ನಿಡುಗಲ್ಲು ಮಠಕ್ಕೆ ಕಾಂಗ್ರೆಸ್ ಅಭ್ಯರ್ಥಿ ಭೇಟಿ | ಬಿ.ಎನ್.ಚಂದ್ರಪ್ಪ ಗೆಲುವಿಗೆ ವಾಲ್ಮೀಕಿ ಶ್ರೀ ಕರೆ

1 Min Read

 

ಚಿತ್ರದುರ್ಗ, ಏ.24 : ರಾಜ್ಯದಲ್ಲಿಯೇ ಪ್ರಭಾವಿ, ಪ್ರಸಿದ್ಧಿ ಪಡೆದಿರುವ ವಾಲ್ಮೀಕಿ ಸಮುದಾಯದ ಮಠವು, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದೆ.

ಕ್ಷೇತ್ರ ವ್ಯಾಪ್ತಿಯ ಪಾವಗಡ ತಾಲೂಕಿನಲ್ಲಿನ ನಿಡುಗಲ್ಲು ಮಹಾಸಂಸ್ಥಾನಕ್ಕೆ ನೂರಾರು ವಾಲ್ಮೀಕಿ ಸಮುದಾಯದ ಮುಖಂಡರ ಜೊತೆ ಬಿ.ಎನ್.ಚಂದ್ರಪ್ಪ ಬುಧವಾರ ಭೇಟಿ ನೀಡಿದ್ದ ಸಂದರ್ಭ ಮಠದ ಜಗದ್ಗುರು ಶ್ರೀ ವಾಲ್ಮಿಕಿ ಸಂಜಯ ಕುಮಾರ ಸ್ವಾಮೀಜಿ ಆಶೀರ್ವದಿಸಿ ಮಾತನಾಡಿದರು.

ನಾವು ಸರಳ, ಸಜ್ಜನಿಕೆ, ಜನರ ಜೊತೆ ನಿರಂತರ ಒಡನಾಟ ಹೊಂದಿರುವವರು, ಧಾರ್ಮಿಕ ಕ್ಷೇತ್ರವನ್ನು ಗೌರವಿಸುವಂತಹವರು ರಾಜಕೀಯ ಕ್ಷೇತ್ರದಲ್ಲಿ ಇರಬೇಕೆಂದು ಅಪೇಕ್ಷೆ ಪಡುತ್ತೇವೆ. ಅದರಲ್ಲೂ ಚಂದ್ರಪ್ಪ ಅವರಂತಹ ಸಜ್ಜನರ ಗೆಲುವು ಅಗತ್ಯವಾಗಿದೆ ಎಂದರು.

ವಾಲ್ಮಿಕಿ ಸಮುದಾಯದ ಹಿರಿಯ ನಾಯಕ, ಸಚಿವ ಎನ್. ರಾಜಣ್ಣ ಹಾಗೂ ನೂರಾರು ಮುಖಂಡರು ಚಂದ್ರಪ್ಪ ಅವರನ್ನು ಗೆಲ್ಲಿಸಲು ಶ್ರಮಿಸುತ್ತಿರುವ ವಿಷಯ ನಮ್ಮ ಗಮನಕ್ಕೆ ಇದೆ. ನಾವು ಕೂಡ ನೀವು ಗೆಲ್ಲಬೇಕೆಂದು ಆಶೀರ್ವದಿಸುತ್ತೇವೆ. ಕ್ಷೇತ್ರದ ಪ್ರಜ್ಞಾವಂತ ಮತದಾರರು ಹೃದಯವಂತ, ಸಜ್ಜನಿಕೆ ರಾಜಕಾರಣಿ ಚಂದ್ರಪ್ಪ ಅವರನ್ನು ತಮ್ಮ ಮನೆಯ ಮಗನೆಂದು ಭಾವಿಸಿ ಅವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.

ನಾಡಿಮ ಮಠ, ಮಾನ್ಯಗಳು ಹಾಗೂ ಜನರ ಕುರಿತು ಹೆಚ್ಚು ಗೌರವ ಭಾವನೆ ಹೊಂದಿರುವ ವಿನಯವಂತಿಕೆಯ ಚಂದ್ರಪ್ಪ ಪ್ರಜಾಪ್ರಭುತ್ವ ರಕ್ಷಣೆಗೆ ಬದ್ಧರಾಗಿದ್ದಾರೆ. ಆದ್ದರಿಂದ ಅವರ ಗೆಲ್ಲಬೇಕು. ಈ ನಿಟ್ಟಿನಲ್ಲಿ ಮತದಾರರು ಅವರನ್ನು ಆಶೀರ್ವದಿಸಬೇಕೆಂದು ಕೋರುತ್ತೇವೆ ಎಂದರು.
ವಾಲ್ಮೀಕಿ ಸಮುದಾಯದ ಮುಖಂಡರಾದ ರಾಮಾಂಜನೇಯ, ರಾಜೇಶ್, ರವಿ, ಚಂದ್ರು ಇತರರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *