Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಖುಷಿಯಿಂದ ಕ್ಷೇತ್ರದ ಜನರ ಸೇವೆ ಸಲ್ಲಿಸುತ್ತೇನೆ : ಗೋವಿಂದ ಕಾರಜೋಳ

---Advertisement---

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 27 ; ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಪ್ಪತ್ತು ವರ್ಷಗಳಾಗಿದ್ದರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಇಲ್ಲಿನ ಜನ ಮುಗ್ದರು ಅಮಾಯಕರು, ಕುಡಿಯುವ ನೀರಿಗೂ ಸಮಸ್ಯೆಯಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದರು.

 

ಲೋಕಸಭೆ ಚುನಾವಣೆಯ ಮತದಾನ ಮುಗಿದ ಮರುದಿನ ಶನಿವಾರ ಚಾಲುಕ್ಯ ಹೋಟೆಲ್‍ನಲ್ಲಿ ಚಹ ಸೇವಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭೆ ಹಾಗೂ ಶಿರಾ ಪಾವಗಡ ಸೇರಿದಂತೆ ಮೂರು ಸಾವಿರದ ಹಳ್ಳಿಗಳಿಗೆ ಸುತ್ತಾಡಿ ಮತಯಾಚಿಸಲು ಸಮಯ ಸಾಕಾಗಲಿಲ್ಲ. ಎಷ್ಟು ಸಾಧ್ಯವೋ ಅಷ್ಟು ಕಡೆ ಮತದಾರರನ್ನು ಭೇಟಿ ಮಾಡಿ ಮತ ಕೇಳಿದ್ದೇನೆ. ಗೆಲ್ಲಿಸಿ ಪಾರ್ಲಿಮೆಂಟ್‍ಗೆ ಕಳಿಸಿಕೊಟ್ಟರೆ ಖುಷಿಯಿಂದ ಕ್ಷೇತ್ರದ ಜನರ ಸೇವೆ ಸಲ್ಲಿಸುತ್ತೇನೆಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿರುವ ಜನ ದೇಶ ಸುಭದ್ರವಾಗಿರಬೇಕಾದರೆ ಯಾರ ಕೈಗೆ ಅಧಿಕಾರ ಕೊಡಬೇಕು. ಯಾರು ಈ ದೇಶದ ಪ್ರಧಾನಿಯಾಗಬೇಕೆಂಬ ಜಾಗೃತಿ ಕ್ಷೇತ್ರದ ಮತದಾರರಲ್ಲಿ ಮೂಡಿರುವುದು ಅತ್ಯಂತ ಸಂತೋಷದ ಸಂಗತಿ. ಈ ನಿಟ್ಟಿನಲ್ಲಿ ಜನ ಯೋಚಿಸಿ ಮತದಾನ ಮಾಡಿದ್ದಾರೆಂಬ ನಂಬಿಕೆಯಿದೆ. ಚುನಾವಣೆಯಲ್ಲಿ ಮಾತ್ರ ಪಕ್ಷದಿಂದ ಸ್ಪರ್ಧಿಸಿ ರಾಜಕೀಯ ಮಾಡುವುದು ಅನಿವಾರ್ಯ ಮತದಾನ ಮುಗಿದ ನಂತರ ನಾನು ಕ್ಷೇತ್ರದ ಹದಿನೆಂಟುವರೆ ಲಕ್ಷ ಮತದಾರರ ಜನಪ್ರತಿನಿಧಿ. ಯಾವುದೇ ತಾರತಮ್ಯವಿಲ್ಲದೆ ನಿಸ್ಪಕ್ಷಪಾತವಾಗಿ ಎಲ್ಲರ ಸೇವೆ ಮಾಡಲು ಸಿದ್ದ ಎಂದು ತಿಳಿಸಿದರು.

ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...