ಲೋಕಸಭಾ ಚುನಾವಣೆಯ ಬಳಿಕ ಡಿಕೆಶಿ ಸಿಎಂ : ಯತ್ನಾಳ್ ಈ ಭವಿಷ್ಯ ನುಡಿದಿದ್ದೇಕೆ..?

suddionenews
1 Min Read

ವಿಜಯಪುರ: ಕಾಂಗ್ರೆಸ್ ನಲ್ಲಿ ಸಿಎಂ ವಿಚಾರವೇ ಸಾಕಷ್ಟು ಸಲ ಚರ್ಚೆಗೆ ಗ್ರಾಸವಾಗಿದೆ. ಆರಂಭದಲ್ಲಿಯೇ ಸಿಎಂ ಸ್ಥಾನದ ಪೈಪೋಟಿ ನಡೆದಿತ್ತು. ಬಳಿಕ ಹೈಕಮಾಂಡ್ ಡಿಕೆಶಿ ಮನವೊಲಿಸಿದೆ. ಲೋಕಸಭೆ ಚುನಾವಣೆಯ ಬಳಿಕ ಸಿಎಂ ಸ್ಥಾನ ಬದಲಾವಣೆಯಾಗುತ್ತದೆ ಎಂದೇ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಅದರಲ್ಲೂ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿಯೇ‌ ಇರಲ್ಲ ಎಂದು ಬಿಜೆಪಿ ನಾಯಕರು ಪದೇ ಪದೇ ಹೇಳುತ್ತಿದ್ದಾರೆ. ಇದರ ನಡುವೆ ಇದೀಗ ಬಸನಗೌಡ ಪಾಟೀಲ್ ಯತ್ನಾಳ್ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.

ಲೋಕಸಭಾ ಚುನಾವಣೆಯ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ತಮ್ಮ ಪರವಾಗಿರುವವರನ್ನು ಆಯ್ಕೆ ಮಾಡಿಕೊಂಡು ಡಿಕೆಶಿ ಸಿಎಂ ಆಗುವುದಕ್ಕೆ ಮುಂದಾಗಿದ್ದಾರೆ. ಅದಕ್ಕೆಂದೆ ಲಿಂಗಾಯತರು, ಒಕ್ಕಲಿಗರು ಒಂದೇ ಎನ್ನುವ ಸಂದೇಶ ಕೊಡುವುದಕ್ಕೆ ವಚಾನನಂದ ಸ್ವಾಮೀಜಿಗಳು ಮುಂದಾಗಿದ್ದಾರೆ. ಅದಕ್ಕಾಗಿಯೇ ಬಾಗಲಕೋಟೆಯಿಂದ ಶಿವಾನಂದ ಪಾಟೀಲ್ ರ ಮಗಳನ‌್ನು ಆರಿಸಿ, ಕಳುಹಿಸಿ, ಶಿವಾನಂದ ಪಾಟೀಲರು ನನ್ನ ಜೊತೆಗೆ ಚೆನ್ನಾಗಿದ್ದಾರೆ. ಡಿಕೆಶಿ ಹಾಗೂ ಪಾಟೀಲ್ ಸೇರಿ ಸಿದ್ದರಾಮಯ್ಯರನ್ನು ಕೆಳಗಿಳಿಸುವ ಕಾರ್ಯತಂತ್ರ ರೂಪಿಸಿದ್ದಾರೆ.

 

ಸಿದ್ದರಾಮಯ್ಯ ತಮ್ಮ ಶಕ್ತಿ ಪ್ರದರ್ಶನ ಮಾಡದಿದ್ದರೆ ಸಿಎಂ ಹುದ್ದೆ ಹೋಗುವುದು ಗ್ಯಾರಂಟಿ ಎಂದು ಭವಿಷ್ಯ ಕೂಡ ನುಡಿದು, ಐದು ಗ್ಯಾರಂಟಿಗಳ ಜೊತೆಯೂ ಇದು ಒಂದು ಗ್ಯಾರಂಟಿ ಎಂದು ಹೇಳಿದರು. ಸಚಿವ ಶಿವಾನಂದ ಪಾಟೀಲ್, ಧಾರವಾಡದ ಕೆಲ ಶಾಸಕರು, ಬೆಳಗಾವಿಯ ಲೋಕಸಭಾ ಅಭ್ಯರ್ಥಿ ಸೇರಿದಂತೆ ಇತರ ಬೆಂಬಲಿಗರನ್ನು ಸೋಲಿಸದಿದ್ದರೆ ಸಿದ್ದರಾಮಯ್ಯ ಖುರ್ಚಿ ಹೋಗೋದು ಗ್ಯಾರಂಟಿ ಎಂದರು.

Share This Article
Leave a Comment

Leave a Reply

Your email address will not be published. Required fields are marked *