ಸುದ್ದಿಒನ್, ನವದೆಹಲಿ, ಮೇ. 29 : ನವದೆಹಲಿಯಲ್ಲಿ ಸಾರ್ವಕಾಲಿಕ ಗರಿಷ್ಠ 52.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಉತ್ತರ ಭಾರತದಲ್ಲಿ ಜನರು ಬಿಸಿಲಿಗೆ ತತ್ತರಿಸುತ್ತಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತಿಹಾಸದಲ್ಲೇ ಗರಿಷ್ಠ ತಾಪಮಾನ ದಾಖಲಾಗಿದೆ.
ದೆಹಲಿಯ ಮುಂಗೇಶಪುರದಲ್ಲಿ ದಾಖಲೆಯ 52.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಒಂದೆಡೆ ದಕ್ಷಿಣ ಭಾರತದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದೆ. ಸ್ವಾಗತಿಸುತ್ತಿದೆ. ಉತ್ತರ ಭಾರತದಲ್ಲಿ ಬಿಸಿಲಿನ ಝಳ ವಿಪರೀತ ಹೆಚ್ಚಾಗಿದೆ. ಅನಿರೀಕ್ಷಿತವಾಗಿ, ನಿರೀಕ್ಷೆಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಸೂರ್ಯನು ದೆಹಲಿ ನಗರದ ಮೇಲೆ ಬೆಂಕಿಯ ಮಳೆ ಸುರಿಸುತ್ತಿದ್ದಾನೆ. ಬಿಸಿಲಿನ ತೀವ್ರತೆಯಿಂದ ದೆಹಲಿ ಹಾಗೂ ಉತ್ತರ ರಾಜ್ಯಗಳ ಜನರು ನಾನಾ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನೊಂದೆಡೆ ದೆಹಲಿಯಲ್ಲಿ ನೀರು ಪೋಲು ಮಾಡುವವರಿಗೆ ಸಾವಿರಾರು ರೂಪಾಯಿ ದಂಡ ವಿಧಿಸಲಾಗುತ್ತಿದೆ.
ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ದೆಹಲಿಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. 8,302 ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗಿದೆ ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹವಾಮಾನ ಬದಲಾವಣೆಯಿಂದಾಗಿ, ಅನೇಕ ನಗರಗಳಲ್ಲಿ ಶಾಲೆಗಳನ್ನು ಮುಚ್ಚಲು ಒತ್ತಾಯಿಸುತ್ತಿದ್ದಾರೆ ಮತ್ತು ಬೇಸಿಗೆ ರಜೆಯನ್ನು ಇನ್ನಷ್ಟು ದಿನಗಳವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಹೊರಗೆ ಕೆಲಸ ಮಾಡುವ ಜನರು ಸೂರ್ಯನ ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ. ಇಂದು ದಾಖಲಾದ ಬಿಸಿಲಿನ ಶಾಖವು ಉತ್ತರ ಭಾರತದ ರಾಜಸ್ಥಾನದ ಫಲೋಡಿ ಪಟ್ಟಣದಲ್ಲಿ 2016 ರಲ್ಲಿ ದಾಖಲಾದ ಸಾರ್ವಕಾಲಿಕ ದಾಖಲೆಯ ಶಾಖವನ್ನು ಮೀರಿಸಿದೆ. ಈ ಹಿಂದೆ 51 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬಿಸಿಲ ತಾಪದಿಂದ ಮೂಕ ಪ್ರಾಣಿಗಳ ಪಾಡು ಹೇಳತೀರದು. ಒಂದೆಡೆ ವಿಪರೀತ ಬಿಸಿಲು ಮತ್ತೊಂದೆಡೆ ಬಾಯಾರಿಕೆ ಮತ್ತು ಜ್ವರದಿಂದ ಪ್ರಾಣಿಗಳು ಹಲವಾರು ಸಮಸ್ಯೆಗಳಿವೆ.