ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ನ.13): ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಆಚರಣೆ ಕುರಿತು ಶನಿವಾರ ಸೊಸೈಟಿ ಆವರಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ಶತಮಾನೋತ್ಸವವನ್ನು ಅದ್ದೂರಿ ಹಾಗೂ ವರ್ಣರಂಜಿತವಾಗಿ ಆಚರಿಸುವ ಕುರಿತು ಅನೇಕ ಹಿರಿಯ ಸದಸ್ಯರುಗಳು ಸಲಹೆ ಸೂಚನೆಗಳನ್ನು ಪೂರ್ವಭಾವಿ ಸಭೆಯಲ್ಲಿ ನೀಡಿದರು.
ಶತಮಾನೋತ್ಸವಕ್ಕೆ ಹಣ ಹಾಗೂ ಸಂಪನ್ಮೂಲ ಕ್ರೂಢೀಕರಣ, ಉಪಸಮಿತಿಗಳ ರಚನೆ, ನೆನಪಿನ ಕಾಣಿಕೆ, ಯಾರ್ಯಾರಿಗೆ ಯಾವ ಜವಾಬ್ದಾರಿ ನೀಡಬೇಕೆನ್ನುವ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು.
ಹಿರಿಯ ಸದಸ್ಯರುಗಳ ಸಲಹೆ ಸೂಚನೆಗಳನ್ನು ಆಲಿಸಿ ಮಾತನಾಡಿದ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ಕಳೆದ ತಿಂಗಳು ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ನಡೆದ 104 ನೇ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಮಹಾಸಭೆಯಲ್ಲಿ ಬಹುತೇಕ ಸದಸ್ಯರುಗಳು ಡಿವಿಡೆಂಟ್ ಹಣವನ್ನು ಶತಮಾನೋತ್ಸವಕ್ಕೆ ಬಳಸಿಕೊಳ್ಳುವಂತೆ ಒಪ್ಪಿಗೆ ನೀಡಿದ್ದಾರೆ.
ಅದರಂತೆ ಎಲ್ಲರ ಮಾರ್ಗದರ್ಶನ ಸಹಕಾರ ಪಡೆದು ಶತಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಭರವಸೆ ನೀಡಿದರು.
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಹಿರಿಯ ಸದಸ್ಯರುಗಳಾದ ಮುಕುಂದರಾವ್, ಎಂ.ಸಿ.ಓ.ಬಾಬು, ವಸಂತರಾವ್, ಕೃಷ್ಣಪ್ಪ, ಜಿ.ಸಿ.ಸುರೇಶ್‍ಬಾಬು, ಡಿ.ಎನ್.ಮೈಲಾರಪ್ಪ, ಟಿ.ಕೆ.ಬಸವರಾಜ್, ಸೈಫುಲ್ಲಾ, ಮುಜೀಬುಲ್ಲಾ, ರಮೇಶ್ ಸೆಂಟ್ರಿಂಗ್, ಹೆಚ್.ಶ್ರೀನಿವಾಸ್, ಎನ್.ಎಂ.ಪುಷ್ಪವಲ್ಲಿ, ಬಿ.ಎಸ್.ಕೃಷ್ಣ, ಮುದ್ದುರಂಗಪ್ಪ, ನೀಲಪ್ಪ, ಮುರುಗೇಶ್, ಅನ್ವರ್‍ಪಾಷ ಇನ್ನು ಅನೇಕರು ಉಪಯುಕ್ತ ಸಲಹೆಗಳನ್ನು ನೀಡಿದರು.
ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಡಾ.ರಹಮತ್‍ವುಲ್ಲಾ, ನಿರ್ದೇಶಕರುಗಳಾದ ನಾಗರಾಜ್‍ಬೇದ್ರೆ, ಸೂರ್ಯಪ್ರಕಾಶ್, ಚಂದ್ರಣ್ಣ, ಚಿಕ್ಕಣ್ಣ, ಶ್ರೀನಿವಾಸ್‍ಮೂರ್ತಿ, ಸೊಸೈಟಿಯ ವ್ಯವಸ್ಥಾಪಕ ಮಹಮದ್ ನಯೀಂ ವೇದಿಕೆಯಲ್ಲಿದ್ದರು.