ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಎಸ್ಐಟಿ ಅಧಿಕಾರಿಗಳಿಗೆ ಸಿಗದೆ, ವಿದೇಶದಲ್ಲಿದ್ದ ಪ್ರಜ್ವಲ್ ರೇವಣ್ಣ ಇದೀಗ ಎಸ್ಐಟಿ ಅಧಿಕಾರಿಗಳ ವಶಕ್ಕೆ ಸಿಲುಕಿದ್ದಾರೆ. ಇಂದು ಮಧ್ಯರಾತ್ರಿಯೇ ವಶಕ್ಕೆ ಪಡೆದ ಎಸ್ಐಟಿ, ಇಂದು ಕೋರ್ಟ್ ಗೆ ಹಾಜರುಪಡಿಸಿತ್ತು. ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್ ಆರು ದಿನಗಳ ಕಾಲ ಎಸ್ಐಟಿಗೆ ವಶಕ್ಕೆ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ಕಸ್ಟಡಿಗೆ ನೀಡಿದ್ದು, ಪೊಲೀಸರು ಕಚೇರಿಗೆ ಕರೆದೊಯ್ದಿದ್ದಾರೆ.
ಪೆನ್ ಡ್ರೈವ್ ಪ್ರಕರಣ ದೇಶದಾದ್ಯಂತ ಸದ್ದು ಮಾಡಿದಾಗಲೂ ಸರಿಯಾದ ರೀತಿಯಲ್ಲಿ ವಿಚಾರಣೆ ಮಾಡುವುದಕ್ಕೆ ಆಗಿಲ್ಲ. ಈಗ ನ್ಯಾಯಾಲಯವೇ ಕಸ್ಟಡಿಗೆ ನೀಡಿರುವ ಕಾರಣ ಸಂಪೂರ್ಣವಾಗಿ ತನಿಖೆ ಮಾಡಲಿದೆ. ತನಿಖೆಗೆ ಪ್ರಜ್ವಲ್ ರೇವಣ್ಣ ಹೇಗೆ ಸಹಕರಿಸುತ್ತಾರೆ ಎಂಬುದು ಕೂಡ ಬಹಳ ಮುಖ್ಯವಾಗುತ್ತದೆ. ಪ್ರಮುಖ ವಿಚಾರಗಳನ್ನು ಕೇಳುವ ಮೂಲಕ ವಿಚಾರ ಹಲವು ಆಯಾಮದಲ್ಲಿ ತನಿಖೆ ನಡೆಸಲಿದೆ.
ಸಂತ್ರಸ್ತ ಮಹಿಳೆಯರ ವಿಡಿಯೋ ಮಾಡಿದ್ದೇ ದೊಡ್ಡ ತಪ್ಪಾಗಿದೆ. ಆ ವಿಡಿಯೋಗಳೇ ಈಗ ದೇಶದಾದ್ಯಂತ ರಾದ್ಧಾಂತ ಶುರು ಮಾಡಿದೆ. ವಿದೇಶದಲ್ಲಿ ಉಳಿದುಕೊಂಡಿದ್ದಕ್ಕೆ ಸಹಾಯ ಮಾಡಿದವರು ಯಾರು..? ಇಲ್ಲಿಂದ ವಿದೇಶಕ್ಕೆ ಹೋಗಲು ಸಹಾಯ ಮಾಡಿದವರು ಯಾರು..? ಎಸ್ಐಟಿ ವಶದಲ್ಲಿರುವ ಪ್ರಜ್ವಲ್ ರೇವಣ್ಣ ಅವರಿಗೆ ಪ್ರತಿದಿನ ಬೆಳಗ್ಗೆ 9.30ರಿಂದ 10.30ರ ತನಕ ವಕೀಲರ ಭೇಟಿಗೆ ಕಾಲಾವಕಾಶ ನೀಡಲಾಗಿದೆ. ಈಗಾಗಲೇ ಅರೆಸ್ಟ್ ಮಾಡಿಕೊಂಡು ಬಂದ ಬಳಿಕ ಅದಾಗಲೇ ಮೆಡಿಕಲ್ ಚೆಕಪ್ ಮಾಡಿಸಲಾಗಿದೆ. ನಾಳೆಯೂ ಮೊದಲು ಮೆಡಿಕಲ್ ಚೆಕಪ್ ಮಾಡಲಾಗುತ್ತದೆ. ಜೊತೆಗೆ ಕೃತ್ಯ ನಡೆದ ಜಾಗದಲ್ಲಿ ಮಹಜರು ಮಾಡಲಾಗುತ್ತದೆ. ಬಳಿಕ ತನಿಖೆಯನ್ನು ಮುಂದುವರೆಸುತ್ತಾರೆ. ಅಶ್ಲೀಲ ವಿಡಿಯೋಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯಲಿದೆ.