Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಹಿಳೆಯರೇ ಹೊಳೆಯುವ ಕೂದಲು ಬೇಕೆಂದರೆ ಬಾಳೆ ಹಣ್ಣು ತಿನ್ನಿ..!

Facebook
Twitter
Telegram
WhatsApp

ಮಹಿಳೆಯರಿಗಾಗಲಿ, ಪುರಿಷರಿಗಾಗಲಿ ಕೂದಲಿನ ದಟ್ಟತೆ, ಆರೋಗ್ಯ ಬಹಳ ಮುಖ್ಯ. ಸೌಂದರ್ಯವನ್ನು ಹೆಚ್ಚಿನದಾಗಿ ಕಾಣುವಂತೆ ಮಾಡುವುದೇ ಕೂದಲು. ಆದರೆ ಇತ್ತಿಚಿ‌ನ ದಿನಗಳಲ್ಲಿ ಒತ್ತಡ, ನೀರಿನ ವ್ಯತ್ಯಾಸ, ಸರಿಯಾದ ಹಾರೈಕೆ ಇಲ್ಲದೆ ಇರುವುದುಕೂದಲಿನ ಅನಾರೋಗ್ಯಕ್ಕೆ ಕಾರಣವಾಗಿದೆ. ಹೊಳೆಯುವ ಕೂದಲು ಬೇಕೆಂದರೆ ತುಂಬಾ ಸಿಂಪಲ್ ಬಾಳೆಹಣ್ಣು ಬಳಕೆ ಮಾಡುವುದು.

ಊಟ ಆದ ಮೇಲೆ ಬಾಳೆ ಹಣ್ಣು ತಿನ್ನುವ ಅಭ್ಯಾಸ ಸಾಕಷ್ಟು ಜನರಿಗೆ ಇರುತ್ತದೆ. ಪಳ ಪಳ ಅಂತ ಹೊಳೆಯುವ ಕೂದಲು ಬೇಕು ಎಂದು ಬಯಸುವವರು ಬಾಳೆಹಣ್ಣನ್ನು ತಿನ್ನುವುದು ಉತ್ತಮ. ಯಾಕಂದ್ರೆ ಇದರಲ್ಲಿ ಎ, ಸಿ, ಬಿಯಂತಹ ವಿಟಮಿನ್ ದಟ್ಟವಾಗಿದೆ. ಇದು ಕೂದಲನ್ನು ಬಲಪಡಿಸುವುದಲ್ಲದೆ ಆರೋಗ್ಯಕರ ನೆತ್ತಿಯನ್ನು ಕಾಪಾಡುತ್ತದೆ. ಹೀಗಾಗಿ ಕೂದಲು ಚೆನ್ನಾಗಿ ಬರಬೇಕೆಂದರೆ ಬಾಳೆಹಣ್ಣನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.

ಅವಕಾಡೊ ಮತ್ತು ಬಾಳೆಹಣ್ಣಿನ ಹೇರ್ ಮಾಸ್ಕ್ ಮಾಡಿ ಹಾಕಿಕೊಳ್ಳುವುದರಿಂದಾನೂ ಕೂದಲು ಚೆನ್ನಾಗಿ ಬರುತ್ತದೆ. ಮಾಗಿದ ಬಾಳೆಹಣ್ಣು ಮತ್ತು ಆವಕಾಡೊವನ್ನು ಸಮಪ್ರಮಾಣದಲ್ಲಿ ಮ್ಯಾಶ್ ಮಾಡಿ ಮತ್ತು ಅದನ್ನು ನೆತ್ತಿಯ ಮೇಲೆ ಹಚ್ಚಿ. ಅದನ್ನು 20 ರಿಂದ 30 ನಿಮಿಷಗಳ ಕಾಲ ಬಿಟ್ಟು ನಂತರ ಕೂದಲು ತೊಳೆಯಿರಿ. ಇದನ್ನು ತಿಂಗಳಿಗೊಮ್ಮೆ ಅಥವಾ ಎರಡು ಬಾರಿ ಹಚ್ಚಿಕೊಳ್ಳಿ.

ಅದರಂತೆ ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು 2 ಚಮಚ ತೆಂಗಿನೆಣ್ಣೆಯೊಂದಿಗೆ ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ. ಇದು ಸುಮಾರು 30 ರಿಂದ 40 ನಿಮಿಷಗಳ ಕಾಲ ಹಾಗೆಯೇ ಇರಲಿ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ಈ ಮೂಲಕವೂ ಕೂದಲಿನ ಆರೋಗ್ಯವನ್ನು ಕಾಪಾಡಬಹುದಾಗಿದೆ. ಹೊಳೆಯುವ, ಆರೋಗ್ಯಕರ ಕೂದಲಿಗಾಗಿ ಅದನ್ನು ಕಾಪಾಡುವುದು ಬಹಳ ಮುಖ್ಯ.

(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!