Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಾ.ರಾಜ್ 95ನೇ ಹುಟ್ಟುಹಬ್ಬ : ಸಮಾಧಿಗೆ ಪೂಜೆ ಸಲ್ಲಿಸಿದ ರಾಘಣ್ಣ, ಅಶ್ವಿನಿ, ವಂದಿತಾ

---Advertisement---

ಬೆಂಗಳೂರು: ಇಂದು ವರನಟ ಡಾ.ರಾಜ್ ಕುಮಾರ್ ಅವರ 95ನೇ ವರ್ಷದ ಹುಟ್ಟುಹಬ್ಬ. ಅವರ ಅಭಿಮಾನಿಗಳು ರಾಜ್ಯಾದ್ಯಂತ ಈ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ಅಣ್ಣಾವ್ರ ಹುಟ್ಟುಹಬ್ಬವನ್ನು ಸಾರ್ಥಕ ಮಾಡುತ್ತಿದ್ದಾರೆ. ಅವರ ಅಭಿಮಾನಿಗಳಿಂದ ಪ್ರತಿ ವರ್ಷದಂತೆ ರಜ್ತದಾನ, ಅನ್ನದಾನದಂತ ಕೆಲಸಗಳು ನಡೆದಿವೆ.

ಇನ್ನು ಅಣ್ಣಾವ್ರ ಸಮಾಧಿಗೆ ರಾಜ್ ಕುಟುಂಬ ಬಂದು ಪೂಜೆ ಸಲ್ಲಿಸಿದೆ. ಕಂಠೀರವ ಸ್ಟುಡಿಯೋದಲ್ಲಿ ರಾಘವೇಂದ್ರ ರಾಜ್ ಕುಮಾರ್, ಮಂಗಳಾ ರಾಘವೇಂದ್ರ, ಲಕ್ಷ್ಮೀ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್‍ಕುಮಾರ್, ವಂದಿತಾ ಪುನೀತ್ ರಾಜ್‍ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್‍ಕುಮಾರ್, ಇವತ್ತು ಸ್ವಾತಿ ನಕ್ಷತ್ರ. ಅಪ್ಪಾಜಿ ಹುಟ್ಟಿದ ದಿನವೂ ಇದೇ ಆಗಿತ್ತು. ಹಿಂದೂ ಕ್ಯಾಲೆಂಡರ್ ಪ್ರಕಾರ ಅಪ್ಪಾಜಿ ನಿನ್ನೆ ಹುಟ್ಟಿದ್ದು. ಎಷ್ಟೋ ವರ್ಷಕ್ಕೆ ಒಮ್ಮೆ ಬರುವ ಅಪರೂಪದ ದಿನವಿದು. ಅಭಿಮಾನಿಗಳ ಪ್ರೀತಿನೇ ಇಂದು ನಮ್ಮನ್ನು ಉಳಿಸಿರುವುದು. ಜನರ ಜೈಕಾರಕ್ಕೆ ಅಪ್ಪಾಜಿ ಖುಷಿ ಪಡುತ್ತಾ ಇದ್ದರು‌. ಡಾಕ್ಟರ್ ರಾಜ್ ಕುಮಾರ್ ಎಂದರೆ ಅಪ್ಪಾಜಿಗೆ ಸಿಕ್ಕಾಪಟ್ಟೆ ಖುಷಿ. ಅಪ್ಪಾಜಿ ಅವರ ಆಶೀರ್ವಾದ ಎಲ್ಲರ ಮೇಲಿದೆ. ಅಪ್ಪಾಜಿ ಇಲ್ಲ ಅನ್ನೋಕೆ ಕಾತಣವೇ ಇಲ್ಲ. ಅವರ ಫೋಟೋ ನೋಡಿನೆ ನಾನು ದಿನ ಶುರು ಮಾಡುವುದು. ಎಲ್ಲರನ್ನು ಅಪ್ಪಾಜಿ ಮಳೆ ಬೆಳೆ ಬಗ್ಗೆ ಕೇಳುತ್ತಾ ಇದ್ದರು. ಈಗ ಮಳೆ ಆಗಲೇಬೇಕು ಎಂದು ಅಣ್ಣಾವ್ರ ಆ ದಿನಗಳನ್ನು ರಾಘವೇಂದ್ರ ರಾಜ್ ಕುಮಾರ್‌ ನೆನೆದಿದ್ದಾರೆ. ಅಭಿಮಾನಿಗಳೆಲ್ಲ ಸೇರಿ ಅಣ್ಣಾವ್ರ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ‌.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment