Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಿರಿಯೂರು | ವಿವಿಧೆಡೆ ಅಪಘಾತ, ಮೂವರ ಸಾವು

Facebook
Twitter
Telegram
WhatsApp

ಸುದ್ದಿಒನ್, ಹಿರಿಯೂರು, ಮೇ. 29 : ತಾಲೂಕಿನ ವಿವಿಧೆಡೆ ನಡೆದ ರಸ್ತೆ ಅಪಘಾತದಲ್ಲಿ  ಮೂವರು ಸಾವನ್ನಪ್ಪಿದ್ದಾರೆ.

ಯರಬಹಳ್ಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಕಾರು ಸೇತುವೆಗೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ತುಮಕೂರು ಮೂಲದ ನಾಗರಾಜ್ ಶೆಟ್ಟಿ (55) ಹಾಗೂ ವಿಶಾಲಾಕ್ಷಮ್ಮ (75), ಎಂದು ಗುರುತಿಸಲಾಗಿದೆ.

ಮೃತ ನಾಗರಾಜ್ ಶೆಟ್ಟಿ ಮಗಳನ್ನ ಶಾಲೆಗೆ ಬಿಟ್ಟು ಬರಲು ತುಮಕೂರಿಗೆ ತೆರಳುವ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮಗಳು ಬಿಂದು, ಪತ್ನಿ ಭಾಗ್ಯಲಕ್ಷ್ಮಿ, ಸಂಬಂಧಿ ಗೀತಾಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಗೊಂಡವರನ್ನು ಹಿರಿಯೂರಿನ ಸಾರ್ಕರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿ ಸಾವು : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಿರಿಯೂರು ತಾಲ್ಲೂಕಿನ ಆದಿವಾಲ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.

ಅಪರಿಚಿತ ವಾಹನ ಡಿಕ್ಕಿಯಾದ ರಭಸಕ್ಕೆ ಮೃತನ ದೇಹ ನಜ್ಜುಗುಜ್ಜಾಗಿದ್ದು, ಗುರುತು ಪತ್ತೆಯಾಗಿಲ್ಲ. ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಾವೂ ಕೇಳಿದಾಗ ಅಕ್ಕಿ ಇಲ್ಲ ಅಂದ್ರು… ಚುನಾವಣೆಗಾಗಿ ಅಕ್ಕಿ‌ ಕೊಟ್ಟು.. ಈಗ ನಿಲ್ಲಿಸಿದರು : ಕೇಂದ್ರ ಸರ್ಕಾರದ ವಿರುದ್ದ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಕೇಂದ್ರ ಸರ್ಕಾರ ಇತ್ತಿಚೆಗಷ್ಟೇ ಭಾರತ್ ಎಂಬ ಹೆಸರಿನಲ್ಲಿ ಕಡಿಮೆ ಬೆಲೆಯಲ್ಲಿ ಅಕ್ಕಿಯನ್ನು ದೇಶದಾದ್ಯಂತ ವಿತರಣೆ ಮಾಡಿತ್ತು. ಈಗ ಅಕ್ಕಿಯನ್ನು ನಿಲ್ಲಿಸಿದೆ. ಇದು ಚುನಾವಣೆಗಾಗಿ ಮಾಡಿದ ಕಾರ್ಯ ಎಂದು ಕೇಂದ್ರ ಸರ್ಕಾರದ ಮೇಲೆ ಸಿಎಂ

ಮಗನ ಜೊತೆ ಕಪ್ ಗೆದ್ದ ಖುಷಿ ಹಂಚಿಕೊಂಡ ಹಾರ್ದಿಕ್ ಪಾಂಡ್ಯ : ಪತ್ನಿಯ ಸುಳಿವಿಲ್ಲ.. ಡಿವೋರ್ಸ್ ಕನ್ಫರ್ಮ್..?

ನಮ್ಮ ಟೀಂ ಇಂಡಿಯಾ ವಿಶ್ವಕಪ್ ತಮ್ಮದಾಗಿಸಿಕೊಂಡು ಬಹಳ ಸಂಭ್ರಮದಲ್ಲಿದೆ. ಗೆದ್ದ ಮರುದಿನವೇ ತವರಿಗೆ ಬರಲು ಆಗದೆ ಹೋದರು, ಈಗ ಬಂದಿರುವ ಟೀಂ ಇಂಡಿಯಾ ಸದಸ್ಯರನ್ನು ಎಲ್ಲರೂ ಕೊಂಡಾಡಿದ್ದಾರೆ. ಈಗಾಗಲೇ ಆಟಗಾರರ ಜೊತೆಗೆ ವಿಶ್ವಕಪ್ ಮೆರವಣಿಗೆಯೂ

ಜುಲೈ 21 ರಂದು ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 91 ನೇ ಸರ್ವ ಸದಸ್ಯರ ಸಭೆ

ಸುದ್ದಿಒನ್, ಚಿತ್ರದುರ್ಗ, ಜುಲೈ. 05 : ನಗರದ ಪ್ರತಿಷ್ಠಿತ ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 2023-24ನೇ ಸಾಲಿನ 91 ನೇ ಸರ್ವಸದಸ್ಯರ ಸಭೆಯನ್ನು ಜುಲೈ 21 ರ ಭಾನುವಾರ ಬೆಳಗ್ಗೆ 10:00

error: Content is protected !!