ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ ಜಾಮೀನು ಪಡೆದು ರಿಲ್ಯಾಕ್ಸ್ ಮೂಡಿನಲ್ಲಿದ್ದರು. ಆದರೆ ಆತಂಕ ಮಾತ್ರ ತಪ್ಪಿರಲಿಲ್ಲ. ಇದೀಗ ಕೋರ್ಟ್ ನಿಂದ ಜಾಮೀನು ಸಿಕ್ಕಿದ್ದು ರಿಲ್ಯಾಕ್ಸ್ ಆಗಿದ್ದಾರೆ.
ಈ ಬಾರಿಯೂ ಕೋರ್ಟ್ ನಿಂದ ಐದು ಲಕ್ಷ ರೂಪಾಯಿಗಳ ಬಾಂಡ್ ಪೇಪರ್ ಹಾಗೂ ಒಬ್ಬರ ಶ್ಯೂರಿಟಿಯೊಂದಿಗೆ ಜಾಮೀನು ನೀಡಲಾಗಿದೆ. ಕಳೆದ ವಾರವೇ ಈ ಜಾಮೀನಿ ಅರ್ಜಿಯ ವಿಚಾರಣೆ ನಡೆದಿತ್ತು ವಾದ-ಪ್ರತಿವಾದಗಳನ್ನು ಆಲಿಸಿ ಇಂದಿಗೆ ಕೋರ್ಟ್ ತೀರ್ಪು ಕಾದಿರಿಸಿತ್ತು. ಅದರಂತೆ ಜಾಮೀನು ನೀಡಿದೆ. ಇನ್ನು ಜಾಮೀನು ವೇಳೆ ಎಸ್ಐಟಿ ತಮ್ಮ ವಾದವನ್ನು ಕೇಳಲು ಮನವಿ ಮಾಡಿಕೊಂಡಿತ್ತು. ಆದರೆ ಈ ವೇಳೆ ಕೋರ್ಟ್ ಎಸ್ಐಟಿ ಮನವಿಯನ್ನು ತಿರಸ್ಕಾರ ಮಾಡಿದೆ.
ನ್ಯಾಯಾಧೀಶರಾದ ಪ್ರಿತ್ ಜೆ. ಅವರು ಈಗಾಗಲೇ 436 ಅರ್ಜಿ ಮಾನ್ಯವಾಗಿದೆ. ಬೇಲಬಲ್ ಸೆಕ್ಷನ್ ಇರುವ ಕಾರಣ ಆದೇಶ ನೀಡಿದ್ದೇನೆ ಎಂದರು. ಇನ್ನು ಜಾಮೀನು ಮಂಜೂರು ಮಾಡಿ, ಶ್ಯೂರಿಟಿ ಪ್ರೊಸಿಜರ್ ಮುಗಿಸಲು ಸೂಚನೆ ನೀಡಿತು
ಮನೆ ಕೆಲಸದ ಮಹಿಳೆಗೆ ಲೈಂಗಿಕ ಕಿರುಕುಳ ಹಾಗೂ ಕಿಡ್ನ್ಯಾಪ್ ಕೇಸಿನಲ್ಲಿ ರೇವಣ್ಣ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಆದರೆ ಅದು ಮಾನ್ಯವಾಗಿರಲಿಲ್ಲ ಎಂದು ಎಸ್ಐಟಿ ತಕರಾರು ತೆಗೆದಿತ್ತು. ಜಾಮೀನು ಕೊಡಬಾರದು ಎಂದು ಮನವಿಮಾಡಿಕೊಂಡಿತ್ತು. ಹೀಗಾಗಿ ಬೇಲಬಲ್ ಇದ್ದ ಕಾರಣ ರೇವಣ್ಣ ಕೋರ್ಟ್ ಗೆ ಶರಣಾಗಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಕೋರ್ಟ್ ಪರಿಶೀಲನೆ ನಡೆಸಿ, ಜಾಮೀನು ಮಂಜೂರು ಮಾಡಿದೆ.