ಇಂದಿನ ಎಲಿಮಿನೇಟ್ ಪಂದ್ಯಕ್ಕೆ ವಿಜಯ್ ಮಲ್ಯ ಟ್ವೀಟ್ : RCB ಬಗ್ಗೆ ಕಳವಳ

ಬೆಂಗಳೂರು: ಇಂದು ಎಲ್ಲರ ಚಿತ್ತ ಆರ್ಸಿಬಿ ಹಾಗೂ ರಾಜಸ್ಥಾನದ ಪಂದ್ಯದತ್ತ ನೆಟ್ಟಿದೆ. ಈ ಮ್ಯಾಚ್ ನೋಡುವುದಕ್ಕೆ ವಿಜಯ್ ಮಲ್ಯ ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ. ಟ್ವೀಟ್ ಮೂಲಕ ಆ ಚಡಪಡಿಕೆಯನ್ನು ಹೊರ ಹಾಕಿದ್ದಾರೆ. ‘ನಾನು ಆರ್ಸಿಬಿ ಪ್ರಾಂಚೈಸಿಗಾಗಿ ಬಿಡ್ ಮಾಡಿದಾಗ ಮತ್ತು ನಾನು ವಿರಾಟ್ ಕೊಹ್ಲಿಯನ್ನೇ ತಂಡಕ್ಕೆ ಸೇರಿಸಲು ಬಿಡ್ ಮಾಡಿದಾಗ ನನ್ನ ಒಳಗಿನ ಪ್ರವೃತ್ತಿ ಇದಕ್ಕಿಂತ ಉತ್ತಮ ಆಯ್ಕೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೀಗ ಐಪಿಎಲ್ ಟ್ರೋಫಿ ಪಡೆಯಲು ಆರ್ಸಿಬಿಗೆ ಉತ್ತಮ ಅವಕಾಶವಿದೆ ಎಂದು ನನ್ನ ಆಂತರಿಕ ಪ್ರವೃತ್ತಿ ಹೇಳುತ್ತಸೆ. ತಂಡಕ್ಕೆ ಒಳ್ಳೆಯದಾಗಲಿ’ ಎಂದು ಟ್ವೀಟ್ ಮಾಡಿ ಹಾರೈಸಿದ್ದಾರೆ.

ಆರ್ಸಿಬಿ ಮೊನ್ನೆಯಷ್ಟೇ ಸಿಎಸ್ಕೆ ಜೊತೆಗೆ ಸೆಣೆಸಾಡಿ, ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಾಗಲೂ ಮಲ್ಯ ವಿಶ್ ಮಾಡಿದ್ದರು. ಪ್ಲೇ ಆಫ್ ಗೆ ಅರ್ಹತೆ ಪಡೆದಿದ್ದಕ್ಕಾಗಿ ಆರ್ಸಿಬಿಗೆ ಅಭಿನಂದನೆಗಳು. ನಿರಾಶಾದಾಯಕ ಆರಂಭದ ಹಿರತಾಗಿಯೂ ಸತತ ಗೆಲುವುಗಳ ಮೂಲಕ ಈ ಹಂತಕ್ಕೆ ಏರಿದೆ. ಇದೇ ಹಾದಿಯಲ್ಲಿ ಮುನ್ನುಗ್ಗಿ ಟ್ರೋಫಿ ಗೆಲ್ಲುವುದೊಂದೇ ಬಾಕಿ ಎಂದಿದ್ದರು. ಇದೀಗ ಇಂದಿನ ಪಂದ್ಯಕ್ಕೂ ವಿಶ್ ಮಾಡಿದ್ದಾರೆ.

ವಿಜಯ್ ಮಲ್ಯ ಸಾಲದಿಂದಾಗಿ ಭಾರತ ಬಿಟ್ಟು ಲಂಡನ್ ನಲ್ಲಿ ವಾಸವಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹುಟ್ಟು ಹಾಕಿದ್ದೆ ವಿಜಯ್ ಮಲ್ಯ. 2008ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಬಿಡ್ಡಿಂಗ್ ನಲ್ಲಿ ಮಲ್ಯ ಅವರು ಆರ್ಸಿಬಿ ತಂಡವನ್ನು ಬರೋಬ್ಬರಿ 455 ಕೋಟಿಗೆ ಖರೀದಿ ಮಾಡಿದ್ದರು. ಇದೀಗ ಆರ್ಸಿಬಿ ತಂಡದ ಮಾಲೀಕತ್ವವನ್ನು ಯುನೈಟೆಡ್ ಸ್ಪಿರಿಟ್ಸ್ ಕಂಪನಿ ಹೆಸರಿನಲ್ಲಿ ಇದ್ದರು, ತಂಡದ ಮಾಲೀಕತ್ವದ ಶೇ.54.8ರಷ್ಟು ಭಾಗ ಡಿಯಾಜಿಯೋ ಕಂಪನಿಯ ಅಧೀನದಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *