ಹುಬ್ಬಳ್ಳಿ: ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜನತೆಗೆ ಈಗ ವರುಣಾರಾಯ ಸಾಕಷ್ಟು ನೆಮ್ಮದಿ ನೀಡಿದ್ದಾನೆ. ರಾಜ್ಯದೆಲ್ಲೆಡೆ ಮಳೆಯಾಗುತ್ತಿದ್ದು, ಜನರು ನೆಮ್ಮದಿಯಾಗಿದ್ದಾರೆ, ರೈತರು ಖುಷಿಯಾಗಿದ್ದಾರೆ. ಮೋಡದತ್ತ ಕಾಯುತ್ತಾ ಕುಳಿತಿದ್ದ ರೈತರು, ಈಗ ನೇಗಿಲು ಹಿಡಿದು ಜಮೀನಿನತ್ತ ಹೊರಟಿದ್ದಾರೆ. ಆದರೆ ಮಳೆ ತಂಪೆರೆಯುವುದರ ಜೊತೆಗೆ ಕೆಲವೊಂದು ಅನಾಹುತಗಳನ್ನು ಸೃಷ್ಟಿ ಮಾಡಿದೆ.
ಹುಬ್ಬಳ್ಳಿಯಲ್ಲಿ ಮಂಗಳವಾರ ಸುಮಾರು ಒಂದು ಗಂಟೆಗಳ ಕಾಲ ಮಳೆ ಸುರಿದಿದೆ. ಗುಡುಗು, ಸಿಡಿಲಿನ ಜೊತೆಗೆ ಗಾಳಿ ಸಹಿತ ಮಳೆಯಾಗಿದೆ. ಬಾರೀ ಮಳೆಗೆ ಜಾಸ್ತಿ ಹಾನಿಯಾಗಿದೆ. ಹುಭಳ್ಳಿಯ ದುರ್ಗದಬೈಲ್, ಕೋಯಿನ್ ರಸ್ತೆ, ವಿದ್ಯಾನಗರ, ಕಮರೀಪೇಟೆ, ಓಣಿ, ಹಳೇ ಹುಬ್ಬಳ್ಳಿ, ಮೂರು ಸಾವಿರ ಮಠ ಸೇರಿದಂತೆ ಹಲವು ಕಡೆ ಮಳೆ ನೀರು ಮನೆಗೆ ನುಗ್ಗಿದೆ. ಮಳೆಯಿಂದಾಗಿ ಬೀದಿಬದಿ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ವಾಣಿಜ್ಯ ಮಳಿಗೆಗಳಿಗೂ ನೀರು ತುಂಬಿದೆ.
ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯೂ ನಡೆಯುತ್ತಿದೆ. ಮಳೆಯ ಕಾರಣ ಅಭಿವೃದ್ಧಿ ಕೆಲಸಗಳು ಸಾಗುತ್ತಿಲ್ಲ. ವುದ್ಯಾನಗರ ಕಡೆಯೆಲ್ಲಾ ಮರಗಳು ರಸ್ತೆಗೆ ಉರುಳಿ ಬಿದ್ದಿವೆ. ಇನ್ನು ಕೂಡ ಮಳೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.
ಕಳೆದ ಬಾರಿ ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ಕಾರಣದಿಂದ ಈ ಬಾರಿ ಮಳೆಯ ಅಬ್ಬರ ಜಾಸ್ತಿ ಇರಲಿದೆ. ಕೆಲವೊಂದು ಕಡೆ ಪ್ರವಾದ ಭೀತಿಯೂ ಉಂಟಾಗಿದೆ. ಹೀಗಿರುವಾಗ ಜನರು ಕೂಡ ಮಳೆಯಿಂದಾಗುವ ಅನಾಹುತಗಳಿಂದ ತಪ್ಪಿಸಿಕೊಳ್ಳಲು ಮುಂಜಾಗ್ರತ ಕ್ರಮ ವಹಿಸಬೇಕಾಗಿದೆ. ರೈತರು ಕೂಡ ಕೊಂಚ ಮಳೆಯಿಂದ ಮುಂಜಾಗ್ರತೆವಹಿಸಬೇಕಾಗಿದೆ. ಇನ್ನು ಹೊರಗೆ ಕೆಲಸಕ್ಕೆಂದು ಹೋಗುವವರು ಯಾವಾಗ ಮಳೆ ಬರುತ್ತದೆ ಎಂಬುದನ್ನು ತಿಳಿಯದೆ ಮಳೆಯಲ್ಲಿ ಸಿಲುಕುತ್ತಿದ್ದಾರೆ. ರೈನ್ ಕೋಟ್, ಛತ್ರಿಯಂತಹ ವಸ್ತುಗಳ ಮೂಲಕ ತಮ್ಮನ್ನು ತಾವೂ ಕಾಪಾಡಿಕೊಳ್ಳಬೇಕಾಗಿದೆ.