ದಾವಣಗೆರೆ : ಎರಡನೇ ಹಂತದ ಚುನಾವಣೆಯ 14 ಕ್ಷೇತ್ರಗಳಲ್ಲಿ ಗ್ಯಾರೆಂಟಿ ಭರವಸೆ ಈಡೇರಿಕೆಯಿಂದ ಬದಲಾವಣೆ ಗಾಳಿ ಬೀಸುತ್ತಿದೆ. ಪ್ರಧಾನಿಗಳು ಮತ್ತು ಗೃಹ ಸಚಿವರು ರಾಜ್ಯಕ್ಕೆ ಬಂದಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತಾ ಹೇಳಿದ್ದಾರೆ. ಅವರ ಕಾಲದಲ್ಲಿ ಕ್ರಿಮಿನಲ್ ಚಟುವಟಿಕೆಗಳು ಎಷ್ಟು ಆಗಿತ್ತು ಅಂತ ಅಂಕಿ ಅಂಶ ನೀಡುವೆ. ಹಿಂದಿಗಿಂತಲೂ ಕಾನೂನು ಸುವ್ಯವಸ್ಥೆ ಈಗ ಚೆನ್ನಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಗೃಹ ಸಚಿವ ಪರಮೇಶ್ವರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಯಾವ ಮೋದಿ ಅಲೆ ಇಲ್ಲ, ಮೋದಿನೇ ಚೇಂಜ್ ಮಾಡಬೇಕು ಎಂದು ಗಾಳಿ ಬೀಸುತ್ತಿದೆ. ನಾವು ಕೊಟ್ಟ ಭರವಸೆಯನ್ನು ಈಡೇರಿಸಿದ್ದೇವೆ ಎಂದಿದ್ದಾರೆ.
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ನ ಆರೋಪಿಗಳನ್ನು ಬಹು ಬೇಗ ಹಿಡಿಯಲಾಗಿದೆ. ಎನ್ಐಎ ಮತ್ತು ಕರ್ನಾಟಕ ಪೊಲೀಸ್ ಸೇರಿ ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ರಾಜ್ಯದ ಪೊಲೀಸ್ ಪಾತ್ರ ಬಹು ದೊಡ್ಡದಿದೆ. ಹುಬ್ಬಳಿ ನೇಹಾ ಪ್ರಕರಣದಲ್ಲಿ ಒಂದು ಗಂಟೆ ಒಳಗಾಗಿ ಆರೋಪಿ ಅರೆಸ್ಟ್ ಮಾಡಲಾಗಿದೆ. ಹೆಚ್ಚಿನ ತನಿಖೆಗೆ ಸಿ ಐಡಿ ಗೆ ವಹಿಸಲಾಗಿದೆ. ರಾಜ್ಯದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆದಾಗ ಸೂಕ್ತ ಕ್ರಮ ಕೈಗೊಂಡಿದ್ದೇವೆ. ರಾಜ್ಯವನ್ನು ಡ್ರಗ್ಸ್ ಫ್ರೀ ಸೊಸೈಟಿ ಮಾಡಲು ಘೋಷಣೆ ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕೆಟ್ಟೋಗಿದೆ ಅನ್ನೋದು ಸತ್ಯಕ್ಕೆ ದೂರವಾದ ಮಾತು.
ಪ್ರಜ್ವಲ್ ರೇವಣ್ಣ ಸಂಸದರಾಗಿದ್ದವರು ರೇವಣ್ಣ ಮೇಲೆ ದೂರು ದಾಖಲಾಗಿದೆ. ಈ ಘಟನೆಯ ತನಿಖೆಗೆ ಎಸ್ ಐಟಿ ರಚಿಸಲಾಗಿದೆ. ವರದಿ ಆದಷ್ಟು ಬೇಗ ನೀಡಲು ಸೂಚನೆ ನೀಡಲಾಗಿದೆ. ಪ್ರಜ್ವಲ್ ಅವರ ಏರ್ ಟಿಕೆಟ್ ವಶ ಪಡಿಸಿಕೊಳ್ಳಲಾಗಿದೆ. ವಿದೇಶದಿಂದ ಕರೆತರಲು ಎಸ್ ಐಟಿ ಅಧಿಕಾರ ನೀಡಲಾಗಿದೆ. ಇವತ್ತು ಎಸ್ ಐ ಟಿ ಮುಂದೆ ರೇವಣ್ಣ ಹಾಜರ್ ಆಗಬೇಕಿದೆ. ತನಿಖೆ ಬಂದ ನಂತರ ಉತ್ತರ ನೀಡುತ್ತೇವೆ. ಯಾವುದೇ ಮುಲಾಜಿಲ್ಲದೆ ಯಾರನ್ನು ರಕ್ಷಣೆ ಮಾಡೋಲ್ಲ. ಕಾನೂನಿನ ಚೌಕಟ್ಟಿನಲ್ಲಿ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತೆ. ಪ್ರಕರಣ ಸಂತ್ರಸ್ತ ಮಹಿಳೆಯರಿಗೆ ಸಂಪೂರ್ಣ ರಕ್ಷಣೆ ನೀಡಲಾಗುತ್ತೆ.
ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ ಪ್ರಭಾ ಮಲ್ಲಿಕಾರ್ಜುನ್ ಹೆಚ್ಚು ಬಹುಮತದಿಂದ ಗೆಲ್ಲುತ್ತಾರೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜ್ಯ ಸರ್ಕಾರ ಹಿಂದೆ ಬಿದ್ದಿದೆ ಅಮಿತ್ ಶಾ ಹೇಳಿಕೆ ವಿಚಾರವಾಗಿ. ಅಮಿತ್ ಶಾ ಮಾಹಿತಿ ಕೊರತೆಯಿಂದ ಮಾತಾಡಿದ್ದಾರೆ. ಮಹಿಳಾ ಆಯೋಗದ ಪತ್ರ ಬಂದ ತಕ್ಷಣ ತನಿಖೆ ಮಾಡುತ್ತಿದ್ದೇವೆ ಎಂದಿದ್ದಾರೆ.