ಚಿತ್ರದುರ್ಗ. ಮೇ.17 : ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದ್ದು ಸಂಜೆ 6 ಗಂಟೆಯ ನಂತರ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಮಳೆ ಆರಂಭವಾಗಿ ಅರ್ಧ ಗಂಟೆಯ ನಂತರವೂ ಮಳೆ ಮುಂದುವರೆದಿದ್ದು ಉತ್ತಮವಾಗಿ ಮಳೆಯಾಗುತ್ತಿದೆ.
ಮೇ 17 ರಿಂದ 21ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.
ಗುರುವಾರ ಸುರಿದ ಮಳೆ ವಿವರದನ್ವಯ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರದಲ್ಲ್ಲಿ 26.2 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಪ್ರಮಾಣದ ಮಳೆಯಾಗಿದೆ.
ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರದಲ್ಲಿ 15.2 ಮಿ.ಮೀ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನ ಹಿರಿಯೂರಿನಲ್ಲಿ 1.6ಮಿ.ಮೀ, ಇಕ್ಕನೂರಿನಲ್ಲಿ 15.4ಮಿ.ಮೀ, ಬಬ್ಬೂರಿನಲ್ಲಿ 3 ಮಿ.ಮೀ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 0.8ಮಿ.ಮೀ ರಾಮಗಿರಿಯಲ್ಲಿ 6.4ಮಿ.ಮೀ, ಬಿ.ದುರ್ಗದಲ್ಲಿ 7.2 ಮಿ.ಮೀ, ಹೆಚ್.ಡಿ.ಪುರದಲ್ಲಿ 16.6 ಮಿ.ಮೀ ಮಳೆಯಾಗಿದೆ.
ಹೊಸದುರ್ಗ ತಾಲ್ಲೂಕಿನ ಬಾಗೂರು 6.2 ಮಿ.ಮೀ, ಮಾಡದಕೆರೆ 3.2 ಮಿ.ಮೀ, ಶ್ರೀರಾಂಪುರದಲ್ಲಿ 4 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ-2ರಲ್ಲಿ 1.6 ಮಿ.ಮೀ, ಭರಮಸಾಗರ 7.2 ಮಿ.ಮೀ, ಸಿರಿಗೆರೆ 2.2 ಮಿ.ಮೀ, ಐನಹಳ್ಳಿಯಲ್ಲಿ 14.8 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.