ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ ಕೋರಿದ ಎಸ್ ಆರ್ ಎಸ್ ಹೆರಿಟೇಜ್ ಶಾಲೆ

1 Min Read

 

ಸುದ್ದಿಒನ್, ಚಿತ್ರದುರ್ಗ, ಮೇ. 20 : ಎಸ್ ಆರ್ ಎಸ್ ಹೆರಿಟೇಜ್ ಶಾಲೆಯು 2024-25 ರ ಶೈಕ್ಷಣಿಕ ವರ್ಷ ಸೋಮವಾರದಿಂದ ಆರಂಭಗೊಂಡಿದ್ದು ಬೇಸಿಗೆ ರಜಾ ಮುಗಿಸಿಕೊಂಡು ಶಾಲೆಯತ್ತ ಮುಖ ಮಾಡಿದ ವಿದ್ಯಾರ್ಥಿಗಳನ್ನು ಶಾಲಾ ಪ್ರಾರಂಭೋತ್ಸವದ ಮೊದಲನೇ ದಿನ ಶಾಲೆಯನ್ನು ವಿನೂತನವಾಗಿ
ಬೆಳಗ್ಗೆ ಶಾಲಾ ಆವರಣದಲ್ಲಿ ತಳಿರು ತೋರಣ ಕಟ್ಟಿ,  ಹೂವುಗಳಿಂದ ಸಿಂಗರಿಸಿ, ರಂಗೋಲಿ ಬಿಡಿಸಿ ಶೃಂಗಾರ ಮಾಡಲಾಗಿತ್ತು. ಬೇಸಿಗೆ ರಜೆಯಿಂದಾಗಿ ಮನೆಯ ಬಳಿ ಆಟವಾಡಿಕೊಂಡಿದ್ದ ಮಕ್ಕಳು, ಸೋಮವಾರ ಶಾಲಾ ಸಮವಸ್ತ್ರ ಧರಿಸಿ, ಖುಷಿಯಿಂದ ಬಂದ ವಿದ್ಯಾರ್ಥಿಗಳು ಪರಸ್ಪರ ಸ್ನೇಹಿತರೊಂದಿಗೆ ಕುಶಲೋಪರಿ ವಿಚಾರಿಸಿ ಸಂಭ್ರಮಿಸಿದರು.

ನಂತರ ವಿದ್ಯಾರ್ಥಿಗಳನ್ನು ಕರ್ನಾಟಕದ ಪ್ರಸಿದ್ಧ ಜಾನಪದ ನೃತ್ಯಗಳಲ್ಲಿ ಒಂದಾದ ವೀರಗಾಸೆ ನೃತ್ಯದ ಮೂಲಕ ಆತ್ಮೀಯವಾಗಿ ಸ್ವಾಗತಿಸುವ ಮೂಲಕ ಶಾಲಾರಂಭ ಕಾರ್ಯಕ್ರಮಕ್ಕೆ ಮೆರಗು ತಂದು, ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಸಂಭ್ರಮ ಮತ್ತು ಸಡಗರದಿಂದ ಸ್ವಾಗತಿಸಲಾಯಿತು.

ವಿದ್ಯಾರ್ಥಿಗಳನ್ನು ಪೋಷಕರು ತುಂಬಾ ಸಡಗರದಿಂದ ಶಾಲೆಗೆ ಕರೆ ತಂದರು, ಹಾಗೆಯೇ ಇಲ್ಲಿನ ಸಂಭ್ರಮದ ವಾತಾವರಣ ಮತ್ತು ವೀರಗಾಸೆ ನೃತ್ಯವನ್ನು ಕಂಡ ಪೋಷಕರು ಮೂಕ ವಿಸ್ಮಿತರಾಗಿ ವೀಕ್ಷಿಸಿದರು ಮತ್ತು ಸಂತಸಗೊಂಡರು, ನಂತರ ಶಿಕ್ಷಕರು ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ತಿಲಕವಿಟ್ಟು ಹಾಗೂ ಹೂ ಮತ್ತು ಅಕ್ಷತೆಯನ್ನು ಹಾಕುವುದರೊಂದಿಗೆ ಸ್ವಾಗತಿಸಿದರು.

ನಂತರ ವಿದ್ಯಾರ್ಥಿಗಳು ಹೊಸ ಹುರುಪಿನಿಂದ ತಮ್ಮ ತಮ್ಮ ಶಾಲಾ ಕೊಠಡಿಗಳಿಗೆ ತೆರಳಿದರು. ಆಡಳಿತ ಮಂಡಳಿಯು ಶಾಲೆಯ ಪುನಾರಾರಂಭವಾಗಿದ್ದನ್ನು ಕಂಡು ಸಂತೋಷಗೊಂಡು ಹಾಗೂ ಶುಭಕೋರಿದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ  ಉಪಾಧ್ಯಕ್ಷರು, ಎಸ್.ಆರ್.ಎಸ್. ಶಿಕ್ಷಣ ಸಮೂಹ ಸಂಸ್ಥೆಯ ಉಪಾಧ್ಯಕ್ಷರಾದ ಅಮೋಘ ಬಿ. ಎಲ್, ಆಡಳಿತಾಧಿಕಾರಿ
ಡಾ||ರವಿ ಟಿ ಎಸ್, ಶಾಲೆಯ ಪ್ರಾಂಶುಪಾಲರಾದ  ಪ್ರಭಾಕರ್ ಎಮ್ ಎಸ್, ಶ್ರೀಮತಿ ಅರ್ಪಿತ ಎಮ್ ಎಸ್ ಮತ್ತು ಕೋ-ಆರ್ಡಿನೇಟರ್‍ಗಳು, ಶಾಲೆಯ ಬೋಧಕ ಮತ್ತು ಬೋಧಕೇತರ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸುವುದರೊಂದಿಗೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಹಾಗೂ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.

Share This Article
Leave a Comment

Leave a Reply

Your email address will not be published. Required fields are marked *