ಹುಬ್ಬಳ್ಳಿ: ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಇಳಿಕೆಯಾಗಿದ್ದು ಮುಸ್ಲಿಂ ಸಮುದಾಯದ ಜನಸಂಖ್ಯೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಈ ವರದಿ ಆತಂಕಕಾರಿಯಾಗಿದೆ. ಇದನ್ನು ಸರ್ಕಾರ ಹಾಗೂ ಸಮಾಜ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ ಎಂದಿದ್ದಾರೆ.
ಈ ವರದಿ ಆತಂಕಕಾರಿಯಾಗಿದೆ. ಪರ್ಯಾಯ ಕ್ರಮಗಳ ಬಗ್ಗೆ ಯೋಚನೆ ಮಾಡಬೇಕಾಗಿದೆ. ಯಾಕಂದ್ರೆ ಯಾವ ದೇಶದಲ್ಲಿ ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತದೆ. ಅಂದು ಡೆಮಾಕ್ರಫಿ ಬದಲಾವಣೆಯಾಗುತ್ತದೆ. ದೇಶ ಸೆಕ್ಯೂಲರ್ ಆಗಿ ಉಳಿಯುವುದಿಲ್ಲ. ಜಗತ್ತಿನಲ್ಲಿ ಪಕ್ಕ ಮತ್ತು ಏಕೈಕ ಸೆಕ್ಯೂಲರ್ ದೇಶ ಅಂದ್ರೆ ಅದು ಭಾರತ. ಸೆಕ್ಯೂಲರ್ ದೇಶ ಜನರ ಸ್ವಭಾವ ದೇಶದ ಜನರಲ್ಲಿದೆ. ನಾವೂ ಹಲವಾರು ದೇವತೆಗಳನ್ನು ಪೂಜೆ ಮಾಡುತ್ತೇವೆ. ವಿವಿಧ ಸಂಸ್ಕೃತಿಗಳು ಒಂದಾಗಿರುವ ಏಕೈಕ ದೇಶ ನಮ್ಮದಾಗಿದೆ. ದೇಶ ಎಂದರೆ ಭಾರತ. ಯಾರೇ ಬಂದರು ಮಾನ್ಯತೆ ನೀಡಿದ್ದೇವೆ. ಹಿಂದೂ ಜೀವನ ಪದ್ಧತಿ ಮುಂದುವರೆಯಬೇಕು ಎಂದಿದ್ದಾರೆ.
ಇದೆ ವೇಳೆ ಹಾಸನ ಹಾಲಿ ಸಂಸದ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಪೆನ್ ಡ್ರೈವ್ ವಿಚಾರ ಈ ವಿಚಾರವಾಗಿ ಯಾಕೆ ಎಫ್ ಐ ಆರ್ ತಡವಾಯಿತು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕ ಧೈರ್ಯ ಇದ್ದರೆ ಉತ್ತರ ಕೊಡನಿಮಗೆ ತನಿಖೆಗಿಂತ ರಾಜಕೀಯದಲ್ಲಿ ಆಸಕ್ತಿ ಇದೆ. ನ್ಯಾಯಕ್ಕಿಂತ ಹೆಚ್ಚಾಗಿ ಕ್ಷುಲ್ಲಕ ರಾಜಕೀಯದಲ್ಲಿ ಆಸಕ್ತಿಯಿದೆ ಇದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.