ಕಳೆದ ವರ್ಷ ಮಳೆಯಿಲ್ಲದೆ ಬೆಳೆದ ಬೆಳೆ ಸರಿಯಾಗಿ ಕೈಸೇರದೆ, ಸಾಲಾ-ಸೋಲ ಮಾಡಿ ರೈತ ಕಂಗಲಾಗಿದ್ದ. ಆದರೆ ಈ ಬಾರಿ ಆ ರೀತಿ ಇಲ್ಲ. ರೈತ ಫುಲ್ ಖುಷಿಯಾಗುವಂತಹ ವಾತಾವರಣವೇ ಸೃಷ್ಠಿಯಾಗಿದೆ. ಈಗಾಗಲೇ ಮಳೆಯೂ ಶುರುವಾಗಿದೆ. ಇದರ ನಡುವೆ ‘ಲಾ..ನೀನಾ’ ಎಚ್ಚರಕೆಯನ್ನು ಅಮೆರಿಕಾ ನೀಡಿದೆ. ಫೆಸಿಫಿಕ್ ಸಾಗರದಲ್ಲಿ ಶೀಘ್ರವೇ ಈ ಲಾ..ನೀನಾ ಕಾಣಿಸಿಕೊಳ್ಳಲಿದ್ದು, ಪ್ರವಾದ ಭೀತಿ ಉಂಟಾಗಿದೆ.
ಲಾ ..ನೀನಾ ಬಗ್ಗೆ ಹವಮಾನ ಇಲಾಖೆ ಕೂಡ ಎಚ್ಚರಿಕೆಯ ಸಂದೇಶವನ್ನು ನೀಡಿದೆ. US ನ್ಯಾಷನಲ್ ಓಷಿಯಾನಿಕ್ ಅಮನಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಶನ್ ನಿಡೀರುವ ಎಚ್ಚರಿಕೆಯ ಪ್ರಕಾರ ಶೀಘ್ರದಲ್ಲಿಯೇ ಲಾ..ನೀನಾ ಪ್ರಕ್ರಿಯೆ ಶುರುವಾಗಲಿದೆ. ಜೂನ್ ನಿಂದ ಆರಂಭವಾಗುವ ಸೂಚನೆ ಸಿಕ್ಕಿದೆ. ಈ ಸಮಯದಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಜನರಿಗೂ ಮುನ್ನೆಚ್ಚರಿಕೆಯನ್ನು ನೀಡಿದೆ.
ಜೂನ್, ಜುಲೈ, ಆಗಸ್ಟ್ ನಲ್ಲಿ ಕಾಣಿಸಿಕೊಳ್ಳುವ ಲಾ ನೀನಾದಿಂದಾಗಿ ಮಳೆಯ ಅಬ್ಬರ ಜೋರಾಗಲಿದೆ. ಇದರಿಂದಾಗು ದೇಶದ ಕೆಲವೆಡೆ ಪ್ರವಾಹವಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಫೆಸಿಫಿಕ್ ಮಹಾಸಾಗರದಲ್ಲಿ ಉಷ್ಣತೆಯಿಂದಾಗಿ ಉಂಟಾಗುವ ಅಲೆಗಳ ಮೆರಲೆ ಪರಿಣಾಮ ಬೀರುತ್ತದೆ. ಉಷ್ಣತೆಯಿಂದ ತಾಪಮಾನವೂ ತುಂಬಾ ಬಿಸಿಯಾಗುತ್ತದೆ. ಈ ಕಾರಣದಿಂದ ಫೆಸಿಫಿಕ್ ಪ್ರದೇಶದಲ್ಲಿರುವ ಬೆಚ್ಚಗಿನ ಮೇಲ್ಮೈ ನೀರು ಪೂರ್ವಕ್ಕೆ ಚಲಿಸಲಯ ಪ್ರಾರಂಭಸಿಉತ್ತವೆ. ಇದು ಭಾರತದ ಹವಮಾನದ ಮೇಲೆ ಪರಿಣಾನ ಬೀರುತ್ತದೆ. ಹೆಚ್ಚಯ ಮಳೆಯಾಗಲಿದೆ. ಇದು ಒಂಭತ್ತರಿಂದ ಹನ್ನೆರಡು ತಿಂಗಳುಕಾಲ ಇರಲಿದೆ.
ಈ ಬಗ್ಗೆ ಅಮೆರಿಕಾ ಮಾಹಿತಿ ನೀಡುವುದರ ಜೊತೆಗೆ ಎಚ್ಚರಿಕೆಯನ್ನು ಕೊಟ್ಟಿದೆ. ಇನ್ನು ಈ ಸೀಸನ್ ನಲ್ಲಿ ಉತ್ತಮ ಮಳೆಯಾದರೆ ರೈತರಿಗೆ ಅನುಕೂಲವಾಗಲಿದೆ. ಜುಲೈ-ಆಗಸ್ಟ್ ತಿಂಗಳಿನಲ್ಲಿಯೇ ರೈತರು ಉಳುಮೆ ಮಾಡಿ, ಬೀಜ ಬಿತ್ತಲು ಮಳೆಯ ಅಗತ್ಯವಿದೆ.