ಕೇರಳ: ಎರಡು ವರ್ಷಗಳಿಂದ ಕೊರೊನಾ ವೈರಸ್ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಈಗಲೂ ಅದರ ಪರಿಣಾಮ ಹಾಗೆಯೇ ಇದೆ. ಸ್ವಲ್ಪಮಟ್ಟಿಗೆ ತಗ್ಗಿದೆ ಅಷ್ಟೇ. ಆದ್ರೆ ಅದರ ನಡುವೆ ದೇವರ ನಾಡಲ್ಲಿ ಹೊಸ ವೈರಸ್ ವೊಂದು ಜೀವ ತಾಳಿದ್ದು, ಆತಂಕಕ್ಕೆ ಕಾರಣವಾಗಿದೆ.
ಕೇರಳದ ವಯನಾಡಿನಲ್ಲಿ ಈಗಾಗಲೇ ನೋರೋ ಎಂಬ ಹೊಸ ವೈರಸ್ ಜನರಲ್ಲಿ ಕಾಣಿಸಿಕೊಂಡಿದೆ. ಈ ವೈರಸ್ ಈಗಾಗಲೇ 13 ಮಂದಿಯಲ್ಲಿ ಕಟಣಿಸಿಕೊಂಡಿದೆ. ವೈರಸ್ ಕಾಣಿಸಿಕೊಂಡವರಿಗೆ ವಾಂತಿ, ಅತಿಸಾರ, ತಲೆನೋವು, ಜ್ವರ, ಹೊಟ್ಟೆ ನೋವಿನಂಥ ಲಕ್ಷಣಗಳು ಬಾಧಿಸುತ್ತಿವೆ.
ಹೀಗಾಗಿ ಈ ವೈರಸ್ ಬಗ್ಗೆ ಎಚ್ಚರ ವಹಿಸುವಂತೆ ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದು, ಹೊಸ ವೈರಸ್ ತಡೆಯಲು ಈಗಾಗಲೇ ಹೊಸ ಮಾರ್ಗಸೂಚಿಗಳನ್ನು ನೀಡಲಾಗಿದೆ. ಕುಡಿಯುವ ನೀರನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಸರಿಯಾದ ತಡೆಗಟ್ಟುವಿಕೆ ಹಾಗೂ ಚಿಕಿತ್ಸೆಯಿಂದ ಈ ಕಾಯಿಲೆಯನ್ನ ಗುಣಮುಖ ಮಾಡಬಹುದು. ಯಾರಿಗಾದರೂ ರೋಗ ಲಕ್ಷಣಗಳು ಕಂಡು ಬಂದರೆ ತಕಗಷಣ ಆಸ್ಪತ್ರೆಗೆ ತೋರಿಸಿಕೊಳ್ಳಿ ಎಂದಿದ್ದಾರೆ.
ಇನ್ನು ಜಿಲ್ಲೆಗಳಲ್ಲಿ ಪರಿಸ್ಥಿತಿ ಪರಿಶೀಲಿಸಲು ಸೂಚನೆ ನೀಡಿದ್ದಾರೆ. ಇದು ಪ್ರಾಣಿಗಳಿಂದ ಹರಡುವ ರೋಗವಾಗಿರುವ ಕಾರಣ ಗ್ರಾಮೀಣ ಪ್ರದೇಶ, ಹಾಗೂ ಪ್ರಾಣಿ ಸಾಕಿರುವವರಿಗೆ ಎಚ್ಚರದಿಂದ ಇರಲು ಸೂಚನೆ ನೀಡಲಾಗಿದೆ. ಹೆಚ್ಚು ಸ್ವಚ್ಛತೆ ಕಾಪಾಡಲೂ ಸಲಹೆ ನೀಡಿದ್ದಾರೆ.