ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಯ್ತು ಪಾಂಡ್ಯಾ-ನತಾಶ ಡಿವೋರ್ಸ್

ಐಪಿಎಲ್ ನಿಂದ ಮುಂಬೈ ಇಂಡಿಯನ್ಸ್ ಹೀನಾಯವಾಗಿ ನಿರ್ಗಮನವಾದರೆ ಅತ್ತ ಹಾರ್ದಿಕ್ ಪಾಂಡ್ಯ ಪತ್ನಿಯೂ ಜೀವನದಿಂದಾನೇ ದೂರ ಹೋಗಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ನತಾಶ ಬೇರ್ಪಟ್ಟಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಹಬ್ಬಿದೆ. ಇದರ ನಡುವೆ ನತಾಶ ಹಾಗೂ ಹಾರ್ದಿಕ್ ಪಾಂಡ್ಯ ಇಬ್ಬರು ಮದುವೆಗೂ ಮುನ್ನ ಯಾರೆಲ್ಲ ಜೊತೆಗೆ ಡೇಟ್ ಮಾಡಿದ್ರು ಎಂಬ ವಿಚಾರವೂ ಸದ್ದು ಮಾಡುತ್ತಿದೆ. ಇದೀಗ ವೈರಲ್ ಆಗುತ್ತಿರುವ ವಿಚಾರ ಅಂದ್ರೆ ಒಂದು ವೇಳೆ ಇಬ್ಬರ ನಡುವೆ ಡಿವೋರ್ಸ್ ಆದ್ರೆ ಹಾರ್ದಿಕ್ ಪಾಂಡ್ಯ ತಮ್ಮ ಆಸ್ತಿಯಲ್ಲಿ ಶೇಕಡ 70ರಷ್ಟು ಜೀವನಾಂಶವನ್ನು ನತಾಶಗೆ ನೀಡಬೇಕಾಗುತ್ತದೆ.

ನತಾಶ ಸೆರ್ಬಿಯನ್ ದೇಶದವರು. ಜೀವನಾಂಶ ಪಡೆಯುವಾಗ ಆ ದೇಶದ ಕರೆನ್ಸಿಯಲ್ಲಿ ಪಡೆದರೆ 70% ಆಸ್ತಿ ನೀಡಬೇಕಾಗುತ್ತದೆ. ಆದರೆ ಹಾರ್ದಿಕ್ ಪಾಂಡ್ಯ 50% ಆಸ್ತಿಯನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂಬ ಆತ್ಮವಿಶ್ವಾಸದಿಂದ ಇದ್ದಾರೆ. ಯಾಕಂದ್ರೆ ಪಾಂಡ್ಯ ತನ್ನೆಲ್ಲಾ ಆಸ್ತಿಯನ್ನು ತನ್ನ ತಾಯಿ ನಳಿನಿ ಪಾಂಡ್ಯಾ ಹೆಸರಲ್ಲಿಯೇ ಮಾಡಿಟ್ಟಿದ್ದಾರೆ. ಹೀಗಾಗಿ ಕೋರ್ಟ್ ನಿಂದ ಆದೇಶ ಬಂದರೂ ಆಸ್ತಿ ಎಲ್ಲೂ ಹೋಗಲ್ಲ. ಹಾರ್ದಿಕ್ ಪಾಂಡ್ಯಾ ಹೆಸರಲ್ಲಿರುವ ಆಸ್ತಿಯಷ್ಟೇ ಹಂಚಿಕೆಯಾಗುತ್ತದೆ.

ನನ್ನ ಮೇಲೆ ನನಗೆ ನಂಬಿಕೆ ಇಲ್ಲ. ಹೀಗಾಗಿ ಆಸ್ತಿಯನ್ನೆಲ್ಲ ಅಮ್ಮ, ಸಹೋದರರ ಹೆಸರಲ್ಲಿ ಮಾಡಿದ್ದೇನೆ. ಹೀಗಾಗಿ ಶೇಕಡ 50 ರಷ್ಟು ಕೊಡುವುದಕ್ಕೂ ಆಗಲ್ಲ. ಯಾರಿಗೂ ಅಷ್ಟೆಲ್ಲ ಆಸ್ತಿ ನೀಡಲು ಇಷ್ಟವಿಲ್ಲ. ಹೀಗಾಗಿ ನಮ್ಮ ತಾಯಿ ಹೆಸರಿಗೆ ಆಸ್ತಿ ಮಾಡಿದ್ದೇನೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. ಹಾರ್ದಿಕ್ ಹಾಗೂ ನತಾಶ ಇಬ್ಬರು ಇನ್ನು ತಮ್ಮ ಡಿವೋರ್ಸ್ ವಿಚಾರವನ್ನು ಕನ್ಫರ್ಮ್ ಮಾಡಿಲ್ಲ.

Share This Article
Leave a Comment

Leave a Reply

Your email address will not be published. Required fields are marked *