ಸವಾಲುಗಳ ನಡುವೆಯೇ ಜಯಭೇರಿ ಬಾರಿಸಿದ ಸಿದ್ದರಾಮಯ್ಯ ಸರ್ಕಾರ : ಇಂದಿಗೆ ಒಂದು ವರ್ಷ

1 Min Read

 

2023 ಮೇ 20ರಂದು ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಿತ್ತು, ಸಿದ್ದರಾಮಯ್ಯ ಅವರು ಸಿಎಂ ಆಗಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದರು. ಇಂದಿಗೆ ಆ ಸಂಭ್ರಮದ ದಿನಕ್ಕೆ ವರ್ಷದ ಸಂಭ್ರಮ. ಸಿದ್ದರಾಮಯ್ಯ ಸರ್ಕಾರ ರಚನೆಗೂ ಮುನ್ನ, ರಚನೆಯಾದ ಮೇಲೆ ಸಾಕಷ್ಟು ಸವಾಲುಗಳನ್ನು ಎದುರಿಸಿದೆ. ಆದರೆ ಈ ಎಲ್ಲಾ ಸವಾಲುಗಳ ನಡುವೆ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಯಶಸ್ವಿ ಕೂಡ ಆಗಿದೆ.

ಸಿದ್ದರಾಮಯ್ಯ ಸರ್ಕಾರ ರಚನೆಯಾದ ಮೇಲೆ‌ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿತು. ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಅಂತಹ ಯೋಜನೆಗಳನ್ನು ಬಡವರಿಗಾಗಿಯೇ ತಂದಿತ್ತು. ಆದರೆ ಅನ್ನಭಾಗ್ಯ ಯೋಜನೆಗೆ ಸಾಕಷ್ಟು ಸವಾಲು ಎದುರಾಗಿತ್ತು. ಕೇಂದ್ರದಿಂದ ಕೊಡ್ತೀವಿ ಎಂದಿದ್ದ ಅಕ್ಕಿಯನ್ನು ಕೊಡಲಿಲ್ಲ. ಬಳಿಕ ಆ ಅಕ್ಕಿಗೆ ಸಮನಾಗಿ ಹಣವನ್ನು ನೀಡುತ್ತಿದೆ. ಈ ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ನಷ್ಟದಿಂದ ಕುಸಿಯುತ್ತೆ ಎಂದೇ ಬಿಜೆಪಿ ಪಕ್ಷ ವ್ಯಂಗ್ಯವಾಡಿತ್ತು. ಆದರೆ ಒಂದು ವರ್ಷ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

ಬರಗಾಲದಿಂದ ತತ್ತರಿಸಿದ್ದ ರಾಜ್ಯದ ಜನತೆಗೆ ಬರ ಪರಿಹಾರ ಕೊಡಿಸಲು ಸಾಕಷ್ಟು ಶ್ರಮ ಹಾಕಿತ್ತು. ಕೇಂದ್ರ ಸರ್ಕಾರದ ತನಕ ಎಲ್ಲಾ ಶಾಸಕರ, ಸಚಿವರನ್ನು ಕರೆದುಕೊಂಡು ಹೋಗಿ ಹೋರಾಟ ಕೂಡ ಮಾಡಿದ್ದರು. ಹೀಗೆ ನಾನ ಸವಾಲುಗಳನ್ನು ಎದುರಿಸಿ, ಇಂದಿಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಇದರ ನಡುವೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸದಾ ಸರ್ಕಾರ ಉರುಳುವ ಮಾತನ್ನೇ ಆಡುತ್ತಾರೆ. ಲೋಕಸಭೆಯ ಬಳಿಕ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಲ್ಲ ಅಂತಾನೇ ನುಡಿದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *