ಶಿವಮೊಗ್ಗ: ಎರಡನೇ ಹಂತದ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆದಿದ್ದು, ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ. ಚುನಾವಣೆಯ ಹೊತ್ತಲ್ಲೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ಮುಜುಗರವಾಗುವಂತ ಘಟನೆ ನಡೆದಿದೆ. ರಾಜ್ಯದೆಲ್ಲೆಡೆ ಪೆನ್ ಡ್ರೈವ್ ಸುದ್ದಿ ತಾಂಡವವಾಡುತ್ತಿದ್ದರೆ, ದೇಶದೆಲ್ಲೆಡೆ ಈ ಸುದ್ದಿ ತಲುಪಿದ್ದು ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ರಾಜ್ಯ ಪ್ರವಾಸ ಬಂದು, ಚುನಾವಣೆಯ ಪ್ರಚಾರ ಮಾಡಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಕೂಡ ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದರು. ರಾಜ್ಯ ಸರ್ಕಾರದ ವಿರುದ್ದವೇ ಟಾಂಟ್ ಕೊಟ್ಟಿದ್ದ ಅಮಿತ್ ಶಾ, ಪ್ರಜ್ವಲ್ ನನ್ನು ವಿದೇಶಕ್ಕೆ ಹಾರಿ ಹೋಗಲು ಯಾಕೆ ಬಿಟ್ರಿ. ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಪ್ರಜ್ಚಲ್ ರೇವಣ್ಣ ಅವರ ಸಿಡಿ ಬಂದಿದೆ ಅದಕ್ಕೆ ಬಿಜೆಪಿಯನ್ನು ಆರೋಪಿಸುತ್ತಿದೆ. ಮಹಿಳೆ ಜೊತೆಗೆ ಯಾರೇ ಅತ್ಯಾಚಾರ ಮಾಡಿದರು ಅವರ ಜೊತೆಗೆ ಬಿಜೆಪಿ ನಿಲ್ಲುವುದಿಲ್ಲ. ಕೇಳಿ ಸಿದ್ದರಾಮಯ್ಯ ಜೀ, ಡಿಕೆ ಶಿವಕುಮಾರ್ ಜೀ ಸರ್ಕಾರ ನಿಮ್ಮದೇ ಇದೆ. ನೀವೂ ಯಾಕೆ ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಎಂದಿದ್ದರು. ಈ ಪ್ರಕರಣವನ್ನು ಎಸ್ಐಟಿ ತಂಡ ಸದ್ಯಕ್ಕೆ ತನಿಖೆ ನಡೆಸುತ್ತಿದೆ.
ಇನ್ನು ಶಿವಮೊಗ್ಗ ಅಖಾಡಕ್ಕೆ ಇಂದು ರಾಹುಲ್ ಗಾಂಧಿ ಬರುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಸಂಜೆ ವೇಳೆಗೆ ಶಿವಮೊಗ್ಗಕ್ಕೆ ಬರುತ್ತಾರೆ. ಪ್ರಚಾರದ ವೇಳೆಯೂ ರಾಹುಲ್ ಗಾಂಧಿ ಕೂಡ ಪೆನ್ ಡ್ರೈವ್ ವಿಚಾರವನ್ನು ಪ್ರಸ್ತಾಪ ಮಾಡುವ ಸಾಧ್ಯತೆ ಇದೆ.