Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಮತದಾನಕ್ಕೂ ಮುನ್ನ ಅರ್ಥ ಪೂರ್ಣ ಟ್ವೀಟ್ ಮಾಡಿದ ಸುಮಲತಾ : ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

---Advertisement---

 

ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ದಿನ ಬೆಳಗಾಗುವುದರೊಳಗೆ ಚುನಾವಣೆ ಬರಲಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದಾನೆ ಮತದಾನ ಆರಂಭವಾಗಲಿದೆ. ಹದಿನಾಲ್ಕು ಕ್ಷೇತ್ರಗಳಿಗೆ ಚುನಾವಣೆ ಮಡೆಯಲಿದ್ದು, ಭದ್ರತೆಯೂ ಸಿದ್ಧವಾಗಿದೆ. ಈ ಬಾರಿಯ ಚುನಾವಣೆಯಲ್ಲೂ ಮಂಡ್ಯ ಗಮನ ಸೆಳೆದಿದೆ.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗೆಲುವು ಕಂಡಿದ್ದ ಸುಮಲತಾ ಬಿಜೆಪಿ ಸೇರಿದ ಮೇಲೆ ಟಿಕೆಟ್ ಸಿಗಲಿಲ್ಲ. ಯಾರನ್ನು ವಿರೋಧಿಗಳು ಎಂದುಕೊಂಡಿದ್ದರೋ ಅವರೇ ಸ್ಪರ್ಧೆಗೆ ನಿಂತಿದ್ದಾರೆ. ಹೀಗಾಗಿ ಸುಮಲತಾಗೆ ಮನಸ್ಸಲ್ಲೆ ಬೇಸರವಿದೆ. ಕುಮಾರಸ್ವಾಮಿ ಅವರ ಪರ ಪ್ರಚಾರಕ್ಕೂ ಕೂಡ ಹೋಗಿಲ್ಲ.

 

ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ಸಹ ಸುಮಲತಾಗೆ ಸಪೋರ್ಟ್ ಮಾಡಿದ್ದರು. ದರ್ಶನ್ ಹಾಗೂ ಯಶ್ ಪ್ರಚಾರವೇ ದೊಡ್ಡ ಶಕ್ತಿಯಾಗಿತ್ತು. ಆದರೆ ಈ ಬಾರಿ ದರ್ಶನ್ ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರ ಮಾಡಿದ್ದಾರೆ. ಬಿಜೆಪಿಯ ನಾಯಕರು ಅಷ್ಟಾಗಿ ಬೆಂಬಲ‌ ನೀಡಿಲ್ಲ. ಇದರ ನಡುವೆ ಸುನಲತಾ ಮಾಡಿರುವ ಟ್ವೀಟ್ ಒಂದು ಗಮನ ಸೆಳೆಯುತ್ತಿದೆ. ಅದಕ್ಕೆ ತರಹೇವಾರಿ ಕಮೆಂಟ್ ಗಳು ಬರುತ್ತಿವೆ.

‘ಏನು ಹೇಳಬೇಕೆನ್ನುವುದು ಜ್ಞಾನ,
ಹೇಗೆ ಹೇಳಬೇಕೆನ್ನುವುದು ವ್ಯಕ್ತಿತ್ವ,
ಎಷ್ಟು ಹೇಳಬೇಕೆನ್ನುವುದು ಕೌಶಲ್ಯ,
ಹೇಳಬೇಕೋ ಬೇಡವೋ ಎನ್ನುವುದು ವಿವೇಕ’

ಎಂದು ಸುಮಲತಾ ಟ್ವೀಟ್ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು, ಅಕ್ಕ ನಿನ್ನ ವೋಟು ತಮ್ಮನಿಗೋ, ಸ್ಟಾರ್ ಗೋ ಎಂದು ಪ್ರಶ್ನಿಸಿದ್ದಾರೆ. ಇನ್ನು ಹಲವರು ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಹೇಳಿದ್ದಾರೆ. ಗಂಡನ ಪಾರ್ಟಿ ಬಿಟ್ಟು ಕೋಮುವಾದಿ ಪಾರ್ಟಿ ಸೇರಿದವರು ಅವಿವೇಕಿ ಅಂತೆಲ್ಲಾ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...