Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸನಾತನ ಧರ್ಮದ ತತ್ವಜ್ಞಾನವನ್ನು ಜಗತ್ತಿಗೆ ಸಾರಿದ ಜಗದ್ಗುರು ಶಂಕರಾಚಾರ್ಯರರು : ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿಕೆ

Facebook
Twitter
Telegram
WhatsApp

 

ಚಿತ್ರದುರ್ಗ.12: ಬುದ್ದ ಹಾಗೂ ಜೈನ ಧರ್ಮಗಳ‌ ಪ್ರಭಾವದಿಂದ ಸನಾತನ ಧರ್ಮವನ್ನು ಮೇಲೆತ್ತಿ, ಸನಾತನ ಧರ್ಮದ ಉನ್ನತ‌ ತತ್ವಜ್ಞಾನವನ್ನು ಜಗತ್ತಿಗೆ ಸಾರುವ ಕೆಲಸವನ್ನು ಆದಿಗುರು ಶಂಕರಾಚಾರ್ಯರು ಮಾಡಿದರು ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ,‌ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಬುದ್ದ ಹಾಗೂ ಜೈನ ಧರ್ಮಗಳು ತಮ್ಮ ವಿಶಿಷ್ಟ ತತ್ವಗಳಿಂದಾಗಿ ಭಾರತ ಹಾಗೂ ಬೇರೆ ದೇಶಗಳಲ್ಲಿಯೂ ಮನ್ನಣೆ ಗಳಿಸಿದ್ದವು. ಬುದ್ಧ ಧರ್ಮ ಏಷ್ಯಾದ ಹಲವು ದೇಶಗಳಿಗೂ ಹಬ್ಬಿತ್ತು. ಇದರ ಜೊತೆಗೆ ಸನಾತನ ಧರ್ಮದಲ್ಲಿ ಶೈವ, ವೈಷ್ಣವ, ಶಕ್ತಿ, ಗಣೇಶ ‌ಹಾಗೂ ಸೂರ್ಯನ ಆರಾಧಕ ಪಂಥಗಳು ಇದ್ದವು. ಇವುಗಳ ಭಿನ್ನತೆಯಿಂದಾಗಿ ಸನಾತನ ಧರ್ಮ ಮಂಕಾಗಿತ್ತು. ಶಂಕರಾಚಾರ್ಯರು ಈ ಎಲ್ಲಾ ಪಂಥಗಳನ್ನು ಒಗ್ಗೂಡಿಸಿ ಸನಾತನ ಧರ್ಮಕ್ಕೆ ಪುನಶ್ಚೇತನ ನೀಡಿದರು. ಅದ್ವೈತ ಸಿದ್ದಾಂತ ಪ್ರತಿಪಾದಿಸಿದರು ಎಂದು ಉಪವಿಭಾಗಧಿಕಾರಿ ಎಂ.ಕಾರ್ತಿಕ್ ಹೇಳಿದರು.

ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ ಮಾತನಾಡಿ, ಶಂಕರಾಚಾರ್ಯರು 1300 ವರ್ಷಗಳ ಹಿಂದೆ ಜನಿಸಿದರು. ಐದನೇ ವರ್ಷಕ್ಕೆ ಉಪನಯನ ನಂತರ ಸನ್ಯಾಸ ಸ್ವೀಕರಿಸಿ, ಅಖಂಡ ಭಾರತವನ್ನು 3 ಬಾರಿ ಪ್ರದಕ್ಷಣೆ ಹಾಕಿ ಹಿಂದೂ ಧರ್ಮದ ಪುನರುಜ್ಜೀವನಗೊಳಿಸಿದರು. ಈ ಕಾರಣದಿಂದಲೇ ಇಂದಿಗೂ ಭಾರತದಲ್ಲಿ ಸನಾತನ ಹಿಂದೂ ಧರ್ಮದ ಉಳಿದುಕೊಂಡು ಬಂದಿದೆ. ಶಂಕರಾಚಾರ್ಯರು ಜ್ಞಾನಕ್ಕೆ ಹೆಚ್ಚಿನ ಒತ್ತುಕೊಟ್ಟು ನಹಿಃ ಜ್ಞಾನೇನ ಸದೃಶಂ ಎಂದು ಹೇಳಿದರು. ಅಹಂ ಬ್ರಹ್ಮಾಸ್ಮೀ ಎಂಬ ತತ್ವದ ಮೂಲಕ ನಮ್ಮಲ್ಲೇ ನಾವು ದೈವತ್ವನ್ನು ಕಾಣಬೇಕು ಎಂದು ತಿಳಿಸಿದರು. ಇದರೊಂದಿಗೆ ಹಲವು ಗ್ರಂಥಗಳ ಮೇಲೆ ಭಾಷ್ಯಗಳನ್ನು ರಚಿಸಿದರು. ಅವರ ರಚಿಸಿದ ಸ್ತುತಿಗಳು ಇಂದಿಗೂ ಜನಮಾನಸದಲ್ಲಿವೆ ಎಂದರು.

ತಹಶಿಲ್ದಾರ ಡಾ.ನಾಗವೇಣಿ ಮಾತನಾಡಿ ಅದ್ವೈತ ಸಿದ್ದಾಂತ ಜೊತೆಗೆ ದೇಶದ ನಾಲ್ಕು ಮೂಲೆಗಳಲ್ಲಿಯೂ ನಾಲ್ಕು ಮಠಗಳನ್ನು ಸ್ಥಾಪಿಸಿ ಹಿಂದೂ ಧರ್ಮವನ್ನು ಪುನಶ್ಚೇತನಗೊಳಿಸಿದರು ಎಂದರು.

ಕಾರ್ಯಕ್ರಮದಲ್ಲಿ ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಬ್ರಾಹ್ಮಣ ಸಂಘದ ಅಧ್ಯಕ್ಷ ನಿರ್ದೇಶಕ ಶಂಕರ್,ಮುಖಂಡರುಗಳಾದ ಮಂಜುನಾಥ, ಹರೀಶ್, ಭಾರತಿ ಸೇರಿದಂತೆ ಮತ್ತಿತರರು ಇದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿ ಕೆ.ಪಿ.ಎಂ.ಗುರುದೇವ್ ಭಕ್ತಿಗೀತೆ ಪ್ರಸ್ತುತ ಪಡಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಸವತತ್ವ ಮಹಾವಿದ್ಯಾಲಯ ಹಾಗೂ ವಚನ ಕಮ್ಮಟ ಶ್ರೀ ಮಠದ ಎರಡು ಕಣ್ಣುಗಳು : ಡಾ. ಬಸವರಮಾನಂದ ಸ್ವಾಮಿಗಳು

  ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 05 : ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150 ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕøತಿ ಉತ್ಸವ-2024 ರ ಕಾರ್ಯಕ್ರಮದಲ್ಲಿ ವಚನ ಕಮ್ಮಟ ಪರೀಕ್ಷೆಯ ರ‌್ಯಾಂಕ್ ವಿಜೇತರರಿಗೆ ಬಹುಮಾನ

ಶರಣ ಸಂಸ್ಕøತಿ 2024 : ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವ ಶ್ರೀಗಳ ಬೆಳ್ಳಿಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ಪಥ ಸಂಚಲನ

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 05 : ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150 ನೇ ಜಯಂತ್ಯುತ್ಸವ ಹಾಗೂ ಶರಣ ಸಂಸ್ಕೃತಿ 2024ರ ಅಂಗವಾಗಿ ಶ್ರೀಜಯದೇವ ಕಪ್ ಪಂದ್ಯಾವಳಿಯ ನಿಮಿತ್ತ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವ

Exit Poll-2024 : ಹರಿಯಾಣ ಜಮ್ಮು ಮತ್ತು ಕಾಶ್ಮೀರದಲ್ಲಿ ರೋಚಕ ಫಲಿತಾಂಶ : ಇಲ್ಲಿದೆ ಎಕ್ಸಿಟ್ ಪೋಲ್‌ ಮಾಹಿತಿ…!

  ಸುದ್ದಿಒನ್, ಅಕ್ಟೋಬರ್. 05 : ಹರಿಯಾಣದ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ (ಅಕ್ಟೋಬರ್ 5) ಮತದಾನ ಪೂರ್ಣಗೊಂಡಿದೆ. ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಅಕ್ಟೋಬರ್

error: Content is protected !!