ಬೆಂಗಳೂರು: ಬಿಟ್ ಕಾಯಿನ್ ಕೇಸ್ ರಾಜ್ಯದಲ್ಲಿ ಹುಟ್ಟಿಕೊಂಡಿದ್ದೇ ತಡ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕೆಸರೆರೆಚಾಟ ಶುರುವಾಗಿದೆ. ಒಬ್ಬರಿಗೊಬ್ಬರು ನೀವು ಸಿಕ್ಕಿ ಬೀಳ್ತೀರಾ, ನೀವೂ ಭಾಗಿಯಾಗಿದ್ದೀರಾ ಎಂಬ ಮಾತುಗಳನ್ನ ಹೇಳುತ್ತಿದ್ದಾರೆ. ಕಾಂಗ್ರೆಸ್ ನವರು ಬಿಜೆಪಿ ಮೇಲೆ ಬಿಜೆಪಿಯವರು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ಶಾಸಕ ಹ್ಯಾರೀಸ್ ಪುತ್ರ ಈ ದಂಧೆಯಲ್ಲಿ ಭಾಗಿಯಾಗಿದ್ದಾನೆಂದು ಬಿಜೆಪಿ ಆರೋಪ ಮಾಡಿತ್ತು.
ಬಿಜೆಪಿ ಆರೋಪಕ್ಕೆ ಹ್ಯಾರೀಸ್ ಪುತ್ರ ನಲಪಾಡ್ ತಿರುಗೇಟು ನೀಡಿದ್ದಾರೆ. ಬಿಜೆಪಿಗರು ನನ್ನನ್ನ ಅನಗತ್ಯವಾಗಿ ಎಳೆದು ತರುತ್ತಿದ್ದಾರೆ. ನಾನು ಬಿಟ್ ಕಾಯಿನ್ ಕೇಸ್ ನಲ್ಲಿ ಭಾಗಿಯಾಗಿಲ್ಲ. ಒಂದು ವೇಳೆ ನಾನು ಭಾಗಿಯಾಗಿದ್ದರೆ ನನ್ನನ್ನು ಬಂಧಿಸಲಿ.
ಬಿಟ್ ಕಾಯಿನ್ ವಿಚಾರಕ್ಕೆ ನನ್ನ ಶ್ರೀಕಿ ನಡುವೆ ಯಾವುದೇ ಮಾತುಕತೆಗಳು ನಡೆದಿಲ್ಲ. ಶ್ರೀಕಿ ಜೊತೆಗೆ ನನಗೆ ಸಂಪರ್ಕ ಇತ್ತು ನಿಜ. ಬಿಟ್ ಕಾಯಿನ್ ಹ್ಯಾಕ್ ಬಗ್ಗೆ ನನಗೇನು ಗೊತ್ತಿಲ್ಲ. ಜೊತೆಗೆ ಶ್ರೀಕಿಗೂ ನನಗೂ ಈಗ ಯಾವುದೇ ಸಂಪರ್ಕವಿಲ್ಲ. ನಾನು ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷನಾಗುತ್ತಿದ್ದೇನೆ. ಅದನ್ನ ತಪ್ಪಿಸಲು ಯಾರೋ ಹೀಗೆ ಮಾಡುತ್ತಿದ್ದಾರೆ. ನನ್ನದು ತಪ್ಪಿದ್ದರೆ ಬಂಧನ ಮಾಡಲಿ. ಸರ್ಕಾರಕ್ಕೆ ನನ್ನನ್ನು ಬಂಧಿಸಬಾರದು ಅಂತ ಹೇಳಿರೋದು ಯಾರು ಎಂದು ಪ್ರಶ್ನಿಸಿದ್ದಾರೆ.