ಬೆಂಗಳೂರು: ಮಹಿಳೆಯ ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರಿಗೆ ಮತ್ತೆ ನ್ಯಾಯಾಂಗ ಬಂಧನವಾಗಿದೆ. ರೇವಣ್ಣ ಅವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಲಯ ಮಹತ್ವದ ಆದೇಶವನ್ನು ಹೊರಡಿಸಿದೆ.
ಕಿಡ್ನ್ಯಾಪ್ ಕೇಸ್ ನಲ್ಲಿ ಎಸ್ಐಟಿ ಪೊಲೀಸರ ಅತಿಥಿಯಾಗಿರುವ ರೇವಣ್ಣ ಅವರಿಗೆ ಇಂದು ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಿತ್ತು. ಹೀಗಾಗಿ ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. 17ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ರವೀಂದ್ರ ಕುಮಾರ್ ಬಿ ಕಟ್ಟಿಮನಿ ಅವರ ಮುಂದೆ ಹಾಜರುಪಡಿಸಲಾಗಿತ್ತು. ವಾದ-ಪ್ರತಿವಾದ ನಡೆದಿದೆ. ಇದನ್ನು ಆಲಿಸಿದೆ. ನ್ಯಾಯಮೂರ್ತಿಗಳು ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ರೇವಣ್ಣ ಅವರಿಗೆ ನಿನ್ನೆಯಿಂದಾನು ಆರೋಗ್ಯ ಸರಿ ಇಲ್ಲ. ಹಿಟ್ಟೆ ಉರಿ, ಎದೆ ನೋವಿನಿಂದ ಬಳಲುತ್ತಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಇಂದು ಜಾಮೀನು ಸಿಗುತ್ತೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಇಂದು ಕೂಡ ಜಾಮೀನು ಸಿಕ್ಕಿಲ್ಲ. ವಿಚಾರಣೆಗಾಗಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ರೇವಣ್ಣ ಅವರನ್ನು ಬಂಧಿಸಿ ನಾಲ್ಕೈದು ದಿನಗಳಾಗಿವೆ. ಆದರೆ ಕಿಡ್ನ್ಯಾಪ್ ಕೇಸ್ ಆಗಲಿ, ಮಗನ ಅಶ್ಲೀಲ ವಿಡಿಯೋಗಳ ಬಗ್ಗೆಯಾಗಲಿ ಯಾವುದೇ ರೀತಿ ಮಾತನಾಡಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಇನ್ನಷ್ಟು ತನಿಖೆಗಾಗಿ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇನ್ನು ಪ್ರಜ್ವಲ್ ರೇವಣ್ಣ ಅವರಿಗೆ ಎಸ್ಐಟಿ ಪೊಲೀಸರು ಸಾಕಷ್ಟು ಬಾರಿ ನೋಟೀಸ್ ನೀಡಿದರು ತನಿಖೆಗೆ ಹಾಜರಾಗಿಲ್ಲ. ವಿದೇಶದಿಂದ ಇನ್ನು ಭಾರತಕ್ಕೆ ಬಂದಿಲ್ಲ. ಇಂದು ಅಥವಾ ನಾಳೆ ಬರಬಹುದು ಎನ್ನಲಾಗಿದ್ದು, ಬಂದ ಕೂಡಲೇ ಎಸ್ಐಟಿ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.