ಬೆಂಗಳೂರು : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳು ರಿಲೀಸ್ ಆದ ಬೆನ್ನಲ್ಲೇ ದೇಶ ಬಿಟ್ಟು ಓಡಿ ಹೋಗಿದ್ದರು. ಜರ್ಮನ್, ಲಂಡನ್ ಅಂತ ಓಡಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಪ್ರಜ್ವಲ್ ರೇವಣ್ಣ ಇರುವುದೇ ಬೇರೆ ದೇಶದಲ್ಲಿ ಎಂಬುದು ಅವರೇ ಬಿಟ್ಟ ವಿಡಿಯೋದಿಂದ ಗೊತ್ತಾಗಿದೆ. ಎಸ್ಐಟಿ ಅಧಿಕಾರಿಗಳು ಅದನ್ನು ಟ್ರೇಸ್ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ಅವರಿಗೆ ಹಲವು ಬಾರಿ ನೋಟೀಸ್ ನೀಡಲಾಗಿತ್ತು. ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೂ ದೇಶಕ್ಕೆ ಬಂದಿರಲಿಲ್ಲ. ಈಗ ಚುನಾವಣೆಯೆಲ್ಲಾ ಮುಗಿದಿದೆ. ಮೇ 30ಕ್ಕೆ ಬಂದು ತನಿಖೆಗೆ ಹಾಜರಾಗುತ್ತೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ. ಈ ವಿಡಿಯೋ ಬಿಡುಗಡೆಯಾಗಿದ್ದು ಯಾವ ಜಾಗದಿಂದ ಎಂಬುದನ್ನು ಇದೀಗ ಎಸ್ಐಟಿ ಅಧಿಕಾರಿಗಳು ಮಾಹಿತಿ ಕಲೆಕ್ಟ್ ಮಾಡಿದ್ದಾರೆ.
ಪ್ರಜ್ವಲ್ ಜರ್ಮನ್ ದೇಶದಲ್ಲಿ ಇದ್ದಾರೆ ಎನ್ನಲಾಗಿತ್ತು. ಆದರೆ ಅವರು ಇರುವುದು ಯೂರೋಪ್ ನಲ್ಲಿ. ವಿಡಿಯೋ ರಿಲೀಸ್ ಆದ ಐಪಿ ಅಡ್ರೆಸ್ ಚೇಸ್ ಮಾಡಿದಾಗಲೇ ಅವರು ಯೂರೋಪ್ ನ ಹಂಗೇರಿಯ ಬುಡಾಪೆಸ್ಟ್ ನಲ್ಲಿ ಇದ್ದಾರೆ ಎಂಬುದು ತಿಳಿದಿದೆ. ಇನ್ನು ಆ ವಿಡಿಯೋ ಕೂಡ ಬಿಡುಗಡೆಯಾಗುವುದಕ್ಕೂ ಎರೆಉ ದಿನ ಮೊದಲೇ ರೆಕಾರ್ಡ್ ಆಗಿತ್ತು ಎಂಬುದನ್ನು ಎಸ್ಐಟಿಯ ಟೆಕ್ನಿಕಲ್ ಟೀಂ ಕಂಡು ಹಿಡಿದಿದೆ.
ಮೇ 31ಕ್ಕೆ ಎಸ್ಐಟಿ ಮುಂದೆ ಹಾಜರಾಗುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಅವರು ಹೇಳಿದ್ದಾರೆ. ಆದರೆ ನಾಳೆಯೇ ಪ್ರಜ್ವಲ್ ರೇವಣ್ಣ ವಿರುದ್ಧ ದೊಡ್ಡಮಟ್ಟದ ಪ್ರತಿಭಟನೆ ಮಾಡಲು ಸಂಘಟನೆಗಳು ಸಜ್ಜಾಗಿವೆ. ಪ್ರಜ್ವಲ್ ರೇವಣ್ಣ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ, ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.