Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

Facebook
Twitter
Telegram
WhatsApp

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಪ್ರಚಾರದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ನಿವೃತ್ತ ಶಿಕ್ಷಕರು ಹಾಗೂ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಈಗಾಗಲೇ ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣಾ ಸಂದರ್ಭ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಜೊತೆಗೆ ಹಳೇ ಪಿಂಚಣಿ ವ್ಯವಸ್ಥೆ ಮರುಜಾರಿಗೆ ಸಿಎಂ ಸಿದ್ದರಾಮಯ್ಯ ಸಕಲ ಸಿದ್ಧತೆ ಕೈಗೊಂಡಿದ್ದಾರೆ ಎಂದರು.

ಕೊಟ್ಟ ಮಾತು ತಪ್ಪದ ಸಿಎಂ ಎಂದೇ ನಾಡಿನಲ್ಲಿ ಖ್ಯಾತಿ ಗಳಿಸಿರುವ ಸಿದ್ದರಾಮಯ್ಯ, ಈಗಾಗಲೇ ಶಿಕ್ಷಕರ 30 ಬೇಡಿಕೆಗಳಲ್ಲಿ ಹಲವನ್ನು ಈಡೇರಿಸಿದ್ದಾರೆ. ಮುಖ್ಯವಾಗಿ ಹಳೇ ಪಿಂಚಣಿ ಪದ್ದತಿ ಮರುಜಾರಿಗೆ, 7ನೇ ವೇತನ, ಶಿಕ್ಷಕರಿಗೆ ಜೀವನ ಭದ್ರತೆ ಒದಗಿಸಲು ಮುಂದಾಗಿರುವುದು ಸರ್ಕಾರಿ ನೌಕರರ ಪಾಲಿಗೆ ಬಹುದೊಡ್ಡ ಸಿಹಿ ಸುದ್ದಿ ಆಗಲಿದೆ ಎಂದರು.

ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅನುಮೋದನೆ, ಉದ್ಯೊಗ ಕಾಯಂ ಸೇರಿದಂತೆ ಅನೇಕ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಡೇರಿಸಲಿದ್ದಾರೆ ಎಂದು ತಿಳಿಸಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿರುವ ಡಿ.ಟಿ.ಶ್ರೀನಿವಾಸ್, ಕೆಎಎಸ್ ಅಧಿಕಾರಿ ಹುದ್ದೆ ತ್ಯಜಿಸಿ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಅಪರೂಪದ ರಾಜಕಾರಣಿ. ಅವರ ಗೆಲುವು ಶಿಕ್ಷಕ ವರ್ಗದ ಪರ ವಿಧಾನಪರಿಷತ್‍ನಲ್ಲಿ ಧ್ವನಿಯಾಗಲು ಸಹಕಾರಿ ಆಗಲಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಎ.ಕೃಷ್ಣಪ್ಪ ಅಂತಹ ದಿಗ್ಗಜ ರಾಜಕಾರಣಿಯ ಕುಟುಂಬದ ಸದಸ್ಯ ಡಿ.ಟಿ.ಶ್ರೀನಿವಾಸ್, ಸರ್ಕಾರದ ಮಟ್ಟದಲ್ಲಿ ಹೆಚ್ಚು ಪ್ರಭಾವಿ. ಅವರ ಗೆಲುವು ಶಿಕ್ಷಕರ ಬೇಡಿಕೆಗಳ ಈಡೇರಿಕೆಗೆ ಸುಲಭ ಹಾದಿ ಆಗಲಿದೆ ಎಂದರು.

ವಿದ್ಯಾವಂತ, ಸಹನಮೂರ್ತಿ ಆಗಿರುವ ಡಿ.ಟಿ.ಶ್ರಿನಿವಾಸ್, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದು, ಶಿಕ್ಷಕರ ಸಮಸ್ಯೆಗಳ ಅರಿವು ಅವರಲ್ಲಿದೆ. ಇಂತಹ ವ್ಯಕ್ತಿ ವಿಧಾನಪರಿಷತ್ ಪ್ರವೇಶಿಸಿದರೆ ಶಿಕ್ಷಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಹೇಳಿದರು.

ಜೊತೆಗೆ ರಾಜ್ಯದಲ್ಲಿ ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷವೇ ಆಡಳಿತದಲ್ಲಿದ್ದು, ಪಕ್ಷದಿಂದ ಸ್ಪರ್ಧಿಸಿರುವ ಶ್ರೀನಿವಾಸ್ ಪರಿಷತ್ ಸದಸ್ಯರಾಗುವುದರಿಂದ ಶಿಕ್ಷಕರು, ವಿದ್ಯಾವಂತ ಯುವಜನರಿಗೆ ಹೆಚ್ಚು ಅನುಕೂಲ ಆಗಲಿದೆ. ಆದ್ದರಿಂದ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಿಕೊಳ್ಳಬೇಕು ಎಂದರು.

ಮೂರು ವರ್ಷದಿಂದ ಶಿಕ್ಷಕರ ಸಮಸ್ಯೆ ಆಲಿಸಿ ಪಟ್ಟಿ ಮಾಡಿಕೊಂಡಿರುವ ಶ್ರೀನಿವಾಸ್, ಹಲವು ಬಾರಿ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದ ಸಚಿವರನ್ನು ಭೇಟಿ ಮಾಡಿ ಬೇಡಿಕೆ ಈಡೇರಿಸುವಂತೆ ಒತ್ತಡ ತರುತ್ತಿದ್ದಾರೆ. ಪರಿಷತ್ ಸದಸ್ಯರಾದರೆ ಅವರ ಕೂಗು ಸರ್ಕಾರದ ಮಟ್ಟದಲ್ಲಿ ಬಲ ಪಡೆದುಕೊಂಡು, ಶಿಕ್ಷಕ ವರ್ಗಕ್ಕೆ ಅನುಕೂಲ ಆಗಲಿದೆ ಎಂದು ಹೇಳಿದರು.

ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಡಾ.ಬಿ.ಪಿ.ತಿಪ್ಪೇಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಢಾನ ಸಮಿತಿ ಜಿಲ್ಲಾಧ್ಯಕ್ಷ ಶಿವಣ್ಣ ಹಾಗೂ ಶಿಕ್ಷಕ ಸಂಘದ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಜುಲೈ 21 ರಂದು ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 91 ನೇ ಸರ್ವ ಸದಸ್ಯರ ಸಭೆ

ಸುದ್ದಿಒನ್, ಚಿತ್ರದುರ್ಗ, ಜುಲೈ. 05 : ನಗರದ ಪ್ರತಿಷ್ಠಿತ ಶ್ರೀ ಕನ್ಯಕಾಪರಮೇಶ್ವರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 2023-24ನೇ ಸಾಲಿನ 91 ನೇ ಸರ್ವಸದಸ್ಯರ ಸಭೆಯನ್ನು ಜುಲೈ 21 ರ ಭಾನುವಾರ ಬೆಳಗ್ಗೆ 10:00

Garlic Benefits : ಬೆಳ್ಳುಳ್ಳಿಯನ್ನು ಹೀಗೆ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು…!

ಸುದ್ದಿಒನ್ : ಬೆಳ್ಳುಳ್ಳಿ ಮಾನವನ ಆರೋಗ್ಯಕ್ಕೆ ಜೀವರಕ್ಷಕವಾಗಿದೆ. ಬೆಳ್ಳುಳ್ಳಿ ವಿವಿಧ ರೋಗಗಳನ್ನು ನಿವಾರಿಸುತ್ತದೆ. ಬೆಳ್ಳುಳ್ಳಿ ತಿನ್ನುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಇದು ಆಂಟಿಆಕ್ಸಿಡೆಂಟ್ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ಅನೇಕ ರೋಗಗಳ ವಿರುದ್ಧ ಹೋರಾಡಲು

ಈ ರಾಶಿಯವರಿಗೆ ಅಷ್ಠಮ ಸ್ಥಾನದ ಶನಿಯಿಂದ ದಂಪತಿಗಳಿಗೆ ಕುಟುಂಬ ಕಲಹ, ಹಣಕಾಸಿನ ತೊಂದರೆ

ಈ ರಾಶಿಯವರಿಗೆ ಅಷ್ಠಮ ಸ್ಥಾನದ ಶನಿಯಿಂದ ದಂಪತಿಗಳಿಗೆ ಕುಟುಂಬ ಕಲಹ, ಹಣಕಾಸಿನ ತೊಂದರೆ, ಉದ್ಯೋಗದಲ್ಲಿ ಕಿರಿ ಕಿರಿ, ಪ್ರೇಮಿಗಳಿಗೆ ವಿರಸ, ಶನಿವಾರ- ರಾಶಿ ಭವಿಷ್ಯ ಜುಲೈ-6,2024 ಸೂರ್ಯೋದಯ: 05:51, ಸೂರ್ಯಾಸ್ತ : 06:50 ಶಾಲಿವಾಹನ

error: Content is protected !!