ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರನ್ನು ಅರೆಸ್ಟ್ ಮಾಡಿರುವ ಎಸ್ಐಟಿ, ಈಗಾಗಲೇ ಎಲ್ಲಾ ಆಯಾಮದಿಂದಾನೂ ತನಿಖೆ ನಡೆಸುವುದಕ್ಕೆ ಸಿದ್ಧತೆ ನಡೆಸಿದೆ. ಇದರ ಬೆನ್ನಲ್ಲೇ ಭವಾನಿ ರೇವಣ್ಣನಿಗಾಗಿಯೂ ಹುಡುಕಾಟ ಶುರು ಮಾಡಿದೆ. ಕೋರ್ಟ್ ಭವಾನಿ ರೇವಣ್ಣ ಅವರ ಜಾಮೀನು ಅರ್ಜಿ ವಜಾ ಮಾಡಿದೆ. ತನಿಖೆಗಾಗಿ ಎಸ್ಐಟಿ ಅಧಿಕಾರಿಗಳು ಭವಾನಿ ರೇವಣ್ಣ ಅವರನ್ನು ಹುಡುಕುತ್ತಿದ್ದಾರೆ. ಗಂಡನ ಮನೆಯಲ್ಲೂ ಇಲ್ಲ ತವರು ಮನೆಯನ್ನು ಖಾಲಿ ಮಾಡಿಕೊಂಡು ಹೊರಟಿರುವ ಭವಾನಿ ಅವರಿಗಾಗಿ ಹುಡುಕಾಟ ನಡೆಯುತ್ತಿದೆ.
ರೇವಣ್ಣ ಅವರು ಮಹಿಳೆಯನ್ನು ಅಪಹರಣ ಮಾಡಿದ್ದ ಪ್ರಕರಣದಲ್ಲಿ ಭವನಾಇ ರೇವಣ್ಣ ಅವರಿಗೂ ನೋಟೀಸ್ ನೀಡಲಾಗಿತ್ತು. ಈ ಸಂಬಂಧ ಭವಾನಿ ರೇವಣ್ಣ ಅವರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ಆ ಜಾಮೀನು ಅರ್ಜಿ ನಿರಾಕರಣೆಯಾಗಿದೆ. ಭವಾನಿ ಅವರು ಸಿಕ್ಕಿಲ್ಲ. ಅವರ ಕಾರು ಚಾಲಕ ಇದೀಗ ಎಸ್ಐಟಿ ಪೊಲೀಸರ ವಶಕ್ಕೆ ಸಿಕ್ಕಿದ್ದಾರೆ.
ಭವಾನಿ ರೇವಣ್ಣ ಅವರ ಕಾರು ಚಾಲಕ ಅಜಿತ್, ತನ್ನ ಅತ್ತೆ ಮನೆಗೆ ಹೋಗಿದ್ದರು. ಮಾಹಿತಿ ತಿಳಿದಿದ್ದ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಅಜಿತ್ ಮೂಲಕ ಭವಾನಿ ರೇವಣ್ಣ ಅವರು ಎಲ್ಲಿದ್ದಾರೆ ಹೇಗೆ ಎಂಬ ಮಾಹಿತಿಯನ್ನು ಕಲೆ ಹಾಕಲಿದ್ದಾರೆ.
ಪ್ರಜ್ವಲ್ ರೇವಣ್ಣ ಅವರು ಅರೆಸ್ಟ್ ಆದ ಮೇಲೆ ಭವಾನಿ ರೇವಣ್ಣ ಅವರಿಗೂ ಬಂಧನದ ಭೀತಿ ಎದುರಾಗಿತ್ತು. ಹೀಗಾಗಿ ಮೊದಲೇ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಕೋರ್ಟ್ ಭವಾನಿ ರೇವಣ್ಣ ಅವರ ಜಾಮೀನು ಅರ್ಜಿ ವಜಾಗೊಳಿಸಿದೆ. ಇನ್ನು ರೇವಣ್ಣ ಅವರು ದೇವಸ್ಥಾನಗಳಿಗೆ ಸುತ್ತುತ್ತಾ, ವಿಶೇಷ ಪೂಜೆ ಪುನಸ್ಕಾರ ಮಾಡುತ್ತಿದ್ದಾರೆ.