Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವೈ.ಎ.ನಾರಾಯಣಸ್ವಾಮಿಯವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಿ : ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮೇ. 23 : ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಬಿಜೆಪಿ.ಯಿಂದ ಸ್ಪರ್ಧಿಸಿರುವ ವೈ.ಎ.ನಾರಾಯಣಸ್ವಾಮಿವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸರ್ಕಾರಿ ಕಲಾ ಕಾಲೇಜು(ಸ್ವಾಯತ್ರ) ಇಲ್ಲಿ ಉಪನ್ಯಾಸಕರು ಹಾಗೂ ಪ್ರಾಧ್ಯಾಪಕರುಗಳಲ್ಲಿ ಮನವಿ ಮಾಡಿದರು.

ನಾಲ್ಕನೆ ಬಾರಿಗೆ ಸ್ಪರ್ಧಿಸುತ್ತಿರುವ ವೈ.ಎ.ನಾರಾಯಣಸ್ವಾಮಿರವರು ಕಳೆದ ಹದಿನೆಂಟು ವರ್ಷಗಳಿಂದಲೂ ಶಿಕ್ಷಕರುಗಳ ಸಮಸ್ಯೆಗಳನ್ನು ಹತ್ತಿರದಿಂದ ಕಂಡಿದ್ದಾರೆ. ಹಾಗಾಗಿ ಶಿಕ್ಷಕರುಗಳ ನಾನಾ ಬೇಡಿಕೆಗಳು ಈಡೇರಬೇಕಾದರೆ ವೈ.ಎ.ನಾರಾಯಣಸ್ವಾಮಿರವರು ಗೆಲ್ಲಲೇಬೇಕು ಎಂದು ಪ್ರಾಧ್ಯಾಪಕರುಗಳಲ್ಲಿ ವಿನಂತಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪುರ ಮಾತನಾಡುತ್ತ ಸೇವಾ ಭದ್ರತೆಯಿಲ್ಲದೆ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಗಟ್ಟಿ ನಾಯಕತ್ವ ಬೇಕು. ನಮ್ಮ ಸರ್ಕಾರ ಅಧಿಕಾರಲ್ಲಿದ್ದಾಗ ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳವಾಯಿತು. ನಿಮ್ಮ ಪರವಾಗಿ ವೈ.ಎ.ನಾರಾಯಣಸ್ವಾಮಿರವರು ಸದನದಲ್ಲಿ ಸದಾ ಧ್ವನಿ ಎತ್ತುತ್ತಿರುತ್ತಾರೆ. ಅದಕ್ಕಾಗಿ ಈ ಬಾರಿಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸುವಂತೆ ಉಪನ್ಯಾಸಕರು ಹಾಗೂ ಪ್ರಾಧ್ಯಾಪಕರುಗಳಲ್ಲಿ ಕೋರಿದರು.

ಬಿಜೆಪಿ.ಗೆ ಶಿಕ್ಷಣ ಮೊದಲ ಆದ್ಯತೆ. ನಿಮ್ಮ ಪರವಾಗಿ ನಾವಿದ್ದೇವೆ. ವೈದ್ಯಕೀಯ ವಿಮೆ ಸೌಲಭ್ಯ ಸೇರಿದಂತೆ ಅನೇಕ ಬೇಡಿಕೆಗಳು ಈಡೇರಬೇಕಾಗಿದೆ. ಹಾಗಾಗಿ ಈ ಬಾರಿಯ ಚುನಾವಣೆ ಅತ್ಯಂತ ಮಹತ್ವದ್ದು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ತಿಪ್ಪೇರುದ್ರಸ್ವಾಮಿ, ಬಿಜೆಪಿ. ಜಿಲ್ಲಾಧ್ಯಕ್ಷ ಎ.ಮುರಳಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ಛಲವಾದಿ ತಿಪ್ಪೇಸ್ವಾಮಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಜಯಣ್ಣ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೇಮಾವತಿ ಲಿಂಕ್ ಕೆನಾಲ್ ಗೆ ವಿರೋಧ : ಇಂದು ತುಮಕೂರು ಬಂದ್

    ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಇಂದು ತುಮಕೂರು ಬಂದ್ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆಯಿಂದಾನೇ ಪ್ರತಿಭಟನೆ ಶುರುವಾಗಿದೆ. ನಿನ್ನೆಯೆಲ್ಲಾ ಶಾಸಕ ಸುರೇಶ್ ಗೌಡರು ಕೂಡ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇಂದು ತುಮಕೂರು

ನಂದಿನಿ ಹಾಲಿನ ದರ ಮತ್ತೆ ಏರಿಕೆ : ಪ್ರತಿ ಲೀ.2 ರೂ ಜಾಸ್ತಿ.. 50ML ಹಾಲು ಕೂಡ ಹೆಚ್ಚಳ

  ಬೆಂಗಳೂರು: ಈಗಾಗಲೇ ನಂದಿನಿ ಹಲಿನ ದರವನ್ನು ಹೆಚ್ಚಳ ಮಾಡಿಕೊಂಡಿದೆ. ಇದೀಗ ಮತ್ತೆ ಪ್ರತಿ ಲೀಟರ್ ಹಾಲಿನ ದರವನ್ನು 2 ರೂಪಾಯಿ ಹೆಚ್ಚಳ ಮಾಡಿದೆ. ಈ ಸಂಬಂಧ ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ

Brain Stroke Symptoms : ಬ್ರೈನ್ ಸ್ಟ್ರೋಕ್ ನ ಲಕ್ಷಣಗಳೇನು ಗೊತ್ತಾ ?

ಸುದ್ದಿಒನ್ : ಇತ್ತೀಚಿನ ದಿನಗಳಲ್ಲಿ ಕೇವಲ ವಯಸ್ಸಾದವರಷ್ಟೇ ಅಲ್ಲದೆ ಯುವಕರು ಕೂಡ ಪಾರ್ಶ್ವವಾಯುವಿಗೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಬ್ರೈನ್ ಸ್ಟ್ರೋಕ್ ಅತ್ಯಂತ ಭಯಾನಕವಾಗಿದೆ. ಅಧಿಕ ರಕ್ತದೊತ್ತಡದ ಸಮಸ್ಯೆಗಳು ಅನೇಕ ಬಾರಿ ಸ್ಟ್ರೋಕ್ ಗೆ  ಕಾರಣವಾಗುತ್ತದೆ.  ಸ್ಥೂಲಕಾಯತೆ

error: Content is protected !!