ಹಾಸನ: ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಹಾಸನದ ಹಾದಿ-ಬೀದಿಯಲ್ಲಿ ಸಿಕ್ಕಿವೆ. ರಾಜ್ಯದೆಲ್ಲೆಡೆ ಈ ವಿಡಿಯೋಗಳಲ್ಲಿರುವ ಮಹಿಳೆಯರ ದರ್ಶನವಾಗಿದೆ. ಇದರಿಂದ ಎಷ್ಟೋ ಹೆಣ್ಣುಮಕ್ಕಳ ಜೀವನ ಅತಂತ್ರ ಸ್ಥಿತಿಗೆ ತಲುಪಿದೆ. ಇದೀಗ ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಈ ಪೆನ್ ಡ್ರೈವ್ ಬಿಡುಗಡೆಯಿಂದಾಗಿ ಎಷ್ಟೊ ಹೆಣ್ಣು ಮಕ್ಕಳ ಸಂಸಾರದಲ್ಲಿ ಬಿರುಕು ಮೂಡಿದೆ. ಇದರಿಂದ ಮೂರ್ನಾಲ್ಕು ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಮಾಡಿರುವ ಅಪರಾಧಕ್ಕಿಂತ ಘೋರ ಅಪರಾಧವನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಮಾಡಿದೆ. ಕಾಂಗ್ರೆಸ್ ಸರ್ಕಾರ ಹೆಣ್ಣು ಮಕ್ಕಳ ಮಾನ ಮರ್ಯಾದೆಯನ್ನು ಬೀದಿಗೆ ತಂದಿದೆ. ನಾಲ್ಕು ಗೋಡೆಗಳ ಮಧ್ಯೆ ನಡೆದ ವಿಷಯವನ್ನು ಪೆನ್ ಡ್ರೈವ್ ಮಾಡಿ ಹಂಚಿದ್ದಾರೆ. ಇದು ಮಹಾನ್ ಅಪರಾಧ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಕಾಂಗ್ರೆಸ್ ಸರ್ಕಾರ ರಾಜ್ಯದ ಮಾನವನ್ನು ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕಿದೆ. ಪೆನ್ ಡ್ರೈವ್ ನಿಂದಾಗಿ ಆತ್ಮಹತ್ಯೆ ಮಾಡಿಕೊಂಡವರು, ಡಿವೋರ್ಸ್ ಪಡೆದವರು, ಮನೆ ಹಾಳು ಮಾಡಿಕೊಂಡವರ ವಿಚಾರ ಮುಂದೆ ತಿಳಿಯಲಿದೆ. ಹೆಚ್ಚಿನ ವಿಚಾರಗಳ ಈ ಸರ್ಕಾರ ಮುಚ್ಚಿಡುವುದಕ್ಕೆ ಆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೆನ್ ಡ್ರೈವ್ ನಲ್ಲಿರುವ ಮಹಿಳೆಯರ ಫೋಟೋಗಳನ್ನು ಬ್ಲರ್ ಮಾಡದೆ ರಿಲೀಸ್ ಮಾಡಲಾಗಿದೆ. ಇದರಿಂದ ಅದೆಷ್ಟೋ ಮಹಿಳೆಯರಿಗೆ ತೊಂದರೆಯಾಗುತ್ತಿದೆ. ಪರಿಚಯದವರೋ, ಕುಟುಂಬದಲ್ಲೊ ನೋಡಿದ ಜನ ಆ ಹೆಣ್ಣು ಮಕ್ಕಳಿಗೆ ಮುಂದೆ ಗೌರವ ಕೊಡುವುದಾದರೂ ಹೇಗೆ..? ವಿಡಿಯೋ ಸಿಕ್ಕವರು ಕೂಡ ಕಂಡ ಕಂಡವರಿಗೆ ಹಂಚುತ್ತಿದ್ದಾರೆ.