ಹುಬ್ಬಳ್ಳಿ: ನೇಹಾ ಹೀರೇಮಠ ಕೊಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಹಳ ಗಂಭೀರವಾಗಿ ತನಿಖೆ ನಡೆಸುತ್ತಿದ್ದು, ತನಿಖೆಯನ್ನು ಚುರುಕುಗೊಳಿಸಿದೆ. ರಾಜ್ಯ ಸರ್ಕಾರ ಕೂಡ ನೇಹಾ ಕೇಸನ್ನು ಸಿಐಡಿಗೆ ಒಪ್ಪಿಸಿದೆ. ಎಲ್ಲಾ ರೀತಿಯಿಂದಾನೂ ತಪಾಸಣೆ ನಡೆಯುತ್ತಿದೆ.
ಇಂದು ಆರೋಪಿಯ ರಕ್ತದ ಮಾದರಿಯನ್ನು ತೆಗೆದುಕೊಂಡ ಅಧಿಕಾರಿಗಳು ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದಾರೆ. ಫಯಾಜ್ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಿಸಲು ಅಧಿಕಾರಿಗಳು ನಿಮ್ನೆಯೇ ಕೋರ್ಟ್ ಅನುಮತಿ ಕೋರಿದ್ದರು. ಅದರಂತೆ ಇಂದು ರಕ್ತದ ಮಾದರಿ ಪಡೆದು, ಪರೀಕ್ಷೆಗೆ ಕಳುಹಿಸಿದ್ದಾರೆ. ಒಂದನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪಿಯನ್ನ ಕರೆತಂದ ಅಧಿಕಾರಿಗಳು ನ್ಯಾಯಾಧೀಶರ ಸಮ್ಮುಖದಲ್ಲಿ ರಕ್ತದ ಮಾದರಿ ಸಂಗ್ರಹಿಸಿದರು. ಬಳಿಕ ನ್ಯಾಯಾಧೀಶರ ಸಮ್ಮುಖದಲ್ಲಿ ಕಿಮ್ಸ್ ವೈದ್ಯರು ಫಯಾಜ್‌ನಿಂದ ರಕ್ತದ ಮಾದರಿ ಪಡೆದ ಬಳಿಕ ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದ್ದಾರೆ. ರಕ್ತದ ಮಾದರಿ ಪಡೆದ ಬಳಿಕ ಫಯಾಜ್ ನನ್ನು ಸಿಐಡಿ ಅಧಿಕಾರಿಗಳು ಮತ್ತೆ ರಹಸ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಕೊಲೆಯ ವಿಚಾರದಲ್ಲಿ ಡಿಎನ್ಎ ಪರೀಕ್ಷೆ ಯಾಕೆ ನಡೆಸುತ್ತಾರೆ ಗೊತ್ತಾ..? ನೇಹಾ ಹೀರೇಮಠ ವಿಚಾರದಲ್ಲಿ ಈಗಾಗಲೇ ಎಲ್ಲಾ ಆಯಾಮದಿಂದಾನೂ ತಪಾಸಣೆ ನಡೆಸಲಾಗುತ್ತಿದೆ. ಕೊಲೆಯಾದ ಜಾಗದಲ್ಲಿ ಮಹಜರು ಕೂಡ ಮಾಡಲಾಗಿದೆ. ಅಲ್ಲಿ ಸಿಕ್ಕಿರುವಂತ ಕೂದಲು ಅಥವಾ ಬೇರೆ ಯಾವುದಾದರೂ ವಸ್ತುಗಳು ಸಿಕ್ಕಲ್ಲಿ, ಅದು ಫಯಾಜ್ ದೇನಾ ಎಂಬ ಆಯಾಮದಲ್ಲಿ ಪರೀಕ್ಷೆ ನಡೆಸಲು ಡಿಎನ್ಎ ಟೆಸ್ಟ್ ಮಾಡಿಸಲಾಗುತ್ತದೆ. ಆ ವಸ್ತುಗು ಫಯಾಜ್ ಗೂ ಹೋಲಿಕೆ ಮಾಡಲಾಗುತ್ತದೆ. ಹೀಗಾಗಿ ಡಿಎನ್ಎ ಪರೀಕ್ಷೆ ಮಾಡುವುದಕ್ಕೆ ರಕ್ತ ಸಂಗ್ರಹಣೆ ಮಾಡಿದ್ದಾರೆ. ಸದ್ಯ ಫಯಾಜ್ ನನ್ನು ರಹಸ್ಯ ಸ್ಥಳದಲ್ಲಿಯೇ ಇರಿಸಿ ವಿಚಾರಣೆ ನಡೆಸಲಾಗುತ್ತಿದೆ.