Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಹಾರ್ದಿಕ್ ಪಾಂಡ್ಯಾ & ನತಾಶ ಡಿವೋರ್ಸ್ ಆಗ್ತಿಲ್ಲ : ಇಷ್ಟು ದಿನ ಗಾಸಿಪ್ ಆಗೋದಕ್ಕೆ ಬಿಟ್ಟಿದ್ದೇಕೆ ಈ ಜೋಡಿ..?

---Advertisement---

ಕಳೆದ ಕೆಲವು ದಿನಗಳಿಂದ ಹಾರ್ದಿಕ್ ಪಾಂಡ್ಯಾ ಹಾಗೂ ನತಾಶದೆ ಸುದ್ದಿ. ಇಬ್ಬರು ಬೇರೆ ಬೇರೆ ಆಗ್ತಾರಂತೆ, ಡಿವೋರ್ಸ್ ಗ್ಯಾರಂಟಿ ಅಂತೆ ಅಂತ. ಅದಕ್ಕೆ ತಕ್ಕ ಹಾಗೆ ನತಾಶ ಹಾಗೂ ಹಾರ್ದಿಕ್ ಪಾಂಡ್ಯಾ ಸೋಷಿಯಲ್ ಮೀಡಿಯಾದ ಬೆಳವಣಿಗೆ ಸಹ ಇತ್ತು. ಹೆಸರು ತೆಗೆದು ಹಾಕಿದ್ದಲ್ಲದೆ ಅದಕ್ಕೆ ತದ್ವಿರುದ್ಧವಾದ ಫೋಟೋಗಳನ್ನೇ ಹಾಕುತ್ತಿದ್ದರು. ಪಾಪರಾಜಿಗಳು ಸಿಕ್ಕಾಗ, ಪ್ರಶ್ನೆ ಮಾಡಿದಾಗ ಮೌನವಾಗಿ ಹೋಗುತ್ತಿದ್ದರು. ಈ ಎಲ್ಲಾ ವಿದ್ಯಾಮಾನಗಳು ದಾಂಪತ್ಯ ಜೀವನದ ಅಂತ್ಯವನ್ನೇ ಸೂಚಿಸುತ್ತಿದ್ದವು. ಇದರ ನಡುವೆ ಹಾರ್ದಿಕ್ ಪಾಂಡ್ಯ ಜೀವನಾಂಶದ ತನಕವೂ ಸುದ್ದಿಯಾಗಿತ್ತು. ಇದೀಗ ಅದಕ್ಕೆಲ್ಲ ತದ್ವಿರುದ್ಧವಾಗಿದೆ. ಇಬ್ಬರು ದೂರವಾಗುತ್ತಿಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ.

ಇದೀಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮದುವೆಯ ಬ್ಯೂಟಿಫುಲ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯಾ ಜೊತೆಗೆ ಕ್ಲೋಸ್ ಆಗಿ ಇರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಇಬ್ಬರು ಡಿವೋರ್ಸ್ ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ.

ಹಾರ್ದಿಕ್ ಪಾಂಡ್ಯಾ ಹಾಗೂ ನತಾಶ 2020ರಲ್ಲಿ ರಿಜಿಸ್ಟರ್ ರೀತಿಯಲ್ಲಿ ಮದುವೆಯಾಗಿದ್ದರು. ಮದುವೆಗೂ ಮುನ್ನವೇ ನತಾಶ ಗರ್ಭಿಣಿಯಾಗಿದ್ದರು. ದಂಪತಿಗೆ ಒಬ್ಬ ಗಂಡು ಮಗನಿದ್ದಾನೆ. ಡಿವೋರ್ಸ್ ಸುದ್ದಿ ಹಬ್ಬುವುದಕ್ಕೆ ಪಿಆರ್ ಕಾರಣ ಎನ್ನಲಾಗಿದೆ. ಇದೊಂದು ಪಬ್ಲಿಕ್ ಸ್ಟಂಟ್ ಎಂದು ಹೇಳಲಾಗುತ್ತಿದ್ದು, ನತಾಶ ಕೂಡ ಅದೇ ಕಾರಣಕ್ಕಾಗಿ ಮದುವೆಯ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿದ್ದರಂತೆ. ಈಗ ಎಲ್ಲಾ ಹಳೆಯ ಫೋಟೋಗಳನ್ನು ಮತ್ತೆ ಅಪ್ಲೋಡ್ ಕೊಟ್ಟಿದ್ದಾರೆ. ಈ ಮೂಲಕ ಇಬ್ಬರು ದೂರವಾಗ್ತಿಲ್ಲ ಎಂಬುದಂತು ಖಚಿತವಾಗಿದೆ. ಫ್ಯಾನ್ಸ್ ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...