ಮಾಡಲಿ ಜಿಲ್ಲೆಯಲ್ಲಿಯೇ ಎಲ್ಲಾದ್ರು ಒಂದು ಕಡೆ ಜೀವನಕ್ಕೆ ಆಧಾರ ಆಗುವ ಕೆಲಸ ಕೊಡಬೇಕು ತನಿಖೆ ಹಂತದಲ್ಲಿದೆ, ಯಾರೇ ತಪ್ಪು ಮಾಡಿದ್ರು ಕಠಿಣ ಶಿಕ್ಷೆ ಆಗಲಿ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ನಗರದ ವಿಆರ್‍ಎಸ್ ಬಡಾವಣೆಯ ರೇಣುಕಸ್ವಾಮಿ ನಿವಾಸಕ್ಕೆ ಬುಧವಾರ ಸಂಜೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿದ ಅವರು, `ಯಾರು ಕೂಡಾ ಕಾನೂನು ಕೈಗೆತ್ತಿಕೊಳ್ಳಬಾರದು. ಸರ್ಕಾರದ ಇಂಥ ಪ್ರಕರಣ ಗಂಭೀರವಾಗಿ ತೆಗೆದುಕೊಳ್ಳಬೇಕು. ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದು ಮನಸ್ಸಿಗೆ ಅಘಾತ ಆಗಿದೆ ರೇಣುಕಾಸ್ವಾಮಿಯಿಂದ ನೋವಾಗಿದ್ರೆ ಪೊಲೀಸರಿಗೆ ದೂರು ನೀಡಬಹುದಿತ್ತು ಕೊಲೆ ಮಾಡಿರುವಂತದ್ದು, ಯಾರೂ ಸಹಿಸಿಕೊಳ್ಳುವಂತದ್ದಲ್ಲ ದುಡಿಯುವವರು ತೀರಿ ಹೋದಾಗ ನೋಡಿಕೊಳ್ಳುವವರು ಯಾರೂ ಇರಲ್ಲ ಎಂದರು.
ರೇಣುಕಸ್ವಾಮಿ ಕೊಲೆ ಆಗಿದೆ ಎಂದು ದೆಹಲಿಯಲ್ಲಿದ್ದಾಗ ಸುದ್ದಿ ಕೇಳಿ ನೋವಾಯ್ತು. ಸಮಾಜದಲ್ಲಿ ಇಂಥ ಅಹಿತಕರ ಘಟನೆ ನಡೆಯಬಾರದು ರಾಜ್ಯದಲ್ಲಿ ಇಂಥ ಘಟನೆ ಪದೇ ಪದೇ ನಡೆಯುತ್ತಿವೆ. ಸರ್ಕಾರ ಮತ್ತು ಕಾನೂನಿನ ಭಯ ಇಲ್ಲವಾಗಿದೆ. ಸರ್ಕಾರ ಇಂಥ ಪ್ರಕರಣವನ್ನ ವಿಶೇಷವಾಗಿ ತನಿಖೆ ನಡೆಸಬೇಕು. ಯಾರೇ ಎಷ್ಠು ದೊಡ್ಡವರಿದ್ದರು ಶಿಕ್ಷೆಯಾಗಬೇಕು. ತನಿಖೆಯಿಂದ ಸತ್ಯ ಹೊರಗೆ ಬರಬೇಕಿದೆ’ ಎಂದು ತಿಳಿಸಿದ ಅವರು. ರೇಣುಕಾಸ್ವಾಮಿ ಸಮಸ್ಯೆ ಮಾಡಿದ್ದರೆ ದೂರು ನೀಡಬಹುದಿತ್ತು. ಈ ಕೊಲೆ ಯಾರು ಕೂಡಾ ಸಹಿಸುವುದಿಲ್ಲ. ಮೃತರ ಕುಟುಂಬಕ್ಕೆ ಸರ್ಕಾರ ನ್ಯಾಯ ಒದಗಿಸಬೇಕಿದೆ. ಮೃತಳ ಪತ್ನಿಗೆ ಸರ್ಕಾರಿ ಕೆಲಸ ನೀಡಬೇಕು’ ಎಂದು ಒತ್ತಾಯಿಸಿದರು.
ಹುಬ್ಬಳ್ಳಿ, ಚಿತ್ರದುರ್ಗದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ ಸರ್ಕಾರ ಮತ್ತು ಕಾನೂನಿನ ಭಯ ಜನರಿಗೆ ಇಲ್ಲದಂತಾಗಿದೆಸರ್ಕಾರ ಇಂತಹ ಪ್ರಕರಣಗಳನ್ನು ವಿಶೇಷವಾಗಿ ತನಿಖೆ ಮಾಡಬೇಕು ಯಾರೇ ದೊಡ್ಡವರು, ಶ್ರೀಮಂತರು ಇರಲಿ ಅಂತವರಿಗೆ ಕಠಿಣ ಶಿಕ್ಷೆ ವಿಧಿಸಿ ಸಮಾಜಕ್ಕೆ ಸಂದೇಶ ಕೊಡಬೇಕು ಪ್ರಕರಣದಲ್ಲಿ ಯಾರೇ ಇರಲಿ ತನಿಖೆಯಿಂದ ಸತ್ಯ ಹೊರಬರಬೇಕಿದೆ ಎಂದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಇದ್ದರು.