ಸುದ್ದಿಒನ್, ಚಳ್ಳಕೆರೆ, ಮೇ. 10 : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.85ರಷ್ಟು ಅಂಕ ಪಡೆದು ಉತ್ತೀರ್ಣರಾಗಿರುವ ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರ ಪುತ್ರಿ ಕೆ.ಟಿ. ಅನುಪಮಾ ಅವರನ್ನು ಶುಕ್ರವಾರ ಚಳ್ಳಕೆರೆ ನಗರದ ತಮ್ಮ ನಿವಾಸದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ವಿಶ್ವಕರ್ಮ ಸಮಾಜ ವತಿಯಿಂದ ಅಭಿನಂದಿಸಲಾಯಿತು.
ಈ ವೇಳೆ ಮಾತನಾಡಿದ ಅಖಿಲ ಭಾರತ ವಿಶ್ವಕರ್ಮ ಪರಿಷತ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಪ್ರಸ್ತುತ ಸಾರ್ವತ್ರಿಕ ಮತ್ತು ಸ್ಪರ್ಧಾ ಪರೀಕ್ಷೆಗಳಲ್ಲಿ ಹೆಣ್ಣು ಮಕ್ಕಳ ಸಾಧನೆ ಕಾಣುತ್ತಿದ್ದೇವೆ. ಬಡತನದ ಪರಿಸ್ಥಿತಿ ಮತ್ತು ಕೂಲಿ ಕಾರ್ಮಿಕ ಕುಟುಂಬಗಳ ಮಕ್ಕಳ ಸಾಧನೆ ದಾಖಲೆ ಆಗುತ್ತಿದೆ. ಇಂತಹ ನೆಲೆಯಲ್ಲಿ ಸಾಮಾಜಿಕ ಸೇವಾ ಕಾರ್ಯದಂತೆ ಪತ್ರಿಕಾ ವರದಿಗಾರಿಕೆ ಸೇವೆಯಲ್ಲಿರುವ ಕೊರ್ಲಕುಂಟೆ ತಿಪ್ಪೇಸ್ವಾಮಿ ಅವರ ಪುತ್ರಿ 526 ಅಂಕ ಪಡೆದುಕೊಂಡು ಉತ್ತಮ ಸ್ಥಾನದಲ್ಲಿ ಎಸ್ಸೆಸ್ಸೆಲ್ಸಿ ತೇರ್ಗಡೆ ಆಗಿದ್ದಾರೆ. ಶಿಕ್ಷಣ ಕಲಿಕೆಯಲ್ಲಿ ಉತ್ತಮ ಸಾಧಕರಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಜೆ. ತಿಪ್ಪೇಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಸಿ.ಪಿ. ರಂಗನಾಥ, ಉಪಾಧ್ಯಕ್ಷ ಬೊಮ್ಮಣ್ಣ, ವಿಶ್ವಕರ್ಮ ನಿಗಮದ ಸದಸ್ಯ ಕೆ.ಚಂದ್ರಶೇಖರಚಾರ್, ಬಳ್ಳಾರಿ ಶ್ರೀಕಾಂತಚಾರ್, ನೇತಾಜಿ ಸ್ನೇಹಬಳಗ ಅಧ್ಯಕ್ಷ ಪ್ರಸನ್ನಕುಮಾರ್, ಬಿ. ಫರೀದ್‍ಖಾನ್, ಎಂ. ಶ್ರೀನಿವಾಸ್‍ಬಾಬು, ಕೊರ್ಲಕುಂಟೆ ತಿಪ್ಪೇಸ್ವಾಮಿ, ಎನ್. ಸಾವಿತ್ರಮ್ಮ ಮತ್ತಿತರರು ಇದ್ದರು.