Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿಎಂ, ಡಿಸಿಎಂ ಬಿಗ್ ರಿಲೀಫ್ : ಬಿಜೆಪಿ ಜಾಹೀರಾತು ಕೇಸ್ ವಿಚಾರಕ್ಕೆ ಜಾಮೀನು

Facebook
Twitter
Telegram
WhatsApp

 

ಬೆಂಗಳೂರು: ಬಿಜೆಪಿ ವಿರುದ್ಧ ಜಾಹೀರಟತು ನೀಡಿದ್ದರ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರುಗೆ ಜಾಮೀನು ಮಂಜೂರಾಗಿದೆ. ಈ ಮೂಲಕ ಇಬ್ಬರು ರಿಲ್ಯಾಕ್ಸ್ ಆಗಿದ್ದಾರೆ. ಖಾಸಗಿ‌ ಮಾನನಷ್ಟ ಕೇಸಲ್ಲಿ ಇದೀಗ 42ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಸಿಎಂ ಸೇರಿದಂತೆ ಹಲವು ಹುದ್ದೆಗಳ ಬಗ್ಗೆ ಕಾಂಗ್ರೆಸ್ ಜಾಹೀರಾತು ಹೊರಡಿಸಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಸಿಎಂ ಹುದ್ದೆಗಾಗಿ 2500 ಕೋಟಿ, ಮಂತ್ರಿ ಸ್ಥಾನಕ್ಕಾಗಿ 500 ಕೋಟಿ ರೂಪಾಯಿ ಬಿಜೆಪಿ ಪಕ್ಷಕ್ಕೆ ನೀಡಿ, ಅಧಿಕಾರ ಸ್ವೀಕಾರ ಮಾಡಿದ್ದಾರೆಂದು ಕಾಂಗ್ರೆಸ್ ಆರೋಪಿಸಿತ್ತು. ಕೋವಿಡ್ ಕಿಟ್ ಪೂರೈಕೆ ಟೆಂಡರ್​ ಡೀಲ್​ನಲ್ಲಿ ಶೇಕಡಾ 75, ಪಿಡಬ್ಲ್ಯೂಡಿ ಗುತ್ತಿಗೆ ಟೆಂಡರ್​ನಲ್ಲಿ ಶೇ 40 ರಷ್ಟು ಸೇರಿದಂತೆ ವಿವಿಧ ಇಲಾಖೆಗಳ ಕೆಲಸ ಕಾರ್ಯಗಳಲ್ಲಿ ಕಮೀಷನ್ ಡೀಲ್ ಮಾಡಿಕೊಂಡಿದೆ ಎಂದು ಕಾಂಗ್ರೆಸ್​ ಆರೋಪ ಮಾಡಿತ್ತು. ಈ ಸಂಬಂಧ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಾಗಿತ್ತು.

 

ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಮುಂದೆ ಇಬ್ಬರು ನಾಯಕರು ಹಾಜರಾಗಿದ್ದರು. ಜಡ್ಜ್ ಮುಂದೆ ಡಿಕೆ ಶಿವಕುಮಾರ್ ಕೈಕಟ್ಟಿ ನಿಂತಿದ್ದರು. ಆರೋಪಿಗಳು ಯಾರು ಯಾರು ಎಂಬ ಪ್ರಶ್ನೆಗೆ ವಕೀಲರು ಎ-2 ಡಿಕೆ ಶಿವಕುಮಾರ್, ಎ-3 ಸಿದ್ದರಾಮಯ್ಯ ಎಂದು ವಕೀಲರು ಕೋರ್ಟ್​ಗೆ ತಿಳಿಸಿದರು. ಇದೇ ವೇಳೆ ಇಬ್ಬರೂ ಕೂಡ ಜಾಮೀನು ನೀಡುವಂತೆ ಮನವಿ ಮಾಡಿಕೊಂಡರು. ಅಲ್ಲದೇ ವಿಚಾರಣೆ ಹಾಜರಾಗದ ರಾಹುಲ್ ಗಾಂಧಿಗೆ ವಿನಾಯತಿ ನೀಡುವಂತೆ ಕೋರ್ಟ್ ಬಳಿ ಕಾಂಗ್ರೆಸ್ ಪರ ವಕೀಲರು ಮನವಿ ಮಾಡಿಕೊಂಡರು. ವಿಚಾರಣೆ ಬಳಿಕ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ವೈದ್ಯರುಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಿ : ಶಾಸಕ ಡಾ.ಎಂ.ಚಂದ್ರಪ್ಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಹೊಳಲ್ಕೆರೆ, ಜುಲೈ.01 : ಆಸ್ಪತ್ರೆಗೆ ಬರುವ ರೋಗಿಗಳ ಪ್ರಾಣ ಉಳಿಸುವ ಪರಮ ಪವಿತ್ರವಾದ ವೃತ್ತಿಗೆ ಜನರು ಗೌರವ

ಎಂ.ಚಂದ್ರಪ್ಪ ನವರು ಹೊಳಲ್ಕೆರೆ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ದಿಪಡಿಸಿದ್ದಾರೆ : ಸಚಿವ ಡಿ.ಸುಧಾಕರ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಹೊಳಲ್ಕೆರೆ, ಜುಲೈ.01 : ಸರ್ಕಾರದ ಸೌಲಭ್ಯಗಳನ್ನು ಜನಾಮಾನ್ಯರಿಗೆ ತಲುಪಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ಜನಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ

ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಂಘದ ರಾಜ್ಯಾಧ್ಯಕ್ಷರಾಗಿ ಹೆಚ್. ಜಲೀಲ್ ಸಾಬ್ ಆಯ್ಕೆ

ವರದಿ ಮತ್ತು ಫೋಟೋ ಕೃಪೆ,  ಸುರೇಶ್ ಪಟ್ಟಣ್,           ಮೊ : 98862 95817 ಚಿತ್ರದುರ್ಗ ಜುಲೈ.01 : ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಂಘದ(ರಿ) ರಾಜ್ಯಘಟಕದ 2024-2026 ರ ಅವಧಿಯ

error: Content is protected !!