ಕಂಗನಾ ವಿವಾದ ಸೃಷ್ಟಿಸದೇ ಇರಲಾರರು ಎನಿಸುತ್ತದೆ. ಇದೀಗ ಸ್ವಾತಂತ್ರ್ಯದ ಬಗ್ಗೆ ವಿವಾದ ಸೃಷ್ಟಿಸಿದ್ದಾರೆ. 1947 ರಲ್ಲಿ ಸಿಕ್ಕಿದ್ದು ಕೇವಲ ಭಿಕ್ಷೆ, 2014 ರಲ್ಲಿ ಬಂತಲ್ಲ ಅದು ನಿಜವಾದ ಸ್ವಾತಂತ್ರ್ಯ ಎಂದು ಪರೋಕ್ಷವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದಾರೆ.
ಅವರ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಲಕ್ಷಾಂತರ ಹೋರಾಟಗಾರರ ತ್ಯಾಗ, ಬಲಿದಾನದ ಬಗ್ಗೆ ಮಾತಾಡಿದ್ದೀರಿ, ಈ ಹೇಳಿಕೆಗೆ ಹುಚ್ಚುತನ ಎನ್ನಬೇಕೋ, ದೇಶ ದ್ರೋಹವೆನ್ನಬೇಕೋ ತಿಳಿಯುತ್ತಿಲ್ಲ ಎಂದು ಹಲವರು ಪ್ರಶ್ನಿಸಿದ್ದಾರೆ.
कभी महात्मा गांधी जी के त्याग और तपस्या का अपमान, कभी उनके हत्यारे का सम्मान, और अब शहीद मंगल पाण्डेय से लेकर रानी लक्ष्मीबाई, भगत सिंह, चंद्रशेखर आज़ाद, नेताजी सुभाष चंद्र बोस और लाखों स्वतंत्रता सेनानियों की कुर्बानियों का तिरस्कार।
इस सोच को मैं पागलपन कहूँ या फिर देशद्रोह? pic.twitter.com/Gxb3xXMi2Z
— Varun Gandhi (@varungandhi80) November 11, 2021
ಅಷ್ಟೇ ಅಲ್ಲ ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆ ಪ್ರೀತಿ ಮೆನನ್ ಎಂಬುವವರು ಈ ಪೋಸ್ಟ್ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕಂಗನಾ ವಿರುದ್ಧ ದೂರು ನೀಡಿದ್ದಾರೆ.