ಬೆಂಗಳೂರು: ಮಹಿಳೆಯ ಕಿಡ್ನ್ಯಾಪ್ ಕೇಸಿನಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ಪರಪ್ಪನ ಅಗ್ರಹಾರ ಸೇರಿದ್ದರು. ಇಂದು ಕಡೆಗೂ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಆದರೆ ಜಾಮೀನು ಸಿಕ್ಕಿದರು ಮನೆಗೆ ಹೋಗುವ ಭಾಗ್ಯಾ ಮಾತ್ರ ಸಿಕ್ಕಿಲ್ಲ. ಯಾಕಂದ್ರೆ ಜಾಮೀನಿನ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ, ಜಾಮೀನು ಸಿಕ್ಕರೂ ಜೈಲಿನಲ್ಲಿಯೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ.
ರೇವಣ್ಣ ಅವರಿಗೆ ಷರತ್ತು ಬದ್ದ ಜಾಮೀನು ಸಿಕ್ಕಿದೆ. ಷರತ್ತು ಬದ್ಧ ಜಾಮೀನಿನಲ್ಲಿ ಪರ್ಸನಲ್ ಬಾಂಡ್ ಶ್ಯೂರಿಟಿ, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ದೇಶ ಬಿಟ್ಟು ಹೋಗಬಾರದು ಎಂಬ ಷರತ್ತನ್ನು ವಿಧಿಸಿ ಜಾಮೀನು ನೀಡಲಾಗಿದೆ. ಜಾಮೀನು ಸಿಕ್ಕಿದೆ ಎಂದು ರೇವಣ್ಣ ಅವರಿಗೆ ತಿಳಿಸಿದ ಕೂಡಲೇ ಸಮಾಧಾನಗೊಂಡಿದ್ದಾರೆ. ದೇವರಿಗೆ ಪ್ರಾರ್ಥಸಿ, ನಿಟ್ಟುಸಿರು ಬಿಟ್ಟಿದ್ದಾರೆ.
ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಬೇಲ್ ಆರ್ಡರ್ ಕಾಪಿಯನ್ನು ವಕೀಲರು ಪಡೆದುಕೊಂಡಿದ್ದಾರೆ. ಇಂದು ಜಾಮೀನು ಮಂಜೂರು ಆದರೂ ಕೂಡ ರೇವಣ್ಣ ಅವರು ಪರಪ್ಪನಾಗ್ರಹರದಿಂದ ಬಿಡುಗಡೆ ಭಾಗ್ಯವಿಲ್ಲ. ನಾಳೆ 42ನೇ ಜನಪ್ರತಿನಿಧಿ ನ್ಯಾಯಾಲಯದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಇಂದು ಜಾಮೀನು ಅರ್ಜಿಯ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಬಳಿಕ ನಾಳೆ ಬೆಳಗ್ಗೆ ಜಾಮೀನು ಪ್ರತಿ ಜೈಲಿಗೆ ತಲುಪಿಸಬೇಕಾಗುತ್ತದೆ. ಇದಾದ ಬಳಿಕ ಹೆಚ್.ಡಿ ರೇವಣ್ಣ ಅವರಿಗೆ ಬಿಡುಗಡೆ ಸಾಧ್ಯತೆ ಇದೆ.
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿದೇಶದಲ್ಲಿಯೇ ಇದ್ದಾರೆ. ನೋಟೀಸ್ ಕೊಟ್ಟರು, ದೂರುಗಳು ದಾಖಲಾದರೂ ಹಾಸನದ ಕಡೆಗೆ ಬಂದಿಲ್ಲ. ಯಾವಾಗ ಬರ್ತಾರೆ ಎಂಬ ಸುಳಿವು ಸಿಗುತ್ತಿಲ್ಲ ರಿಟರ್ನ್ ಟಿಕೆಟ್ ಬುಕ್ ಮಾಡಿಕೊಂಡಿದ್ದರು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಇದೀಗ ಮಹಿಳೆಯ ಕಿಡ್ನ್ಯಾಪ್ ಕೇಸಲ್ಲಿ ಜೈಲಲ್ಲಿದ್ದ ರೇವಣ್ಣ ಅವರಿಗೇನೋ ಬೇಲ್ ಸಿಕ್ಕಿದೆ. ಕೊಂಚ ನಿರಾಳರಾಗಿದ್ದಾರೆ. ಪ್ರಜ್ವಲ್ ರೇವಣ್ಣ ಕೂಡ ಜಾಮೀನಿಗೆ ಅರ್ಜಿ ಹಾಕಿದ್ದರು.