ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಮೇ. 17 : ನಾನು ನನ್ನ ಶಾಸಕ ಸ್ಥಾನ ಅವಧಿ ಮುಗಿದ ಮೇಲೆ ಬೇರೆ ಪಕ್ಷಕ್ಕೆ ಹೋಗಿದ್ದೇನೆ. ಆದರೆ ಬಿಜೆಪಿಯವರ ಇನ್ನು ಅಧಿಕಾರದಲ್ಲಿ ಅಧಿಕಾರ ಮಾಡಬೇಕೆಂದು 17 ಜನ ಶಾಸಕರನ್ನು ಕರೆದು ಕೊಂಡು ಹೋದರಲ್ಲ ಇದಕ್ಕೆ ಏನನ್ನ ಬೇಕು. ಇದು ಪಕ್ಷ ದ್ರೋಹ ಅಲ್ಲವಾ ಎಂದು ಮಾಜಿ ಶಾಸಕಿ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಷತ್ ಚುನಾವಣೆಯಲ್ಲಿ ಪಕ್ಷ ದ್ರೋಹ ಮಾಡಿದವರನ್ನು ಸೋಲಿಸಿ ಎಂಬ ನಾರಾಯಣಸ್ವಾಮಿಯ ಮಾತಿಗೆ ಪ್ರತಿಕ್ರಿಯಿಸಿದ ಅವರು, ನಾನು ಬಿಜೆಪಿ ಶಾಸಕರಾಗಿ ಐದು ವರ್ಷ ಪಕ್ಷ ನೀಡಿದ ಸೂಚನೆಯನ್ನು ಕಾಲಿನಲ್ಲಿ ತೋರಿಸಿದ್ದನ್ನು ತಲೆಯ ಮೇಲೆ ಹೊತ್ತುಕೊಂಡು ಮಾಡಿದ್ದೇನೆ. ಈ ಸಮಯದಲ್ಲಿಯೇ ತನ್ನ ಪತಿಯವರಿಗೆ ಪರಿಷತ್ ಸ್ಥಾನದ ಟೀಕೇಟ್ ನೀಡಿ ಎಂದು ಸಹಾ ಕೇಳಿದ್ದೆ ಆದರೆ ಆಗ ಮಾತನಾಡದವರು ಈಗ ಬೇರೆ ಪಕ್ಷದಲ್ಲಿ ಇದ್ದಾರೆ ಎಂದು ಮಾತನಾಡುತ್ತಿದ್ದಾರೆ. ನನಗೆ ನನ್ನ ಕುಟುಂಬ ಸಂಸ್ಕಾರವನ್ನು ಕಲಿಸಿದ್ದಾರೆ ಅವರನ್ನು ಅಣ್ಣ ಎಂದೇ ಕರೆಯುತ್ತೇನೆ. ರಾಜಕೀಯ ನಿಂತ ನೀರಲ್ಲ ಕೆಲವೂ ಬದಲಾವಣೆಗಳು ಅನಿವಾರ್ಯತೆಯಾಗುತ್ತವೆ. ಹಾಗಾಗಿ ನಾನು ಬದಲಾವಣೆಯನ್ನು ಮಾಡಿದ್ದೇನೆ ಎಂದರು.
ಪಕ್ಷದಲ್ಲಿ ಇದ್ದು ಪಕ್ಷಕ್ಕೆ ದ್ರೋಹ ಮಾಡಿ ಮಧ್ಯದಲ್ಲಿ ಬಿಟ್ಟಿಲ್ಲ, ಶಾಸಕರಾಗಿ ಮತವನ್ನು ನೀಡಿದ ಹಿರಿಯೂರು ಮತದಾರರಿಗೆ ಪ್ರಮಾಣೀಕವಾಗಿ ಸೇವೆಯನ್ನು ಸಲ್ಲಿಸಿದ್ದೆನೆ, ಈ ಸಲ ಚುನಾವಣೆಯನ್ನು ನಾನಾ ಕಾರಣಗಳಿಂದ ಮತದಾರರನ್ನು ನನನ್ನು ಕೈಬಿಟ್ಟಿದ್ದಾರೆ. ಎರಡನೇ ಸ್ಥಾನವನ್ನು ನೀಡಿದ್ದಾರೆ. ಈ ಸಮಯದಲ್ಲಿ ನನ್ನ ಕುಟುಂನ ಹಿತೈಷಿಗಳ ಅಭೀಪ್ರಾಯವನ್ನು ಪಡೆದು ಪಕ್ಷ ಬದಲಾವಣೆ ಮಾಡಿದ್ದೇನೆ, ಆದರೆ ಅಧಿಕಾರಕ್ಕಾಗಿ ಮಧ್ಯದಲ್ಲಿ ಪಕ್ಷವನ್ನು ಬಿಟ್ಟಿಲ್ಲ ಎಂದು ತಿರುಗೇಟು ನೀಡಿ, ಈ ಪಕ್ಷಕ್ಕೆ ಬಂದ ಮೇಲೆ ಶ್ರೀನಿವಾಸರವರನ್ನು ಈ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ನಿಮ್ಮ ಪಕ್ಷ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಹೆಚ್ಚಿನ ಕಾಳಜಿ ಆದರೆ ನಮ್ಮ ಪತಿಯವರಿಗೆ ಟೀಕೇಟ್‌ಗಾಗಿ ಶೀಫಾರಸ್ಸು ಮಾಡಿಲ್ಲ ಬೇರೆಯವರಿಗೆ ಮಣೆ ಹಾಕಲಾಯಿತು ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ನನ್ನ ಪತಿಯವರು ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ದೇ ಮಾಡಿದರು ಆಗ ನಾನು ಶಾಸಕಳಾಗಿದ್ದೆ ಆ ಸಮಯದಲ್ಲಿಯೂ ಸಹಾ ನಾನು ಪಕ್ಷಕ್ಕೆ ನಿಷ್ಠಯಾಗಿ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸವನ್ನು ಮಾಡಿದ್ದೇನೆ ಪ್ರಮಾಣಿಕಳಾಗಿ ಶಿರಾ ಉಪ ಚುನಾವಣೆಯಲ್ಲಿ ಕೆಲಸವನ್ನು ಮಾಡಿದ್ದೇನೆ ನನ್ನ ಬಗ್ಗೆ ನನ್ನ ಕುಟುಂಬದ ಬಗ್ಗೆ ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕಿದೆ ಎಂದು ಪೂರ್ಣಿಮಾ ರವರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಕೇಳಿ ಮತದಾರರಿಗೆ ಮತವನ್ನು ಕೇಳ ಬೇಡಿ ನಾನು ಮೂರು ಬಾರಿ ಆಯ್ಕೆಯಾಗಿದ್ದರೂ ಸಹಾ ಹೂಸ ಪೆನ್‌ಷ್‌ನ್ ಸ್ಕೀಂ ರದ್ದು ಮಾಡಿ ಹಳೆಯದಾದ ಪೆನ್‌ಷನ್ ಸ್ಕಿಂನ್ನು ಜಾರಿ ಮಾಡುವಲ್ಲಿ ವಿಫಲನಾಗಿದ್ದೇನೆ.
ನನ್ನ ಸರ್ಕಾರ ಇದ್ದರೂ ಸಹಾ ಅದು ಸಾಧ್ಯವಾಗಿಲ್ಲ ನಾನು ಮಾಡಕಾಗಿಲ್ಲ ಮತವನ್ನು ಕೂಡಿ ಎಂದು ಕೇಳಿ ಶಿಕ್ಷಕರಿಗೆ ಪ್ರಮೋಷನ್ ಆದರೆ ವೇತನದಲ್ಲಿ ವ್ಯತ್ಯಾಸ ಇದೆ ಅದನ್ನು ಬಗೆಹರಿಸಲು ಆಗಿಲ್ಲ ಮತವನ್ನು ಕೊಡಿ, ಅನುದಾನಿತ ಶಾಲೆಗಳಲ್ಲಿ 2005ರಲ್ಲಿ ಹೊಸ ನೇಮಕಾತಿ ಮಾಡಿಸಲು ಆಗಿಲ್ಲ ಎಂದು ಮತವನ್ನು ಕೇಳಿ ನಿಮ್ಮ ಸಮಸ್ಯೆಯನ್ನು ಈ ಮೂರು ಸಮಯದಲ್ಲಿ ಬಗೆ ಹರಿಸಲು ಆಗಿಲ್ಲ ಇದಕ್ಕೆ ಮತವನ್ನು ಕೊಡಿ ಎಂದು ಕೇಳಿ, ನಾರಾಯಣಸ್ವಾಮಿಯವರು ಶಿಕ್ಷಕರ ಗಂಭೀರವಾದ ಸಮಸ್ಯೆಗಳನ್ನು ಬಗೆಹರಿಸವಲ್ಲಿ ವಿಫಲರಾಗಿದ್ದಾರೆ. ಈಗ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ಇಲ್ಲಿ ನಾನು ನಿಷ್ಠಯಿಂದ ಇದ್ದೇನೆ ಇರುತ್ತೇನೆ ಎಂದರು.