ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಸದ್ಯ ಹಾಸನದಲ್ಲಿ ತಪಾಸಣೆ ನಡೆಸುತ್ತಿದ್ದು, ಪ್ರೀತಂಗೌಡ ಆಪ್ತರ ಮನೆಯಲ್ಲಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಹತ್ತು ಪೆನ್ ಡ್ರೈವ್ ಗಳು ಹಾಗೂ ಹಾರ್ಡ್ ಡಿಸ್ಕ್ ಗಳು ಪತ್ತೆಯಾಗಿವೆ. ಈ ಪೆನ್ ಡ್ರೈವ್ ಗಳನ್ನಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಇದರ ಜೊತೆಗೆ ಹಾಸನದ 18 ಕಡೆ ನಡೆಸಿದ ಎಸ್ಐಟಿ ದಾಳಿಯಲ್ಲಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. 7 ಪೆನ್ ಡ್ರೈವ್, 6 ಹಾರ್ಡ್ ಡಿಸ್ಕ್, 4 ಲ್ಯಾಪ್ ಟಾಪ್, 3 ಡೆಸ್ಕ್ ಟಾಪ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ದಾಳಿ ನಡೆಸಿದ ಕಡೆಯಲ್ಲಿ ಇರುವಂತ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಪತ್ತೆಯಾದ ಹಾರ್ಡ್ ಡಿಸ್ಕ್ ಗಳಲ್ಲಿ ವಿಡಿಯೋಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ವಿಡಿಯೋ ಹಂಚಿಕೆ ಆರೋಪ ಎದುರಿಸುತ್ತಿರುವವರ ಆಪ್ತರ ಮನೆ, ಕಚೇರಿಗೆ ಹೋಗಿರುವವರ ವಿಚಾರಣೆಯೂ ನಡೆಯುತ್ತಿದೆ.
ಎಸ್ಐಟಿ ಅಧಿಕಾರಿಗಳು ಎಷ್ಟೇ ನೋಟೀಸ್ ನೀಡಿದರು, ಇದಕ್ಕೆ ಪ್ರಮುಖವಾದ ವ್ಯಕ್ತಿ ಮಾತ್ರ ಬೆಂಗಳೂರಿಗೆ ಬಂದಿಲ್ಲ. ಜರ್ಮನಿಯಲ್ಲಿದ್ದುಕೊಂಡೇ ಇಲ್ಲಿನ ವಿಚಾರಗಳನ್ನು ತಿಳಿಯುತ್ತಿರುವ ಪ್ರಜ್ವಲ್ ರೇವಣ್ಣ, ಎರಡು ಸಲ ರಿಟರ್ನ್ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಎಸ್ಐಟಿ ಅಧಿಕಾರಿಗಳು ಸಹ ಪ್ರಜ್ವಲ್ ರೇವಣ್ಣ ಬಂದರೆ ಅವರನ್ನು ವಶಕ್ಕರ ಪಡೆದು, ತನಿಖೆ ನಡೆಸುವ ಪ್ಲ್ಯಾನ್ ನಲ್ಲಿದೆ. ಮಹಿಳೆಯ ಕಿಡ್ನ್ಯಾಪ್ ಕೇಸಿಗೆ ಸಂಬಂಧಿಸಿದಂತೆ ಇತ್ತಿಚೆಗಷ್ಟೇ ರೇವಣ್ಣ ಅವರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.