ವಾಲ್ಮೀಕಿ ನಿಗಮದ ನೌಕರನ ಆತ್ಮಹತ್ಯೆಗೆ ಟ್ವಿಸ್ಟ್ : 85 ಕೋಟಿ ಅವ್ಯವಹಾರದ ವಾಸನೆ..?

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕೌಂಟ್ ಸೂಪರಿಂಟೆಂಡೆಂಟ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಅವ್ಯವಹಾರದ ವಾಸನೆ ಬಡಿಯುತ್ತಿದೆ. 50 ವರ್ಷ ಚಂದ್ರಶೇಖರ್ , ಮೂಲತಃ ಶಿವಮೊಗ್ಗದವರು. ಬೆಂಗಳೂರಿನ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ನೇಣಿಗೆ ಕೊರಳೊಡ್ಡಿದ್ದಾರೆ. ಆರು ಪುಟಗಳ ಡೆತ್ ನೋಟ್ ಕೂಡ ಬರೆದಿಟ್ಟಿದ್ದಾರೆ.

ನಿಗಮದಲ್ಲಿ ಈ ಹಿಂದೆ 85 ಕೋಟಿ ಅವ್ಯವಹಾರ ನಡೆದಿತ್ತಂತೆ. ಹಣ ವರ್ಗಾವಣೆ ಒತ್ತಡ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಇಲಾಖೆಯ ಮೂವರ ಹೆಸರನ್ನು ಉಲ್ಲೇಖಿಸಿದ್ದಾರೆ. ನಿಗಮದ ಎಂಡಿ ಜೆ.ಪದ್ಮನಾಭ, ಖಾತೆ ವ್ಯವಸ್ಥಾಪಕ ಪರಶುರಾಮ್ ದುರ್ಗಣ್ಣನವರ್, ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕಿ ಶುಚಿಸ್ಮಿತ ಮೇಲೂ ಆರೋಪ ಹೊರಿಸಿದ್ದಾರೆ. ಅಲ್ಲದೆ, ಈ ಅವ್ಯವಹಾರದಲ್ಲಿ ನನ್ನ ಪಾತ್ರವಿಲ್ಲ ಅಂತ ಚಂದ್ರಶೇಖರ್ ಹೇಳಿದ್ದಾರೆ.

 

ಹಣವನ್ನು ಕಾನೂನು ಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ. ಯಾರದ್ದೋ ತಪ್ಪು ತನ್ನ ಮೇಲೆ ಹಾಕುತ್ತಿದ್ದಾರೆ ಅನ್ನೋ ಭಯವೂ ಡೆತ್​ನೋಟ್​ನಲ್ಲಿ ಕಾಣಿಸಿದೆ. ಒಟ್ಟಾರೆ, ವಿನೋಬನಗರ ಠಾಣೆಯ ಪೊಲೀಸರು ಡೆತ್​ನೋಟ್​ ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಮೃತರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ, ಬೇರೆ ಅಕೌಂಟ್‌ಗೆ ಹಣ ಹಾಕಲು ಹೇಳಿದ್ದಾರೆ. ಇದು ಅಕ್ರಮ ಅಂತ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪರನ್ನ ಗುರಿಯಾಗಿಸಿ ತಕ್ಷಣವೇ ಸಂಪುಟದಿಂದ ಕೈಬಿಡಲು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *