Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ : ರಾಹುಲ್ ಗಾಂಧಿ ವಿರುದ್ಧ ದೂರು ನೀಡಿದ ಜೆಡಿಎಸ್ ನಿಯೋಗ..!

Facebook
Twitter
Telegram
WhatsApp

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ ಪರಾರಿಯಾಗಿ ವಿದೇಶದಲ್ಲಿದ್ದಾರೆ. ಎಷ್ಟೇ ನೋಟೀಸ್ ಕೊಟ್ಟರು ದೇಶಕ್ಕೆ ಬರುವ ಮನಸ್ಸು ಮಾಡುತ್ತಿಲ್ಲ. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಿಯೋಗ ರಾಹುಲ್ ಗಾಂಧಿ ವಿರುದ್ಧ ದೂರು ನೀಡಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಜೆಡಿಎಸ್ ದೂರು ನೀಡಿದೆ.

ಪ್ರಜ್ವಲ್ ರೇವಣ್ಣ ಪ್ರಕರಣ ಬೆಳಕಿಗೆ ಬಂದಾಗ ರಾಹುಲ್ ಗಾಂಧಿ, ಇದು ನಾನೂರು ಮಹಿಳೆಯರ ಮೇಲೆ‌ ನಡೆದ ಮಾಸ್ ರೇಪ್ ಎಂದು ಹೇಳಿದ್ದರು. ಆ ಪ್ರಕರಣ ಸಂಬಂಧ ದೂರು ನೀಡಲಾಗಿದ್ದು, ಕ್ರಿಮಿನಲ್ ಕೇಸ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ. ರಂಗನಾಥ್ ಸೇರಿದಂತೆ ಹಲವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರನ್ನು ಭೇಟಿಯಾಗಿ, ದೂರು ಸಲ್ಲಿಸಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಅವರು ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಗಳಲ್ಲಿ ಮಾಸ್ ರೇಪ್ ಬಗ್ಗೆ ಮಾತನಾಡಿದ್ದರು. ಇದೇ ಮಾತನ್ನು ಮಾಧ್ಯಮಗಳ ಮುಂದೆಯೂ ಹೇಳಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದ್ದಾರೆ. ಈ ದೂರಿನ ಪತ್ರಕ್ಕೆ ಹೆಚ್.ಎಂ. ರಮೇಶ್ ಗೌಡ ಸಹಿ ಕೂಡ ಹಾಕಿದ್ದಾರೆ. ರಾಹುಲ್ ಗಾಂಧಿ ಅವರ ಹೇಳಿಕೆ ವಿದ್ಯುನ್ಮಾನ ಹಾಗೂ ಪ್ರಿಂಟ್ ಮಾಧ್ಯಮದಲ್ಲಿಯೂ ಮುದ್ರಣವಾಗಿದೆ. ಹೀಗಾಗಿ ಅವರ ಮೇಕೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

NEET PG 2024 Postponed : ಇಂದು ನಡೆಯಬೇಕಿದ್ದ ನೀಟ್ -UG ಪರೀಕ್ಷೆ ದಿಢೀರ್ ಮುಂದೂಡಿಕೆ : ಆಕ್ರೋಶಗೊಂಡ ವಿದ್ಯಾರ್ಥಿಗಳು

ನವದೆಹಲಿ : ನೀಟ್ -PG ಪರೀಕ್ಷೆಗೆ ಇಂದು ದಿನಾಂಕ ಫಿಕ್ಸ್ ಆಗಿತ್ತು. ಅದರಂತೆ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಎಲ್ಲಾ ರೀತಿಯ ತಯಾರಿಯನ್ನು ನಡೆಸಿದ್ದರು. ಶ್ರಮವಹಿಸಿ ಓದುತ್ತಿದ್ದ ಅದೆಷ್ಟೋ ವಿದ್ಯಾರ್ಥಿಗಳಿಗೆ ದಿಢೀರನೇ ಶಾಕಿಂಗ್ ನ್ಯೂಸ್ ಒಂದು

ಈ ರಾಶಿಯವರು ಎಲ್ಲಾ ಹೊಂದಿದ್ದು ಮನಶಾಂತಿ ಇಲ್ಲ

ಈ ರಾಶಿಯವರು ಎಲ್ಲಾ ಹೊಂದಿದ್ದು ಮನಶಾಂತಿ ಇಲ್ಲ ಭಾನುವಾರ- ರಾಶಿ ಭವಿಷ್ಯ ಜೂನ್-23,2024 ಸೂರ್ಯೋದಯ: 05:47, ಸೂರ್ಯಾಸ್ತ : 06:49 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2080, ಗ್ರೀಷ್ಮ ಋತು,

ವಿಟಮಿನ್ ಡಿ ಕೊರತೆಯಿಂದ ಉಂಟಾಗುವ ಸಮಸ್ಯೆಗಳೇನು  ಗೊತ್ತಾ ?

  ಸುದ್ದಿಒನ್ :  ವಿಟಮಿನ್ ಡಿ ದೇಹಕ್ಕೆ ಪ್ರಮುಖ ಪೋಷಕಾಂಶಗಳಲ್ಲಿ ಒಂದಾಗಿದೆ. ವಿಟಮಿನ್ ಡಿ ಕೊರತೆಯು ಮಾನಸಿಕ ಆರೋಗ್ಯ ಸಮಸ್ಯೆಗಳು ಸೇರಿದಂತೆ ವಿವಿಧ ರೋಗಗಳಿಗೆ ಕಾರಣವಾಗಬಹುದು ಎಂದು ಹಲವಾರು ಅಧ್ಯಯನಗಳಿಂದ ತಿಳಿದುಬಂದಿದೆ. 20 ರಿಂದ

error: Content is protected !!