ಮಂಡ್ಯ: ಅಬ್ಬಬ್ಬಾ.. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ವಿಚಾರಗಳು ದಿನೇ ದಿನೇ ಒಂದೊಂದು ವಿಚಾರಗಳು ಬೆಳಕಿಗೆ ಬರುತ್ತಿವೆ. ಕಳೆದ ಮೂವತ್ತು ವರ್ಷಗಳ ಹಿಂದೆಯೂ ಇಂಥದ್ದೊಂದು ಘಟನೆ ಅದರಲ್ಲೂ ಇಂಗ್ಲೆಂಡ್ ನಲ್ಲಿ ನಡೆದಿತ್ತಂತೆ. ಈ ಬಗ್ಗೆ ಬಿಜೆಪಿ ನಾಯಕ ಶಿವರಾಮೇಗೌಡ ಶಾಕಿಂಗ್ ಸುದ್ದಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಾಜಿ ಸಂಸದ ಶಿವರಾಮೇಗೌಡ, ಹಾಸನದಲ್ಲಿ ನಡೆದಿರುವ ಘಟನೆ ಇಂಗ್ಲೆಂಡ್ ನಲ್ಲೂ ನಡೆದಿತ್ತು. ಹೆಚ್ ಡಿ ರೇವಣ್ಣ ಅಲ್ಲಿ ತಗಲಾಕಿಕೊಂಡಿದ್ದರು ಎಂದಿದ್ದಾರೆ. ಈ ಮೂಲಕ 30 ವರ್ಷದ ಹಳೆಯ ಕೇಸನ್ನು ರಿವೀಲ್ ಮಾಡಿದ್ದಾರೆ. ಮಾಜಿ ಸಚಿವ ರೇವಣ್ಣ ಅವರಿಗೆ ಈ ಘಟನೆ ಏನು ಹೊಸದಲ್ಲ. ನನ್ನ ಹಾಗೂ ಅವರ ಕುಟುಂಬ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಿದ್ದೆವು. ಇದೇ ರೀತಿ ಅಲ್ಲಿಯೂ ರೇವಣ್ಣ ತಗಲಾಕಿಕೊಂಡಿದ್ದರು. ಆ ಸಂದರ್ಭದಲ್ಲಿ ನಾನು ಹೇಳಿದ್ದರೆ ರೇವಣ್ಣ ಅಮಾಯಕರು ಎನ್ನುತ್ತಿದ್ರಿ. ಈಗಲೂ ಎಸ್ಐಟಿಯವರು ಇಂಗ್ಲೆಂಡ್ ಹೋಗಿ ತನಿಖೆ ಮಾಡಲಿ. ರೆಕಾರ್ಡ್ ನಲ್ಲಿ ಎಲ್ಲಾ ಮಾಹಿತಿ ಸಿಗುತ್ತದೆ ಎಂದಿದ್ದಾರೆ.
ಬ್ಲೂ ಫಿಲ್ಮ್ ಮಾಡುವವರ ಬಳಿಯೂ ಇಷ್ಟು ವಿಡಿಯೋ ಇರಲ್ಲ. ಎಂಪಿಯಾಗಿ ಪ್ರಜ್ವಲ್ ರೇವಣ್ಣ ಐದು ವರ್ಷ ಏನನ್ನೂ ಮಾಡಿಲ್ಲ. ಟಿಕೆಟ್ ಕೊಡಬೇಕಾದ್ರೆ ಯೋಚಿಸಬೇಕಿತ್ತು. ಕೂಡಲೇ ಪ್ರಜ್ವಲ್ರನ್ನ ಬಂಧಿಸುವಂತೆ ಮಾಜಿ ಸಂಸದ ಶಿವರಾಮೇಗೌಡ ಒತ್ತಾಯಿಸಿದ್ದಾರೆ.
ಸದ್ಯ ಎಸ್ಐಟಿ ಅಧಿಕಾರಿಗಳು ಎಲ್ಲಾ ಆಯಾಮದಿಂದಾನೂ ತನಿಖೆನಡೆಸುತ್ತಿದ್ದಾರೆ. ಸಂತ್ರಸ್ತೆಯರನ್ನು ಕರೆಸಿ ವುಚಾರಣೆ ನಡೆಸಿ, ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರಿಗೂ ಲುಕ್ ಔಟ್ ನೋಟೀಸ್ ಕೂಡ ನೀಡಿದ್ದಾರೆ.